ವಿಧಾನ ಪರಿಷತ್ ಚುನಾವಣೆ : ಅಭ್ಯರ್ಥಿಗಳ ಚಿತ್ತ ಫಲಿತಾಂಶದತ್ತ

ಬೆಂಗಳೂರು : ಕರ್ನಾಟಕ ವಿಧಾನ ಪರಿಷತ್​ನಲ್ಲಿ ಮೂರು ತಿಂಗಳಿನಿಂದ ತೆರವಾಗಿರುವ ಎರಡು ಪದವೀಧರ ಹಾಗೂ ಎರಡು ಶಿಕ್ಷಕ ಕ್ಷೇತ್ರಗಳು ಸೇರಿ ನಾಲ್ಕು ಸ್ಥಾನಗಳಿಗೆ ಅಕ್ಟೋಬರ್ 28ರಂದು ಮತದಾನ ಪೂರ್ಣಗೊಂಡಿದೆ.

ಮಾರಕ ಕೊರೋನಾ ವೈರಾಣುವಿನ ಹಿನ್ನಲೆಯಲ್ಲಿ ಮೊದಲ ಬಾರಿ ನಡೆಯುತ್ತಿರುವ ಚುನಾವಣೆಯು ಇದಾಗಿದೆ. ವಿಧಾನ ಪರಿಷತ್ ನ ನಾಲ್ಕು ಸ್ಥಾನಗಳಿಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮತದಾನ ಮುಗಿದಿದ್ದು ಎಲ್ಲರ ಗಮನ ಈಗ ಫಲಿತಾಂಶದ ಕಡೆ ತಿರುಗಿದೆ.

ವಿಧಾನ ಪರಿಷತ್ ನ ಬೆಂಗಳೂರು ಶಿಕ್ಷಕರ  ಕ್ಷೇತ್ರ, ಪಶ್ಚಿಮ ಪದವೀಧರರ ಕ್ಷೇತ್ರ, ಆಗ್ನೆಯ ಪದವೀಧರರ ಕ್ಷೇತ್ರ, ಈಶ್ಯಾನ್ಯ ಶಿಕ್ಷಕರ ಕ್ಷೇತ್ರ ಈ ನಾಲ್ಕು ಕ್ಷೇತ್ರಗಳಿಗೆ ಮತದಾನ ನಡೆದಿದ್ದು ಒಟ್ಟಾರೆ ಶೇ. 70 ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಈ ಉಪಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನಾಯಕರು ಭರ್ಜರಿಯಾಗಿ ಮತಪ್ರಚಾರ ನಡೆಸಿದ್ದು, ಈಗಾಗಲೇ ಹಲವು ಬಾರಿ ಗೆಲುವು ಸಾಧಿಸಿದ್ದ ನಾಯಕರು ಮತ್ತೊಮ್ಮೆಗೆಲ್ಲುವ ಮೂಲಕ ನಾಗಲೋಟದ ಕನಸಿನಲ್ಲಿದ್ದರೆ ಇನ್ನೊಂದು ಕಡೆ ಪಕ್ಷೇತರ ಅಭ್ಯರ್ಥಿಗಳು ಮೊದಲ ಬಾರಿಗೆ ವಿಧಾನ ಪರಿಷತ್ ಪ್ರವೇಶಿಸುವ ಕನಸಿನಲ್ಲಿದ್ದಾರೆ. ಹಾಗಾದರೆ ಈ ಬಾರಿಯ ನಾಲ್ಕು ಕ್ಷೇತ್ರದ ಚುನಾವಣೆಯಲ್ಲಿ ವಿಧಾನ ಪರಿಷತ್ ನ ಗದ್ದುಗೆಯು ಯಾರ ಪಾಲಾಗಲಿದೆ ಎಂದು ನವೆಂಬರ್ 2ರ ವರೆಗೆ ಕಾದು ನೋಡಬೇಕಿದೆ.

 

 

Donate Janashakthi Media

Leave a Reply

Your email address will not be published. Required fields are marked *