ಬ್ರಿಟಿಷರ ಕಾಲಿಗೆ ಬಿದ್ದ ಸಾವರ್ಕರ್‌ ದೇಶಭಕ್ತನಾಗಲು ಸಾಧ್ಯವೆ? – ಮೀನಾಕ್ಷಿ ಬಾಳಿ

ಬೆಂಗಳೂರು :  ಸಾವರ್ಕರ್ ಏಳು ಸುಳ್ಳುಗಳ ಬಗ್ಗೆ ಈ ಪುಸ್ತಕ ಸಾಕ್ಷೀಕರಿಸುತ್ತದೆ. ಇತ ದೇಶಭಕ್ತ ಅಲ್ಲ ಎಂಬ ಅಂಶವನ್ನು ರುಜುವಾತ ಮಾಡಿದ ಪುಸ್ತಕ ಇದಾಗಿದೆ ಎಂದು ಡಾ. ಮೀನಾಕ್ಷಿ ಬಾಳಿ ಹೇಳಿದಿರು. ಸಾವರ್ಕರ್‌

ಕ್ರಿಯಾ ಮಾಧ್ಯಮ ಆಯೋಜಿಸಿದ್ದ ‘ವಿ.ಡಿ ಸಾವರ್ಕರ್‌ – ಏಳು ಮಿಥ್ಯೆಗಳು’ ಪುಸ್ತಕ ಬಿಡುಗಡೆ ಮತ್ತು ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡುತ್ತಾ, ನಿಮ್ಮ ಕಾಲ ಬೀಳ್ತಿನಿ, ನನ್ನ ಬಿಟ್ಟ ಬಿಡ್ರಿ ಎಂದಿದ್ದು ಇದೇ ಸಾವರ್ಕರ್, ಗಾಂಧಿ ಹತ್ಯೆಯಲ್ಲಿ ಸಾವರ್ಕರ್ ಭಾಗಿಯಾಗಿದ್ದ ಎಂಬುದಕ್ಕೆ ಈ ಪುಸ್ತಕ ದಾಖಲೆಗಳನ್ನು ನೀಡುತ್ತಿದೆ. ಚಾತುರ್ವಣವನ್ನು ಒಪ್ಪಿದ್ದ ಈತ, ಅಸ್ಪೃಶ್ಯತೆ ವಿರುದ್ಧ ಹೋರಾಡಿದ್ದ ಎಂಬುದು ಹಸಿ ಸುಳ್ಳಾಗಿದೆ.

ಬ್ರಿಟಿಷರ ವಿರುದ್ಧ ಹೋರಾಡಿದ್ದ ಎಂಬುದೆಲ್ಲ ಸುಳ್ಳು 1911ರಲ್ಲಿ ಜೈಲು ಸೇರಿದ ಆತ, ಬ್ರಿಟಿಷರ ನಿಷ್ಟಾವಂತನಾಗಿ ಎರಡೇ ವಾರದಲ್ಲಿ ಕ್ಷಮೆ ಕೋರಿ ಪತ್ರ ಬರೆದಿದ್ದ.  ಇತನ ಸುಳ್ಳುಗಳನ್ನು ವೈಭವೀಕರಿಸುವ ಕೆಲಸಗಳಾಗುತ್ತಿವೆ. ಇತ ಬುಲ್‌ ಬುಲ್‌ ಹಕ್ಕಿಯ ಮೇಲೆ ಓಡಾಡುತ್ತಿದ್ದ ಎಂದೆಲ್ಲ ಸೂಲಿಬೆಲೆ ಚಕ್ರವರ್ತಿಯಂತವರು ಹಸಿ ಹಸಿಯಾಗಿ ಸುಳ್ಳು ಹೇಳಿ, ಯುವಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡಿದ್ದ, ಹಾಗಾಗಿ ತರುಣರ ನಡುವೆ ಈ ಸತ್ಯಗಳನ್ನು ಕೊಂಡೊಯ್ಯಬೇಕಿದೆ. ಅವರ ನಡುವೆ ಈ ಪುಸ್ತಕಗಳನ್ನು ಚರ್ಚೆಗೆ ಹಚ್ಚಬೇಕಿದೆ. ಕೃತಿಯ ಮೂಲ ಲೇಖಕರು, ಕನ್ನಡಕ್ಕೆ ಅನುವಾದಿಸಿದ ಅನುವಾದಕರ ಆಶಯವನ್ನು ಯುವ ಜನರ ನಡುವೆ ಹಂಚಬೇಕಿದೆ ಎಂದರು.

ಅನುವಾದಕ ಟಿ ಸುರೇಂದ್ರರಾವ್‌ ಮಾತನಾಡಿ, ಎರಡ್ಮೂರು ವರ್ಷದ ಹಿಂದೆ ಯಲಹಂಕದ ಫ್ಲೈ ಓವರ್ ಗೆ ʻವೀರʻ ಸಾವರ್ಕರ್ ಎಂಬ ಹೆಸರನ್ನು ಆಗಿದ್ದ ಬಿಜೆಪಿ ಸರ್ಕಾರ ಇಟ್ಟಿತ್ತು. ಇದಕ್ಕೆ ತುಂಬಾ ವಿರೋಧ ವ್ಯಕ್ತವಾಗಿತ್ತು.  ಆತ ಸ್ವಾತಂತ್ರ್ಯ ಹೋರಾಟಗಾರ ಅದಕ್ಕೆ ಆತನ ಹೆಸರಿಟ್ಟಿದ್ದೇವೆ ಅಂತ ಸರ್ಕಾರ ಸಮರ್ಥನೆ ಮಾಡಿಕೊಂಡಿತ್ತು. ಆತ ಕರ್ನಾಟಕದವನೇ ಅಲ್ಲ. ಸ್ವಾತಂತ್ರ್ಯ ಹೋರಾಟಗಾರರ ಹೆಸರನ್ನೇ ಇಡಬೇಕಿದ್ದರೆ ಕರ್ನಾಟಕದ ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣರಂತವರ ಹೆಸರಿಡಬಹುದಿತ್ತು, ಹಾಗಾಗಿ ಸಾವರ್ಕರ್ ಕುರಿತು ಇರುವ ವಾದಗಳು ಎಷ್ಟು ಸತ್ಯ, ಎಷ್ಟು ಸುಳ್ಳು ಎಂಬುದನ್ನು ತಿಳಿಸಬೇಕು ಅನಿಸಿತು. ಆಗ ನನ್ನ ಕಣ್ಣಿಗೆ ಬಿದ್ದದ್ದು ಶಂಸುಲ್ ಇಸ್ಲಾಂ ಅವರ ಕೃತಿ ಹಾಗಾಗಿ ಅದನ್ನು ಕನ್ನಡಕ್ಕೆ ಅನುವಾದಿಸಿದೆ ಎಂದರು. ಸಾವರ್ಕರ್‌

ಇದನ್ನೂ ಓದಿಸಾವರ್ಕರ್ ಕುರಿತ ಏಳು ಮಿಥ್ಯೆಗಳನ್ನು ಬಯಲುಗೊಳಿಸುವ ಕೃತಿ ನಾಳೆ ಬಿಡುಗಡೆ

ಪುಸ್ತಕ ಬಿಡುಗಡೆ ನಂತರ ನಡೆದ ” “ಮತೀಯ ಪ್ರಭುತ್ವ ಮತ್ತು ಸೆಕ್ಯೂಲರ್ ಪ್ರಜಾಪ್ರಭುತ್ವ ” ವಿಷಯದ ಕುರಿತು ವಿಚಾರಸಂಕಿರಣ ಕಾರ್ಯಕ್ರಮ ನಡೆಯಿತು. ಡಾ. ಶಂಸುಲ್‌ ಇಸ್ಲಾಂ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಮನುಸ್ಮೃತಿಯ ಆಚರಿಸುತ್ತಿರುವ ಜನರಿಂದ ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಬ್ರಿಟಿಶ್ ಆಳರಸರ ಕ್ಷಮೆಕೋರಿ, ತನ್ನನ್ನು ಬಿಡುಗಡೆ ಮಾಡಬೇಕು ಎಂದು ಒಂದಲ್ಲ, ಎರಡಲ್ಲ, ಐದು ಕ್ಷಮಾಪತ್ರಗಳನ್ನು ಬರೆದಿದ್ದ ಸಾವರ್ಕರ್‌ ನಂತವರನ್ನು ಬಳಸಿಕೊಂಡು ಸುಳ್ಳುಗಳ ಮೂಲಕ ಜನರ ದಿಕ್ಕನ್ನು ತಪ್ಪಿಸುತ್ತಿದ್ದಾರೆ ಎಂದರು.

ಕಾಂಗ್ರೆಸ್‌ ನಾಯಕ ಬಿ.ಕೆ ಹರಿಪ್ರಸಾದ್‌ ಮಾತನಾಡಿ,  ಆರ್‌ಎಸ್‌ಎಸ್‌ ಸಂಸ್ಥಾಪಕ ಹೆಗಡೆವಾರ್‌ಗೆ ಸಾವರ್ಕರ್‌ ಪ್ರೇರಣೆ. ಅವರೆಲ್ಲರಿಗೂ ಇಟಲಿಯಲ್ಲಿದ್ದ ಮೂಂಜೆ ಆದರ್ಶನಾಗಿದ್ದ. ಸಂಘಪರಿವಾರದವರು ಕಾಂಗ್ರೆಸ್ಸಿಗರನ್ನು ಇಟಲಿ ಪ್ರಭಾವಿತರು ಎನ್ನುತ್ತಾರೆ. ಮೂಲದಲ್ಲಿ ಅವರೇ ಇಟಲಿಯಿಂದ ಪ್ರಭಾವಿತರಾಗಿದ್ದಾರೆ ಎಂದು ಕುಟುಕಿದರು.

ಜನರನ್ನು ಮರುಳು ಮಾಡಲು ಧರ್ಮವನ್ನು ಬಳಸಿಕೊಳ್ಳಲಾಗುತ್ತಿದೆ. ಕರ್ನಾಟಕವನ್ನು ಹಿಂದುತ್ವದ ಪ್ರಯೋಗ ಶಾಲೆಯನ್ನಾಗಿಸಲಾಗಿದೆ. ನಾವು ಇದಕ್ಕೆ ಪರ್ಯಯವಾಗಿ ಕರ್ನಾಟಕದ ಶಾಂತಿಯ ತೋಟವನ್ನು ಕಟ್ಟಬೇಕಿದೆ ಎಂದರು. ಸಾವರ್ಕರ್‌

ಸಿಪಿಐಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಡಾ. ಕೆ ಪ್ರಕಾಶ್‌ ಮಾತನಾಡಿ, ನ್ಯಾಯ ವ್ಯವಸ್ಥೆ ಮತಧರ್ಮದ ಆಧಾರದಲ್ಲಿ ಪರಿವರ್ತನೆ ಆಗುತ್ತಿದೆ. ಇಂತಹ ಸಂದರ್ಭದಲ್ಲಿ ಸೆಕ್ಯೂಲರ್ ಪ್ರಜಾಪ್ರಭುತ್ವವನ್ನು ಹೇಗೆ ನೋಡಬೇಕು ಎಂಬುದು ಚರ್ಚಿತವಾಗಬೇಕರುವ ವಿಷಯ. ಸೆಕ್ಯೂಲರ್ ಎಂಬ ಪದ ವೈಚಾರಿಕ ಚರ್ಚೆ, ವೈಜ್ಞಾನಿಕ ಚರ್ಚೆ ಆರಂಭವಾದಗ ಹುಟ್ಟಿಕೊಂಡಿದೆ. ಚರ್ಚೆ ಪ್ರಖರವಾಗುತ್ತಿದ್ದಂತೆ ಧರ್ಮ ಮತ್ತು ಪ್ರಭುತ್ವವನ್ನು ವಿರೋಧಿಸುವ ಹೊಸ ಚಿಂತನೆಗಳು ಆರಂಭವಾದವು ಎಂದರು.

ಪ್ರಾದೇಶಿಕ ಪಕ್ಷಗಳು ಜಾತಿಗಳಿಗೆ ಅಂಟಿಕೊಂಡೆ ಹುಟ್ಟಿವೆ. ಮಿತಿಯ ಒಳಗೆ ಅವರು ಸೆಕ್ಯೂಲರಿಸಂ ಇಟ್ಟುಕೊಂಡಿವೆ. ಸೆಕ್ಯೂಲರಿಸಂನ್ನು ಸೊಶಿಯಲಿಸಂ ಜೊತೆಯಲ್ಲಿಯೆ ಕೆಲಸ ಮಾಡಬೇಕಿದೆ. ಸೆಕ್ಯೂಲರಿಸಂ ಬಲಿಷ್ಟವಾಬೇಕಾದರೆ ಸೊಶಿಯಲಿಸಂ ಕೂಡಾ ಬಲಿಷ್ಟವಾಗಬೇಕು. ಸಂವಿಧಾನ ಪೂರ್ವ ಪಿಠೀಕೆಯಲ್ಲಿ ಈ ಎರಡು ಪದಗಳನ್ನು ತೆಗೆಯಲು ಬಿಜಿಪಿ ಪ್ರಯತ್ನಿಸುತ್ತಲೆ ಇದೆ ಹಾಗಾಗಿ ಈ ಎರಡು ಶಕ್ತಿಗಳನ್ನು ನಾವು ಒಟ್ಟಾಗಿ ಕೊಂಡೊಯ್ಯಬೇಕು ಎಂದರು.

ಪ್ರಾಸ್ಥಾವಿಕವಾಗಿ ಕ್ರಿಯಾ ಮಾಧ್ಯಮದ ನಿರ್ದೇಶಕ ಎನ್‌ ಕೆ. ವಸಂತರಾಜ್‌ ಮಾತನಾಡಿದರು, ಕಾರ್ಯಕ್ರಮದಲ್ಲಿ ನೂರಾರು ಗಣ್ಯರು ಭಾಗಿಯಾಗಿದ್ದರು.

ವಿಡಿಯೋ ನೋಡಿಸಾವರ್ಕರ್ ಕುರಿತು ಏಳು ಸುಳ್ಳುಗಳು – ಡಾ. ಮೀನಾಕ್ಷಿ ಬಾಳಿ ಮಾತುಗಳು

 

Donate Janashakthi Media

Leave a Reply

Your email address will not be published. Required fields are marked *