ಸಾವರ್ಕರ್ ಕುರಿತ ಏಳು ಮಿಥ್ಯೆಗಳನ್ನು ಬಯಲುಗೊಳಿಸುವ ಕೃತಿ ನಾಳೆ ಬಿಡುಗಡೆ

ಡಾ. ಶಂಸುಲ್‌ ಇಸ್ಲಾಂರವರ ಇಂಗ್ಲಿಷ್‌ ಮೂಲ, ತಡಗಳಲೆ ಸುರೇಂದ್ರರಾವ್‌ ಕನ್ನಡಕ್ಕೆ ಭಾಷಾಂತರ ಮಾಡಿದ ವಿ.ಡಿ.ಸಾವರ್ಕರ್  ಏಳು ಮಿಥ್ಯೆಗಳು ಕೃತಿಯ  ಲೋಕಾರ್ಪಣೆ  ಕಾರ್ಯಕ್ರಮವು ದಿನಾಂಕ 18.12.2024 ಭಾನುವಾರ 11.15 ಕ್ಕೆ ಬೆಂಗಳೂರಿನಲ್ಲಿ ನಡೆಯುತ್ತಿದೆ ಎಂದು ಪ್ರಕಾಶಕರಾದ ಕ್ರಿಯಾ ಮಾಧ್ಯಮ ತಿಳಿಸಿದೆ.  ಸಾವರ್ಕರ್

ಮೂಲ ಕೃತಿಕಾರರು, ಭಾಷಾಂತರಕಾರರು ಪಾಲ್ಗೊಳ್ಳುವ ಈ ಕಾರ್ಯಕ್ರಮದ ಭಾಗವಾಗಿ ಮತೀಯ ಪ್ರಭುತ್ವ ಮತ್ತು ಜಾತ್ಯಾತೀತ ಪ್ರಜಾಪ್ರಭುತ್ವ”  ವಿಷಯದ ಕುರಿತು ವಿಚಾರ ಸಂಕಿರಣವನ್ನೂ ಏರ್ಪಡಿಸಲಾಗಿದೆ. ವಿಚಾರಸಂಕಿರಣದಲ್ಲಿ ಡಾ.ಶಂಸುಲ್ ಇಸ್ಲಾಂ, ಕರ್ನಾಟಕ ವಿಧಾನ ಪರಿಷತ್ಸದಸ್ಯರಾದ ಶ್ರೀ ಬಿ.ಕೆ.ಹರಿಪ್ರಸಾದ್, ಚಿಂತಕರಾದ ಡಾ.ಕೆ.ಪ್ರಕಾಶ್‌ ಮಾತನಾಡಲಿದ್ದಾರೆ. ಖ್ಯಾತ ಚಿಂತಕರಾದ ಡಾ.ಮೀನಾಕ್ಷಿ ಬಾಳಿ ಕೃತಿ ಪರಿಚಯ ಮಾಡಿ ಕೊಡಲಿದ್ದಾರೆ. ಸಭೆ ಸುಬ್ಬಯ್ಯ ಸರ್ಕಲ್‌ ಬಳಿಯ ಸಿ.ಎಸ್.ಐ ಕಾಂಪೌಂಡ್  ನಲ್ಲಿರುವ “ಸೌಹಾರ್ದ” ಸಭಾಂಗಣದಲ್ಲಿ ನಡೆಯಲಿದೆ. ಎಂದು ಪ್ರಕಟಣೆ ತಿಳಿಸಿದೆ.

ಕಾರ್ಯಕ್ರಮ ನಡೆಯುವ ಸ್ಥಳದ ಗೂಗಲ್‌ಮ್ಯಾಪ್‌ :  “ಸೌಹಾರ್ದ” ಇಲ್ಲಿದೆ

ಪುಸ್ತಕದಲ್ಲಿ ಏನಿದೆ? 

75 ವರ್ಷಗಳ ಹಿಂದೆ ಸ್ವತಂತ್ರ ಭಾರತದ ಮೊದಲ ಗೃಹಮಂತ್ರಿ ಸರ್ದಾರ್ ವಲ್ಲಭಬಾಯಿ ಪಟೇಲ್ ಮಹಾತ್ಮ ಗಾಂಧಿಯವರ ಹತ್ಯೆಗೆ ಕಾರಣರಾದವರೆಂದು ಹೇಳಿದ್ದ ವಿ.ಡಿ.ಸಾವರ್ಕರ್ ಇಂದು ಅದೇ ಮಹಾತ್ಮ ಗಾಂಧಿಯವರೊಂದಿಗೆ ಸಮಾನ ಸ್ಥಾನಮಾನವನ್ನು ಪಡೆಯುತ್ತಿದ್ದಾರೆ. ಸಂಸದ್ ಭವನದಲ್ಲಿ ಇವರಿಬ್ಬರ ಫೋಟೋಗಳು ಒಂದೆಡೆಯಲ್ಲೇ ಇವೆ. ಈಗ ದೇಶವನ್ನು ಆಳುತ್ತಿರುವ ಮಂದಿ ಅವರನ್ನು ಸ್ವಾತಂತ್ರ್ಯ ಸಮರದ ‘ವೀರ’ ಎನ್ನುತ್ತಿದ್ದಾರೆ. ಆದರೆ ಅವರು ಬ್ರಿಟಿಶ್ ಆಳರಸರ ಕ್ಷಮೆಕೋರಿ, ತನ್ನನ್ನು ಬಿಡುಗಡೆ ಮಾಡಬೇಕು ಎಂದು ಒಂದಲ್ಲ, ಎರಡಲ್ಲ, ಐದು ಕ್ಷಮಾಪತ್ರಗಳನ್ನು ಬರೆದಿದ್ದರು ಎಂದು ಬಯಲಾದಾಗ, ಅದು, `ಸ್ವಾತಂತ್ರ್ಯ ಆಂದೋಲನದಲ್ಲಿ ಸಕ್ರಿಯ ಪಾತ್ರ ವಹಿಸಲು ಅವರ ರಣನೀತಿಯಾಗಿತ್ತು’ ಎಂದು ಅವರ ಬೆಂಬಲಿಗರು ಹೇಳುತ್ತಿದ್ದರೆ, ಕಳೆದ ವರ್ಷ ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್‌ರವರು ಅವರು ಸ್ವತಃ ಗಾಂಧೀಜಿಯ ಸಲಹೆಯಂತೆ ಆ ಪತ್ರಗಳನ್ನು ಬರೆದಿದ್ದರು ಎಂದರು. ಇದು ನಿಜವಲ್ಲ ಎಂದು ಬೇಗನೇ ಸಾಬೀತಾಯಿತು, ಜತೆಗೆ ಈ ‘ವೀರ’ನ ಈ ಕ್ಷಮಾಪತ್ರಗಳು ‘ರಣನೀತಿ’ಯೇನೂ ಆಗಿರಲಿಲ್ಲ ಎಂದೂ ಅವರ ಬೆಂಬಲಿಗರು ಪರೋಕ್ಷವಾಗಿ ಒಪ್ಪಿಕೊಂಡಂತಾಯಿತು.

ಆದರೂ ಇಂತಹ ಮಿಥ್ಯೆಗಳನ್ನು ಹೆಣೆಯುವ, ಪಸರಿಸುವ ಪ್ರಯತ್ನಗಳು ನಿಂತಿಲ್ಲ. ಸಹಜವಾಗಿ ಈ ಮಿಥ್ಯೆಗಳನ್ನು ಬಯಲಿಗೆಳೆಯುವ ಪ್ರಯತ್ನಗಳೂ ನಡೆದಿವೆ. ಡಾ.ಶಮ್ಸುಲ್ ಇಸ್ಲಾಮ್‌ರವರ ‘ಸಾವರ್ಕರ್ ಅನ್‌ ಮಾಸ್ಕ್‌ಡ್”’  ಅಂತಹ ಒಂದು ಪ್ರಮುಖ ಕೃತಿ. ನವದೆಹಲಿಯ ಫರೊಸ್ ಮೀಡಿಯ ಅಂಡ್ ಪಬ್ಲಿಷಿಂಗ್ ಪ್ರೈ.ಲಿ. ಇದನ್ನು ಪ್ರಕಟಿಸಿದ್ದಾರೆ. ಮಿಥ್ಯೆಗಳನ್ನು ಸತ್ಯಸಂಗತಿಗಳಿಂದ ಬೇರ್ಪಡಿಸುವ ಒಂದು ಪ್ರಾಮಾಣಿಕ ಆಕಾಂಕ್ಷೆಯಿಂದ ರಚಿಸಿರುವ ಈ ಕೃತಿ ಹಿಂದೂ ಮಹಾಸಭಾ, ಆರೆಸೆಸ್ ಮತ್ತು ಭಾರತ ಸರಕಾರದ ಪತ್ರಾಗಾರಗಳೂ ಸೇರಿದಂತೆ ದಿಲ್ಲಿ, ಕೊಲ್ಕತ, ಪಾಟ್ನ, ಲಂಡನ್ ಮತ್ತು ವಾಶಿಂಗ್ಟನ್ನ ಪ್ರಮುಖ ಲೈಬ್ರರಿಗಳಲ್ಲಿ ಇರುವ ಮೂಲ ದಸ್ತಾವೇಜುಗಳು ಮತ್ತು ಅಂಡಮಾನ್ ಜೈಲಿನಲ್ಲಿ ಸಾವರ್ಕರ್ ಜತೆಗಿದ್ದ ಕ್ರಾಂತಿಕಾರಿಗಳ ಸ್ಮರಣೆಗಳನ್ನು ಆಧರಿಸಿದೆ.

ಇದನ್ನೂ ಓದಿಕರ್ನಾಟಕ ಹೈಕೋರ್ಟ್‌: ಅರ್ಜಿ ವಿಚಾರಣೆ ವೇಳೆ ʻಬುಲ್ ಬುಲ್ ಹಕ್ಕಿಗಳ ಮೇಲೆ ಹಾರುವ ಸಾವರ್ಕರ್ʼ ಪಠ್ಯ ಪ್ರಸ್ತಾಪ

‘ಭಾರತೀಯ ಸ್ವಾತಂತ್ರ್ಯ ಸಮರ, 1857’ ನ್ನು ಬರೆದ ಕ್ರಾಂತಿಕಾರಿ ವಿನಾಯಕ ದಾಮೋದರ ಸಾವರ್ಕರ್ ಹೇಗೆ ನಂತರ ಆ ಸಮರವನ್ನು ಕ್ರೂರವಾಗಿ ದಮನ ಮಾಡಿದ ಸಾಮ್ರಾಜ್ಯಶಾಹಿಗಳ ಏಜೆಂಟರಾಗಿ ಸ್ವಾತಂತ್ರ್ಯಕ್ಕಾಗಿ ಬೆಳೆದು ಬರುತ್ತಿದ್ದ ರಾಷ್ಟ್ರೀಯ ಆಂದೋಲನವನ್ನೇ ಛಿದ್ರಗೊಳಿಸಲು ಪ್ರಯತ್ನಿಸಿದರು ಎಂಬುದನ್ನು ಲೇಖಕರು ದಾಖಲೆಗಳ ಮೂಲಕ ತೋರಿಸಿಕೊಟ್ಟಿದ್ದಾರೆ,

ಕಳೆದ 2-3 ದಶಕಗಳಲ್ಲಿ ಹೆಣೆದಿರುವ ಮಿಥ್ಯೆಗಳನ್ನು ಬಯಲಿಗೆಳೆದಿದ್ದಾರೆ. “ಮಾಹಿತಿ ಇಲ್ಲದ ಮುಖಂಡರು ಮತ್ತು ಈ ‘ವೀರ’ ಸಾವರ್ಕರರನ್ನು ವೈಭವೀಕರಿಸುವ ಜನರು” ಮತ್ತು ಅವರ ಜತೆಗೆ ಈ ಮಿಥ್ಯೆಗಳನ್ನು ನಂಬಿರುವ ಕನ್ನಡದ ಜನಸಾಮಾನ್ಯರೂ ‘ನಿಜ ಸಂಗತಿಗಳು ಮತ್ತು ಸುಳ್ಳು ಪುರಾಣಗಳ ನಡುವಿನ ವ್ಯತ್ಯಾಸಗಳನ್ನು ಅರಿತುಕೊಳ್ಳುತ್ತಾರೆ’ ಎಂಬುದು ಲೇಖಕರ ಆಶಯ ಮತ್ತು ನಿರೀಕ್ಷೆ.

ಮೊದಲಿಗೆ 2004ರಲ್ಲಿ ಪ್ರಕಟವಾದ ಈ ಕೃತಿಯ 2021ರಲ್ಲಿ ಪ್ರಕಟವಾದ 6ನೇ ಆವೃತ್ತಿಯನ್ನು ಕರ್ನಾಟಕದ ಸಾಂಸ್ಕೃತಿಕ ರಂಗದಲ್ಲಿ ವಿಶಿಷ್ಟ ಸ್ಥಾನ ಪಡೆದಿರುವ ‘ಸಮುದಾಯ’  ಚಳುವಳಿಯ ಹಿರಿಯ ಮುಖಂಡರಲ್ಲಿ ಒಬ್ಬರಾದ ಟಿ.ಸುರೇಂದ್ರರಾವ್ ಅನುವಾದಿಸಿದ್ದಾರೆ.

ವಿಡಿಯೋ ನೋಡಿಗೋಮೂತ್ರ ಕುಡಿಯುವವರ ಬುದ್ಧಿ ಹತ್ಯೆಯಾಗಿದೆ ಎಂದು ಸಾವರ್ಕರ್ ಹೇಳಿದ್ದರು: ಪ್ರಿಯಾಂಕ್ ಖರ್ಗೆ

Donate Janashakthi Media

Leave a Reply

Your email address will not be published. Required fields are marked *