ಎಂಎಸ್‌ಪಿಯನ್ನು ಕಾನೂನು ವ್ಯಾಪ್ತಿಗೆ ತನ್ನಿ- ವರುಣ್ ಗಾಂಧಿ ಆಗ್ರಹ

ನವದೆಹಲಿ: ರೈತರ ಸಮಸ್ಯೆಗಳ ಕುರಿತು ಕೇಂದ್ರ ಸರಕಾರ ಹಾಗೂ ಉತ್ತರ ಪ್ರದೇಶ ಸರ್ಕಾರದ ವಿರುದ್ಧ ಬಿಜೆಪಿ ಸಂಸದ ವರುಣ್‌ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ‘ಬೆಳೆ ಖರೀದಿ ಕೇಂದ್ರಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಸಂಪೂರ್ಣವಾಗಿ ಬಹಿರಂಗವಾಗಿದ್ದು, ಕೇಂದ್ರದಲ್ಲಿರುವವರು ರೈತರಿಗೆ ಧಾನ್ಯಗಳನ್ನು ಮಧ್ಯವರ್ತಿಗಳಿಗೆ ಮಾರಾಟ ಮಾಡುವಂತೆ ಬಲವಂತ ಮಾಡುತ್ತಿದ್ದಾರೆ’ ಎಂದು ವರುಣ್‌ ಟೀಕಿಸಿದ್ದಾರೆ.

ಇದನ್ನೂ ಓದಿ : ಕೃಷಿನೀತಿ ಪರಿಶೀಲಿಸಿ ರೈತರನ್ನು ಕಾಪಾಡಿ – ವರುಣ್ ಗಾಂಧಿ

ಈ ಕುರಿತು ಟ್ವೀಟ್‌ ಮಾಡಿರುವ ಅವರು, ‘ಮೂರು ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತ ಸಂಘಗಳ ಬೇಡಿಕೆಗಳಲ್ಲಿ ಒಂದಾದ ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್‌ಪಿ) ಕಾನೂನು ಖಾತರಿಯನ್ನು ನೀಡುವಂತೆ ವರುಣ್ ಗಾಂಧಿ ಒತ್ತಾಯಿಸಿದ್ದಾರೆ. ‘ಎಂಎಸ್‌ಪಿಯನ್ನು ಕಾನೂನು ವ್ಯಾಪ್ತಿಗೆ ತರದಿದ್ದರೆ, ‘ಮಂಡಿ’ಗಳಲ್ಲಿ  ರೈತರ ಶೋಷಣೆ ಮುಂದುವರಿಯುತ್ತದೆ’ ಎಂದು ಅವರು ಹೇಳಿದ್ದಾರೆ. ಇತ್ತೀಚೆಗೆ ಉತ್ತರ ಪ್ರದೇಶದ ರೈತನೊಬ್ಬ ತಾನು ಬೆಳೆದ ಭತ್ತದ ಬೆಳೆಗೆ ಅನೇಕ ದಿನಗಳ ಕಾಲ ಮಂಡಿಗಳಿಗೆ ತಿರುಗಾಡಿದರು ಸರಿಯಾದ ಬೆಲೆ ಸಿಗದೆ ಈಡಿ ಭತ್ತದ ಚೀಲಗಳಿಗೆ ಬೆಂಕಿ ಹಚ್ಚಿ ಆಕ್ರೋಶವನ್ನು ವ್ಯಕ್ತಪಡಿಸಿದ್ದರು. ಆ ವಿಡಿಯೋವನ್ನು ಶೇರ್‌ ಮಾಡಿ ಕೃಷಿಕಾಯ್ದೆ ರದ್ದು ಮಾಡುವಂತೆ ವರುಣ್‌ ಆಗ ಆಗ್ರಹಿಸಿದ್ದರು.

ಇದೇ ವೇಳೆ ತಮ್ಮ ಟ್ವೀಟ್‌ ಜೊತೆಗೆ, ಬರೇಲಿಯ ಮಂಡಿಯಲ್ಲಿ ಸರ್ಕಾರಿ ಅಧಿಕಾರಿಯೊಂದಿಗೆ ಮಾತನಾಡುತ್ತಿರುವ ವೀಡಿಯೊವನ್ನು ಅವರು ಪೋಸ್ಟ್ ಮಾಡಿದ್ದಾರೆ. ಇದು ರಾಜ್ಯ ಸರ್ಕಾರಕ್ಕೆ ದೊಡ್ಡ ನಾಚಿಕೆಗೇಡಿನ ವಿಷಯ ಎಂಬುದಾಗಿ ಜನರು ಮಾತನಾಡಿಕೊಳ್ಳುತ್ತಿರುವುದಾಗಿ ಅವರು ಹೇಳಿದ್ದಾರೆ.  ಕೇಂದ್ರದ ವಿರುದ್ದ ಪ್ರತಿಭಟನೆ ನಡೆಸುತ್ತಿರುವ ರೈತರ ಪರ ಹಲವು ಬಾರಿ ವರುಣ್ ಗಾಂಧಿ ನಿಂತಿದ್ದಾರೆ. ಪ್ರತಿ ಭಾರಿ ರೈತರ ವಿಡಿಯೋ ಅಥವಾ ವಿಚಾರ ಹಿಡಿದು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಇದ್ದಾರೆ. ಕೆಲ ದಿನಗಳಿಂದ ಉತ್ತರ ಪ್ರದೇಶದ ಯೋಗಿ ಸರ್ಕಾರದ ವಿರುದ್ಧ ವರುಣ್ ಗಾಂಧಿ ಆಕ್ರೋಶ ಹೊರಹಾಕಿದ್ದರು.

Donate Janashakthi Media

Leave a Reply

Your email address will not be published. Required fields are marked *