ಬೆಂಗಳೂರು | ಹೊಸ ʼವಂದೇ ಭಾರತ್ʼ ಎಕ್ಸ್‌ಪ್ರೆಸ್ ರೈಲು ಬೆಂಗಳೂರು ಮತ್ತು ಎರ್ನಾಕುಲಂ ನಡುವೆ ಆರಂಭ

ಬೆಂಗಳೂರು : ಕರ್ನಾಟಕದ ಕೆಎಸ್‍ಆರ್ ಬೆಂಗಳೂರು ಮತ್ತು ಕೇರಳದ ಎರ್ನಾಕುಲಂ ನಡುವೆ ರೈಲು ಸಂಖ್ಯೆ 26651/26652 ಕೆಎಸ್‍ಆರ್ ಬೆಂಗಳೂರು-ಎರ್ನಾಕುಲಂ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿನ ಸೇವೆಯನ್ನು ಪ್ರಾರಂಭಿಸಲು ಅನುಮೋದನೆ ನೀಡಿದೆ. ಬೆಂಗಳೂರು

ಇದನ್ನೂ ಓದಿ : ಮೈಸೂರು | ಸಂಗೀತ ವಿವಿಯಿಂದ ಎಚ್‌. ಜನಾರ್ಧನ್ (ಜನ್ನಿ) ಸೇರಿದಂತೆ ಮೂವರಿಗೆ ಡಾಕ್ಟರೇಟ್‌

ಪ್ರಯಾಣಿಕರಿಗೆ ಸುಧಾರಿತ ಸೌಕರ್ಯದೊಂದಿಗೆ ಕಡಿಮೆ ಪ್ರಯಾಣದ ಸಮಯವನ್ನು ಒದಗಿಸಿ ಎರಡೂ ರಾಜ್ಯಗಳ ನಡುವಿನ ಸಂಪರ್ಕವನ್ನು ಬಲಪಡಿಸುತ್ತದೆ. ಈ ಪ್ರಮುಖ ರೈಲು ಸೇವೆಯು ಬುಧವಾರ ಹೊರತುಪಡಿಸಿ, ವಾರದಲ್ಲಿ ಆರು ದಿನಗಳು ಸಂಚರಿಸಲಿದ್ದು. ಬೆಂಗಳೂರು

ಈ ಹೊಸ ಸೇವೆಯ ಆರಂಭದ ಸಂಕೇತವಾಗಿ, ರೈಲು ಸಂ. 06652 ಎರ್ನಾಕುಲಂ-ಕೆಎಸ್‍ಆರ್ ಬೆಂಗಳೂರು ಉದ್ಘಾಟನಾ ವಿಶೇಷ ರೈಲು ನ.8ರಂದು ಸಂಚರಿಸಲಿದೆ. ಈ ರೈಲು ಬೆಳಗ್ಗೆ 8ಕ್ಕೆ ಎರ್ನಾಕುಲಂನಿಂದ ಹೊರಟು, ಅದೇ ದಿನ ಸಂಜೆ 5:50ಕ್ಕೆ ಕೆಎಸ್‍ಆರ್ ಬೆಂಗಳೂರಿಗೆ ಆಗಮಿಸಲಿದೆ.

ಇದನ್ನೂ ನೋಡಿ : ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ ನಡೆಸಿದ್ದು ಯಾಕೆ? ಬಲಾಢ್ಯ ಜಾತಿಗಳು ವಿರೋಧಿಸಿದ್ದು ಯಾಕೆ? ರಾಜೇಂದ್ರ ಚೆನ್ನಿ ವಿಶ್ಲೇಷಣೆ

Donate Janashakthi Media

Leave a Reply

Your email address will not be published. Required fields are marked *