ಕೊಪ್ಪಳ: ಕೊಪ್ಪಳ ತಾಲ್ಲೂಕಿನ ನರೇಗಲ್ ಗ್ರಾಮದ ಗರ್ಭಿಣಿ ಲಕ್ಷ್ಮಿ ಪೂಜಾರ ಚಿಕಿತ್ಸೆಗಾಗಿ ತಮ್ಮ ತಾಯಿಯೊಂದಿಗೆ ಸೋಮವಾರ 8 ಕಿ.ಮೀ ನಡೆದುಕೊಂಡು ಕೊಪ್ಪಳ ನಗರಕ್ಕೆ ಬಂದಿದ್ದಾರೆ.
ನಗರದಲ್ಲಿ ವಾಹನಗಳ ಓಡಾಟಕ್ಕೆ ಬ್ರೇಕ್ ಹಾಕಿದ ಹಿನ್ನೆಲೆಯಲ್ಲಿ ತುಂಬು ಗರ್ಭಿಣಿಯು ಆಸ್ಪತ್ರೆಗೆ ತೆರಳಲು ಪರದಾಡುವಂತಾಯಿತು. ಊರಿನಲ್ಲಿ ಯಾರ ಸಹಾಯ ಕೇಳಿದರೂ “ಗಾಡೀ ಸೀಜ್ ” ಮಾಡ್ತಾರೆ ಬರಲ್ಲ ಎಂಬ ಉತ್ತರ ಸಿಕ್ಕಿದೆ.
ಇದರಿಂದ ಗ್ರಾಮದಿಂದ 8 ಕಿಮೀ ಕಾಲ್ನಡಿಗೆಯಲ್ಲೆ ಬಿಸಿಲಿನಲ್ಲಿ ನಡೆದುಕೊಂಡು ಬಂದಿದ್ದಾರೆ. ಎತ್ತ ಕಡೆ ಹೋಗಬೇಕು ಎಂದು ತಿಳಿಯದೇ ರಸ್ತೆಯಲ್ಲಿ ನಿಂತಿದ್ದರು.ಅವರನ್ನು ಕಂಡ ಮಾಧ್ಯಮದವರು ತಮ್ಮ ವಾಹನದಲ್ಲಿ ಮಂಗಳಾ ಆಸ್ಪತ್ರೆಗೆ ಸೇರಿಸಿದರು.
Good Job Tanku
🙏🙏🙏🙏🙏
It’s good job from Media
Yess