ಹಾಸನ : ಹೊಸ ರೈಲಿಗೆ ಕೆಂದ್ರ ಸಚಿವ ಸೋಮಣ್ಣ ಚಾಲನೆ

ಹಾಸನ: ಕರ್ನಾಟಕದ ಜನತೆಗೆ ಉತ್ತಮ ರೈಲು ಸಂಪರ್ಕ ಹಾಗೂ ವರ್ಧಿತ ಪ್ರಯಾಣಿಕರ ಸೌಕರ್ಯ ಕೊಡುವ ನಿಟ್ಟಿನಲ್ಲಿ ಜ.4 ರಿಂದ ಹೊಸ ರೈಲಿಗೆ ಕೇಂದ್ರ ರೈಲು ಮತ್ತು ಜಲಶಕ್ತಿ ರಾಜ್ಯ ಸಚಿವರಾದ ವಿ.ಸೋಮಣ್ಣ ಹಸಿರು ನಿಶಾನೆ ತೋರಿದ್ದಾರೆ.

ಬೆಂಗಳೂರು ಯಶವಂತಪುರದಿಂದ ಚಿಕ್ಕಮಗಳೂರಿಗೆ ಎಕ್ಸ್ ಪ್ರೆಸ್ ರೈಲು, ಅರಳ ಗುಪ್ಪೆಯಲ್ಲಿ ಹೆಚ್ಚುವರಿ ನಿಲುಗಡೆಯೊಂದಿಗೆ ಕಾರ್ಯಾರಂಭ ಮಾಡಿದೆ. ಸಂಜೆ 4.45ಕ್ಕೆ ಅರಳಗುಪ್ಪೆ ನಿಲ್ದಾಣದಲ್ಲಿ, ಸೋಮಣ್ಣ ಹಸಿರು ನಿಶಾನೆ ತೋರಿದರು. ಮಲೆನಾಡು ಮತ್ತು ದಕ್ಷಿಣ ಕರ್ನಾಟಕ ಪ್ರದೇಶದ ಸಾಮಾಜಿಕ, ಆರ್ಥಿಕ ವಹಿವಾಟನ್ನು ಹೆಚ್ಚಿಸಲು ಇದರಿಂದ ಸಹಕಾರಿಯಾಗಲಿದೆ.

ಚಿಕ್ಕಮಗಳೂರಿನಿಂದ (ಟೈನ್ ಸಂಖ್ಯೆ 16239) ಬೆಳಗ್ಗೆ 8 ಗಂಟೆಗೆ ಹೊರಡುವ ರೈಲು, ಯಶವಂತಪುರಕ್ಕೆ ಮಧ್ಯಾಹ್ನ 2.30ಕೆ ಬರಲಿದೆ. ಇದು ಕೂಡ ಕಡೂರು ಜಂಕ್ಷನ್‌ನಲ್ಲಿ 15 ಮತ್ತು ಅರಸೀಕೆರೆಯಲ್ಲಿ 5 ನಿಮಿಷ ನಿಲ್ಲಲಿದೆ.

ಪ್ರಯಾಣಿಕರಿಗೆ ವಿಶೇಷವಾಗಿ ಉದ್ಯಮಿಗಳು, ಸಾಪ್ಟವೇರ್ ವೃತ್ತಿಪರರು, ವಿದ್ಯಾರ್ಥಿಗಳು ಮತ್ತು ರೈತರಿಗೆ ಅರಳಗುಪ್ಪೆ ಪ್ರದೇಶದಿಂದ ಬೆಂಗಳೂರು ಮತ್ತು ಚಿಕ್ಕಮಗಳೂರು ನಗರಗಳಿಗೆ ಪ್ರಯಾಣಿಸಲು ಇದರಿಂದ ಸಹಕಾರಿಯಾಗಲಿದೆ. ಅರಳಗುಪ್ಪೆಯಲ್ಲಿರುವ ಚನ್ನಕೇಶವ ದೇವಾಲಯವು ಪ್ರಾಚೀನ ಧಾರ್ಮಿಕ ತಾಣವಾಗಿದ್ದು, ಪ್ರವಾಸಿಗರಿಗೆ ಆಕರ್ಷಣೀಯ ಅನುಭವವನ್ನು ನೀಡುತ್ತದೆ. ಇದರಿಂದ ಅರಳಗುಪ್ಪೆ ಪಟ್ಟಣವು ಸಾಂಸ್ಕೃತಿಕ ಪ್ರವಾಸೋದ್ಯಮದ ಮಹತ್ವಪೂರ್ಣ ತಾಣವಾಗಿ ಹೊರಹೊಮ್ಮಲಿದೆ ಎಂದು ರೈಲ್ವೆ ಇಲಾಖೆ ಹೇಳಿದೆ.

ಇದನ್ನೂ ಓದಿ: ರೈತ ನಾಯಕ, KPRS ರಾಜ್ಯಾಧ್ಯಕ್ಷ ಜಿಸಿ ಬಯ್ಯಾರೆಡ್ಡಿ ನಿಧನ -KPRS ಶ್ರದ್ಧಾಂಜಲಿ

ಟೈನ್ ನಂ 16240 ಮೇಲ್ ಎಕ್ಸ್ ಪ್ರೆಸ್ ಪ್ರತಿ ದಿನ ಸಂಚರಿಸಲಿದ್ದು ಬೆಂಗಳೂರಿನ ಯಶವಂತಪುರ ಜಂಕ್ಷನ್ ನಿಂದ ಮಧ್ಯಾಹ್ನ 3.30ಕ್ಕೆ ಪ್ಲಾಟ್ ಫಾರಂ ಒಂದು ಅಥವಾ ಮೂರನೇ ನಂಬರಿನಿಂದ ಹೊರಡಲಿದೆ. ರಾತ್ರಿ 8.45ಕ್ಕೆ ಚಿಕ್ಕಮಗಳೂರು ನಿಲ್ದಾಣಕ್ಕೆ ತಲುಪಲಿದ್ದು ಒಟ್ಟಾರೆಯಾಗಿ 5.15 ತಾಸಿನ ಪ್ರಯಾಣವಾಗಿದೆ.

ಚಿಕ್ಕಬಾಣಾವರದಲ್ಲಿ ಮೊದಲ ಸ್ಟಾಪ್ ಇರಲಿದ್ದು ಒಟ್ಟಿಗೆ 23 ನಿಲ್ದಾಣಗಳಲ್ಲಿ 1 ಅಥವಾ 2 ನಿಮಿಷ ನಿಲುಗಡೆ ಇರಲಿದೆ. ಕಡೂರು ನಿಲ್ದಾಣದಲ್ಲಿ 15 ನಿಮಿಷ ಮತ್ತು ಅರಸೀಕೆರೆ ಜಂಕ್ಷನ್ ನಲ್ಲಿ 5 ನಿಮಿಷ ನಿಲುಗಡೆ ಇರಲಿದೆ. 244 ಕಿಲೋಮೀಟರ್ ಪ್ರಯಾಣ ಇದಾಗಿದೆ.

ಚಿಕ್ಕಮಗಳೂರಿನಿಂದ (ಟೈನ್ ಸಂಖ್ಯೆ 16239) ಬೆಳಗ್ಗೆ 8 ಗಂಟೆಗೆ ಹೊರಡುವ ರೈಲು, ಯಶವಂತಪುರಕ್ಕೆ ಮಧ್ಯಾಹ್ನ 2.30ಕೆ ಬರಲಿದೆ. ಇದು ಕೂಡ ಕಡೂರು ಜಂಕ್ಷನ್‌ನಲ್ಲಿ 15 ಮತ್ತು ಅರಸೀಕೆರೆಯಲ್ಲಿ 5 ನಿಮಿಷ ನಿಲ್ಲಲಿದೆ.

ನಿಲುಗಡೆ ನಿಲ್ದಾಣಗಳು

ಚಿಕ್ಕಬಾಣಾವರ ಜಂಕ್ಷನ್, ಗೊಲ್ಲಹಳ್ಳಿ, ದೊಡ್ಡಬೆಲೆ, ನಿಡ್ವಾಂಡ, ಹಿರೇಹಳ್ಳಿ, ಕ್ಯಾತ್ಸಂದ್ರ, ತುಮಕೂರು, ಗುಬ್ಬಿ, ಅಮ್ಮಸಂದ್ರ, ಕರ್ಡಿ, ತಿಪಟೂರು, ಹೊನ್ನವಳ್ಳಿ ರಸ್ತೆ, ಅರಸೀಕೆರೆ (ಜಂ), ಬಾಣಾವರ, ದೇವನೂರು, ಕಡೂರು (ಜಂ), ಬಿಸಲೇಹಳ್ಳಿ, ಅರಳಗುಪ್ಪೆ, ಸಖರಾಯಪಟ್ಟಣ, ಕನಿವೇಹಳ್ಳಿ, ಚಿಕ್ಕಮಗಳೂರು.

ಇದನ್ನೂ ನೋಡಿ: ಬಯ್ಯಾರೆಡ್ಡಿಯವರ ಹೃದಯ ಸದಾ ಹೋರಾಟಗಳಿಗೆ ಮಿಡಿಯುತ್ತಿತ್ತು – ಸಿಎಂ ಸಿದ್ದರಾಮಯ್ಯ Janashakthi Media

Donate Janashakthi Media

Leave a Reply

Your email address will not be published. Required fields are marked *