- ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ
ಬರೇಲಿ: ಮತಾಂತರ ನಿಷೇಧ ಕಾಯ್ದೆ ಜಾರಿಗೊಳಿಸಿದ ನಂತರ, ಉತ್ತರ ಪ್ರದೇಶದಲ್ಲಿ ಈ ಕಾಯ್ದೆಯಡಿ ಮೊದಲ ಬಂಧನವಾಗಿದೆ.
ಮತಾಂತರದ ಉದ್ದೇಶದಿಂದ ತನ್ನ ಮಗಳಿಗೆ ಒಬ್ಬ ವ್ಯಕ್ತಿ ಕಿರುಕುಳ ನೀಡುತ್ತಿರುವುದಾಗಿ ವ್ಯಕ್ತಿಯೊಬ್ಬರು ದೂರು ನೀಡಿದ್ದಾರೆ. ಈ ದೂರಿನ ಆಧಾರದ ಮೇಲೆ ಒವೈಸ್ ಅಹ್ಮದ್ ಎಂಬ ಆರೋಪಿಯನ್ನು ಬಂಧಿಸಲಾಗಿದೆ ಎಂದು ಡಿಐಜಿ ರಾಜೇಶ್ ಕುಮಾರ್ ಪಾಂಡೆ ಗುರುವಾರ ತಿಳಿಸಿದ್ದಾರೆ.
‘ಬರೇಲಿಯ ಬಹೇದಿ ಪ್ರದೇಶದಲ್ಲಿರುವ ರಿಚ್ಚಾ ರೈಲ್ವೆ ಗೇಟ್ ಬಳಿ ಆರೋಪಿಯನ್ನು ಬಂಧಿಸಿ, ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ’ ಎಂದೂ ಅವರು ತಿಳಿಸಿದರು. ಅಹ್ಮದ್ ವಿರುದ್ಧ ಬರೇಲಿ ಜಿಲ್ಲೆಯ ದೇವರ್ನಿಯಾ ಪೊಲೀಸ್ ಠಾಣೆಯಲ್ಲಿ ನ. 28ರಂದು ಶರೀಫ್ನಗರ ಗ್ರಾಮದ ಟೀಕಾರಾಮ್ ಎಂಬುವವರು ದೂರು ದಾಖಲಿಸಿದ್ದರು.