ಆಗ್ರಾ: ಸುತ್ತಲು ಜನರು ನೋಡ ನೋಡುತ್ತಿರುವ ನಡುವೆಯೇ ಯುವತಿಯೊಬ್ಬರನ್ನು ಎಳೆದುಕೊಂಡು ಹೋಗಿ ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ಶನಿವಾರದಂದು (ನ-11) ಉತ್ತರ ಪ್ರದೇಶದಲ್ಲಿ ನಡೆದಿದೆ. ಯುವತಿಯು ಹೋಮ್‌ಸ್ಟೇ ಒಂದರ ಉದ್ಯೋಗಿಯಾಗಿದ್ದು, ದುಷ್ಕರ್ಮಿಗಳು ಅವರ ಮೇಲೆ ಅತ್ಯಾಚಾರ ಎಸಗಲು ಎಳೆದುಕೊಂಡು ಹೋಗುತ್ತಿರುವಾಗ ಸಹಾಯಕ್ಕಾಗಿ ಕೂಗುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಆಗಿದೆ.
ಸಂತ್ರಸ್ತ ಯುವತಿಯು ಹೋಮ್‌ಸ್ಟೇನಲ್ಲಿ ಉದ್ಯೋಗಿಯಾಗಿದ್ದಾರೆ ಎಂದು ವರದಿಯಾಗಿದೆ. ಸಾಮೂಹಿಕ ಅತ್ಯಾಚಾರಕ್ಕೆ ಮೊದಲು ದುಷ್ಕರ್ಮಿಗಳು ಅವರ ಮೇಲೆ ಹಲ್ಲೆ ನಡೆಸಿ, ಬಲವಂತವಾಗಿ ಮದ್ಯ ಕುಡಿಸಿದ್ದಾರೆ. ತನ್ನನ್ನು ರಕ್ಷಿಸುವಂತೆ ಸಹಾಯಕ್ಕಾಗಿ ಯುವತಿ ಅಳುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಆಗಿದೆ. ಪ್ರಕರಣದಲ್ಲಿ ಮಹಿಳೆ ಸೇರಿದಂತೆ ಐವರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ. ಉತ್ತರ ಪ್ರದೇಶ
ಇದನ್ನೂ ಓದಿ: ಬಿ.ವೈ. ವಿಜಯೇಂದ್ರ 3 ವರ್ಷ ಮಾತ್ರ ರಾಜ್ಯಾಧ್ಯಕ್ಷ| ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ವಿಡಿಯೊದಲ್ಲಿ ಯುವತಿಯು ತನ್ನನ್ನು ಬಿಟ್ಟುಬಿಡುವಂತೆ ದಯನೀಯವಾಗಿ ಕೇಳಿದ್ದಾರೆ. “ನನ್ನನ್ನು ಬಿಟ್ಟು ಬಿಡಿ. ತನಗೆ ತಂದೆ-ತಾಯಿಯಿಲ್ಲ. ಯಾರಾದರೂ ನನಗೆ ಕಾಪಾಡಿ” ಎಂದು ಹೇಳುತ್ತಾರೆ. ಅದಾಗ್ಯೂ ಕೇಳದ ದುಷ್ಕರ್ಮಿಗಳು ಅವರನ್ನು ಕೋಣೆಯೊಳಗೆ ಎಳೆದುಕೊಂಡು ಹೋಗುತ್ತಾರೆ. ಇದರ ನಂತರ ಹೋಮ್‌ಸ್ಟೇ ಸಿಬ್ಬಂದಿ ಕೊಠಡಿಯ ಬಾಗಿಲನ್ನು ಬಡಿಯುತ್ತಾರೆ. ಈ ವೇಳೆ ಯುವತಿಯು ಕೊಠಡಿಯ ಒಳಗಿನಿಂದ ಕಿರುಚುವ ಶಬ್ದ ವಿಡಿಯೊದಲ್ಲಿ ದಾಖಲಾಗಿದೆ.
ಅದರ ನಂತರ ಕೊಠಡಿಯಿಂದ ಹೊರಗೆ ಬರುವ ಯುವತಿ, “ಎಲ್ಲರೂ ನನ್ನ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ. ನನ್ನನ್ನು ಕಾಪಾಡಿ” ಎಂದು ಹೇಳುವುದು ವಿಡಿಯೊದಲ್ಲಿ ದಾಖಲಾಗಿದೆ.
ತನ್ನ ಸ್ನೇಹಿತ ಮತ್ತು ಇತರ ಕೆಲವರು ತನಗೆ ಬಲವಂತವಾಗಿ ಕುಡಿಯಲು ಒತ್ತಾಯಿಸಿದರು ಎಂದು ಯುವತಿ ಪೊಲೀಸರಿಗೆ ತಿಳಿಸಿದ್ದಾರೆ ಎಂದು ಇಂಡಿಯಾ ಟುಡೆ ವರದಿ ಹೇಳಿದೆ. “ಈ ವೇಳೆ ತಾನು ಪ್ರತಿಭಟಿಸಲು ಪ್ರಯತ್ನಿಸಿದಾಗ ಕೆಲವರು ಕೊಠಡಿಯೊಳಗೆ ಎಳೆದೊಯ್ದು ಥಳಿಸಿದ್ದಾರೆ. ಅಲ್ಲದೆ ನನ್ನ ತಲೆಗೆ ಗಾಜಿನ ಬಾಟಲಿಯಿಂದ ಹೊಡೆದಿದ್ದಾರೆ” ಎಂದು ಅವರು ದೂರಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಇದನ್ನೂ ಓದಿ: ಹೈದರಾಬಾದ್ | ಜನವಸತಿ ಕಟ್ಟಡಕ್ಕೆ ಬೆಂಕಿ; ಕನಿಷ್ಠ 9 ಸಾವು
ಭಾರತೀಯ ದಂಡ ಸಂಹಿತೆಯ (ಐಪಿಸಿ) ಅತ್ಯಾಚಾರ, ಹಲ್ಲೆ ಮತ್ತು ಇತರ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಪುರುಷರು ಹಾಗೂ ಓರ್ವ ಮಹಿಳೆಯನ್ನು ಬಂಧಿಸಲಾಗಿದ್ದು, ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ವರದಿಯಾಗಿದೆ. ವರದಿಯೊಂದರ ಪ್ರಕಾರ, ಬಂದಿತ ಆರೋಪಿಗಳನ್ನು ರವಿ, ಜೀತೇಂದ್ರ, ಮನೀಶ್ ಮತ್ತು ದೇವ್ ಕಿಶೋರ್ ಎಂದು ಗುರುತಿಸಲಾಗಿದೆ.
Agra- Four youths brútally gang-rapéd a Girl during Deepotsav.
Police reached the spot and arrested 4 accused- Ravi, Jitendra, Manish and Dev Kishore. pic.twitter.com/nxVAMLIi9N
— هارون خان (@iamharunkhan) November 12, 2023
ಹೋಟಲ್‌ನಲ್ಲಿ ಉದ್ಯೋಗಿಯಾಗಿದ್ದ ಯುವತಿ ಒಂದೂವರೆ ವರ್ಷದಿಂದ ಅಲ್ಲೇ ಕೆಲಸ ಮಾಡುತ್ತಿದ್ದರು. “ದಯವಿಟ್ಟು ನನ್ನನ್ನು ರಕ್ಷಿಸಿ! ನನಗೆ ನಾಲ್ಕು ಹೆಣ್ಣು ಮಕ್ಕಳಿದ್ದಾರೆ. ಅವರು ನನ್ನನ್ನು ಎಳೆದುಕೊಂಡು ಹೋಗಿದ್ದಾರೆ, ನನ್ನ ಫೋನ್ ಕಿತ್ತುಕೊಂಡಿದ್ದಾರೆ. ಅವರು ನನ್ನ ವೀಡಿಯೊವನ್ನು ಬಳಸಿಕೊಂಡು ನನ್ನನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ, ಅವರು ನನ್ನಿಂದ ಹಣವನ್ನೂ ತೆಗೆದುಕೊಂಡಿದ್ದಾರೆ,” ಎಂದು ವಿಡಿಯೋದಲ್ಲಿ ಹೇಳಿದ್ದಾರೆ. ಉತ್ತರ ಪ್ರದೇಶ
ಇದನ್ನೂ ಓದಿ: ಹಿರಿಯ ಸಿಪಿಐ(ಎಂ) ನಾಯಕ ಬಾಸುದೇಬ್ ಆಚಾರ್ಯ (81) ನಿಧನ
ಹಿರಿಯ ಪೊಲೀಸ್ ಅಧಿಕಾರಿ ಸದರ್ ಅರ್ಚನಾ ಸಿಂಗ್ ಪ್ರಕಾರ, ಆಗ್ರಾದ ತಾಜ್‌ಗಂಜ್ ಪೊಲೀಸರಿಗೆ ಹೋಮ್‌ಸ್ಟೇನಲ್ಲಿ ಅತ್ಯಾಚಾರ ನಡೆದಿರುವ ಮಾಹಿತಿ ಸಿಕ್ಕಿತ್ತು. ಸಂತ್ರಸ್ತೆಯ ಆರೋಪಗಳನ್ನು ಗಮನದಲ್ಲಿಟ್ಟುಕೊಂಡು ಪ್ರಕರಣವನ್ನು ದಾಖಲಿಸಲಾಗಿದೆ. ಶನಿವಾರ ರಾತ್ರಿ ಈ ಘಟನೆ ನಡೆದಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಹೋಮ್‌ಸ್ಟೇಗೆ ಸೀಲ್ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.
“ಸಹಾಯಕ್ಕಾಗಿ ಅಳುತ್ತಿದ್ದ ಸಂತ್ರಸ್ತೆಯಿಂದ ನಮಗೆ ಶನಿವಾರ ಮಧ್ಯರಾತ್ರಿ ಕರೆ ಬಂದಿತು. ನಾವು ಹೋಂಸ್ಟೇಗೆ ಧಾವಿಸಿ ಆರೋಪಿಗಳ ವಿರುದ್ಧ ಕ್ರಮ ಕೈಗೊಂಡಿದ್ದೇವೆ. ಸುಮಾರು 25 ವರ್ಷ ಸಂತ್ರಸ್ತೆ ಹೋಂಸ್ಟೇನಲ್ಲಿ ಕೆಲಸ ಮಾಡುತ್ತಿದ್ದರು” ಎಂದು ಬಸಾಯಿ ಪೊಲೀಸ್ ಉಸ್ತುವಾರಿ ಮೋಹಿತ್ ಶರ್ಮಾ ಹೇಳಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ವಿಡಿಯೊ ನೋಡಿ: ದೀಪಾವಳಿ ಹಬ್ಬದ ವಿಶೇಷ ಕವಿತೆ : ನನ್ನ ಹಣತೆ – ಡಾ. ಜಿ.ಎಸ್. ಶಿವರುದ್ರಪ್ಪ Janashakthi Media