ದೆಹಲಿ : ವೆನೆಜುವೆಲಾದ ವಿವಿಧ ಸ್ಥಳಗಳ ಮೇಲೆ ಬಾಂಬ್ ದಾಳಿ ನಡೆಸುವ ಮೂಲಕ ಯುಎಸ್ ವೆನೆಜುವೆಲಾದ ಮೇಲೆ ಆಕ್ರಮಣದ ನಿರ್ಲಜ್ಜ ಕೃತ್ಯವನ್ನು ಎಸಗಿದೆ, ಇದನ್ನು ಬಲವಾಗಿ ಖಂಡಿಸುವುದಾಗಿ ಸಿಪಿಐ(ಎಂ) ಪೊಲಿಟ್ ಬ್ಯುರೊ ಹೇಳಿದೆ.
ಇದನ್ನೂ ಓದಿ : ಕೋಗಿಲು ಬಡಾವಣೆ 300 ಮನೆಗಳ ತೆರವು; ಹೈಕೋರ್ಟ್ ಮೆಟ್ಟಿಲೇರಿದ ನಿವಾಸಿಗಳು
ಕಳೆದ ಕೆಲವು ವಾರಗಳಿಂದ ಯುಎಸ್ ವೆನೆಜುವೆಲಾದಲ್ಲಿ ಆಳ್ವಿಕೆ ಬದಲಾವಣೆಯನ್ನು ಬಲವಂತವಾಗಿ ತರಲು ಅದರ ಸುತ್ತಲೂ ತನ್ನ ಮಿಲಿಟರಿ ಮತ್ತು ನೌಕಾ ಪಡೆಗಳನ್ನು ಸಜ್ಜುಗೊಳಿಸಿದೆ. ಇದು ಡಿಸೆಂಬರ್ 2025 ರ ಮೊದಲ ವಾರದಲ್ಲಿ ಪ್ರಕಟಿಸಲಾದ ಯುಎಸ್‍ನ ರಾಷ್ಟ್ರೀಯ ಭದ್ರತಾ ರಣನೀತಿ, 2025 ರ ನಿಜವಾದ ಮುಖ. ಪಶ್ಚಿಮ ಗೋಳಾರ್ಧದಲ್ಲಿ ಅಮೆರಿಕದ ಪಡೆಗಳನ್ನು ಕೂಡಹಾಕಿರುವುದು ಮತ್ತು ಇಡೀ ಪ್ರದೇಶವನ್ನು ತನ್ನ ನಿಯಂತ್ರಣಕ್ಕೆ ತರುವ ಆಶಯದ ಬಹಿರಂಗ ಘೋಷಣೆಯು ಮನ್ರೋ ಸಿದ್ಧಾಂತಕ್ಕೆ ಟ್ರಂಪ್ ಉಪಪ್ರಮೇಯ ಎಂದು ಪೊಲಿಟ್‍ಬ್ಯುರೊ ಟೀಕಿಸಿದೆ.
ಯುಎಸ್ ಆಕ್ರಮಣವನ್ನು ತಕ್ಷಣವೇ ಕೊನೆಗೊಳಿಸಬೇಕು ಮತ್ತು ಕೆರಿಬಿಯನ್ ಸಮುದ್ರದಿಂದ ಅದು ತನ್ನ ಎಲ್ಲಾ ಪಡೆಗಳನ್ನು ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸಿರುವ ಸಿಪಿಐ(ಎಂ) ಲ್ಯಾಟಿನ್ ಅಮೆರಿಕವನ್ನು ಶಾಂತಿಯ ವಲಯವೆಂದು ಘೋಷಿಸಬೇಕು ಮತ್ತು ಅಮೆರಿಕವು ಸಾರ್ವಭೌಮ ರಾಷ್ಟ್ರಗಳ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡಲು ಬಿಡಬಾರದು ಎಂದು ಹೇಳಿದೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಯುಎಸ್ ಆಕ್ರಮಣವನ್ನು ಖಂಡಿಸುವ ನಿರ್ಣಯವನ್ನು ಅಂಗೀಕರಿಸಬೇಕು ಮತ್ತು .ವೆನೆಜುವೆಲಾದ ಮೇಲಿನ ಆಕ್ರಮಣವನ್ನು ತಕ್ಷಣವೇ ನಿಲ್ಲಿಸುವಂತೆ ಯುಎಸ್ ಮೇಲೆ ಅಂತರರಾಷ್ಟ್ರೀಯ ಒತ್ತಡವನ್ನು ಹಾಕಬೇಕು ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಆಗ್ರಹಿಸಿದೆ.
ಇದನ್ನೂ ನೋಡಿ : ಅಖ್ಲಾಕ್ ಗುಂಪು ಹತ್ಯೆ ಪ್ರಕರಣ & ಸೇಂಗಾರ್‌ಗೆ ವಿಧಿಸಲಾದ ಶಿಕ್ಷೆ ಅಮಾನತು ಏನು ಹೇಳುತ್ತಿವೆ? Janashakthi Media
