ಉರಿಗೌಡ ಅಂದ್ರೆ ಅಶ್ವಥ್ ನಾರಾಯಣ್, ನಂಜೇಗೌಡ ಅಂದ್ರೆ ಸಿಟಿ ರವಿ : ಡಿಕೆಶಿ ವ್ಯಂಗ್ಯ

ಮಂಡ್ಯ : ಉರಿಗೌಡ ಅಂದರೇ ಅಶ್ವಥ್ ನಾರಾಯಣ್, ನಂಜೇಗೌಡ ಅಂದರೇ ಸಿ.ಟಿ ರವಿ. ಇವು ಬಿಜೆಪಿಗರೇ ಸೃಷ್ಠಿಸಿದ ಪಾತ್ರಗಳು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವ್ಯಂಗ್ಯವಾಡಿದರು.

ನಾಗಮಂಗಲದ ಆದಿಚುಂಚನಗಿರಿ ಮಠಕ್ಕೆ ಕುಟುಂಬಸಮೇತರಾಗಿ ಡಿಕೆ ಶಿವಕುಮಾರ್ ಭೇಟಿ ನೀಡಿದ್ದರು.

ಇದನ್ನೂ ಓದಿ : ಬಿಜೆಪಿಗರಿಗೆ ಏನು ಕೆಲಸ ಇಲ್ಲ, ಹೀಗಾಗಿ ಉರೀಗೌಡ-ನಂಜೇಗೌಡರ ವಿಚಾರ ಇಟ್ಕೊಂಡು ಆಟ ಆಡ್ತಿದಾರೆ : ಹೆಚ್‌ಡಿಕೆ

ಈ ವೇಳೆ ಮಾತನಾಡಿದ ಡಿ.ಕೆ ಶಿವಕುಮಾರ್, ಯಾವುದೇ ಒಂದು ಸಮುದಾಯಕ್ಕೆ ಧಕ್ಕೆ ತರಬಾರದು. ಒಕ್ಕಲಿಗರಿಗೆ ಅರಗಿಸಿಕೊಳ್ಳುವ ಶಕ್ತಿ ಇದೆ. ಆದರೆ ಒಕ್ಕಲಿಗ ಸಮುದಾಯಕ್ಕೆ ಕಳಂಕ ತರುವ ಕೆಲಸ ಮಾಡಬಾರದು.ಈಗಾಗಲೇ ನಿರ್ಮಲಾನಂದ ಶ್ರೀಗಳು ಈ ಬಗ್ಗೆ ಮಾತನಾಡಿದ್ದಾರೆ. ಸಿನಿಮಾ ತೆಗೆಯುವ ನಿರ್ಧಾರದಿಂದ ಸಚಿವ ಮುನಿರತ್ನ ಹಿಂದೆ ಸರಿದಿದ್ದಾರೆ. ಇದನ್ನ ಇಲ್ಲಿಗೆ ನಿಲ್ಲಿಸಿದ್ರೆ ಒಳ್ಳೆಯದು ಇಲ್ಲದಿದ್ದರೇ ಪಕ್ಷ ಬಿಟ್ಟು ಸಮುದಾಯದ ವ್ಯಕ್ತಿಗಾಗಿ ಹೋರಾಟ ಮಾಡುತ್ತೇನೆ ಎಂದು ಡಿ.ಕೆ ಶಿವಕುಮಾರ್ ಎಚ್ಚರಿಕೆ ನೀಡಿದರು.

ಸುಳ್ಳು ಸೃಷ್ಟಿ :
ಉರಿಗೌಡ ಮತ್ತು ದೊಡ್ಡ ನಂಜೇಗೌಡರು ಟಿಪ್ಪು ಸುಲ್ತಾನ್‌ನನ್ನು ಕೊಂದರು ಎಂದು ಬಿಜೆಪಿ ನಾಯಕರು ಸಭೆ ಸಮಾರಂಭಗಳಲ್ಲಿ ಹೇಳಿಕೊಳ್ಳುತ್ತಿದ್ದರು. ಆದರೆ, ಈ ಇಬ್ಬರು ವ್ಯಕ್ತಿಗಳು ಬದುಕಿದ್ದ ಬಗ್ಗೆ ಯಾವುದೇ ದಾಖಲೆಗಳಿಲ್ಲ ಎಂದು ಇತಿಹಾಸ ತಜ್ಞರು ತಿಳಿಸಿದ್ದರು. ಆದರೂ, ಬಿಜೆಪಿ ನಾಯಕರು ಟಿಪ್ಪು ಸುಲ್ತಾನ್‌ನನ್ನು ರಾಜಕೀಯ ದಾಳ ಮಾಡಿಕೊಂಡಿದ್ದಾರೆ. ಗೌಡ ಸಮುದಾಯದ ಮಹಾನಾಯಕರಾದ ಉರಿಗೌಡ ಮತ್ತು ದೊಡ್ಡ ನಂಜೇಗೌಡರೇ ಟಿಪ್ಪುಅನ್ನು ಕೊಂದಿದ್ದಾಗಿ ವಾದ ಮಂಡಿಸುತ್ತಿದ್ದರು. ಬಿಜೆಪಿ ಈ ಕಲ್ಪಿತ ಪಾತ್ರಗಳ ಬಗ್ಗೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆ ಆಗುತ್ತಿದೆ. ಬಿಜೆಪಿಯ ನಡೆಯನ್ನು ಹಿಗ್ಗಾಮುಗ್ಗಾ ಜಾಡಿಸುತ್ತಿದ್ದಾರೆ. ಆದರೂ ಬಿಜೆಪಿ ತನ್ನ ಚಾಳಿಯನ್ನು ಮುಂದುಸುತ್ತಲೇ ಇದ್ದು ಇದಕ್ಕೆ ಬಿಜೆಪಿಯ ಮತ್ತಷ್ಟಿ ನಾಯಕರು ಪುಷ್ಠಿ ನೀಡುತ್ತಲೇ ಬರುತ್ತಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *