ಲಕ್ನೋ: ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಉತ್ತರ ಪ್ರದೇಶ ಚುನಾವಣೆಯಲ್ಲಿ ಎಸ್ ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರನ್ನು ಬೆಂಬಲಿಸುತ್ತೇವೆ. ಆದರೆ ನಾವು ಬಿಜೆಪಿಯನ್ನು ಓಡಿಸಬೇಕು ಎಂದು ಬ್ಯಾನರ್ಜಿ ತಿಳಿಸಿದ್ದಾರೆ. ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರನ್ನು ಬೆಂಬಲಿಸುವುದಾಗಿ ಖಚಿತಪಡಿಸಿದರು.
ಉತ್ತರ ಪ್ರದೇಶಕ್ಕೆ ಈಗ ಚುನಾವಣೆ ದೃಷ್ಟಿಯಿಂದ ನಾವು ಹೋಗುವುದಿಲ್ಲ. ಆದರೆ ಚುನಾವಣೆಯಲ್ಲಿ ಅಖಿಲೇಶ್ ಯಾದವ್ ಅವರನ್ನು ಬೆಂಬಲಿಸಲಿದ್ದೇವೆ. ನಮ್ಮ ಟಿಎಂಸಿ ಪಕ್ಷ 2024 ರ ಲೋಕಸಭೆ ಚುನಾವಣೆಯಲ್ಲಿ ಯುಪಿಯಿಂದ ಸ್ಪರ್ಧಿಸಲಿದೆ ಎಂದು ಹೇಳಿದರು.ಇತರ ರಾಜ್ಯಗಳ ಚುನಾವಣೆ ಕುರಿತು ಮಾತನಾಡುವಾಗ ಅವರು, ಹಿಂದೆ ಜನರು ಟಿಎಂಸಿ ಎಂದರೆ ಪಶ್ಚಿಮ ಬಂಗಾಳ ಎಂದು ಕರೆಯುತ್ತಿದ್ದರು. ಆದರೆ ನಾವು ನಮ್ಮ ಪಕ್ಷವನ್ನು ವಿಸ್ತರಿಸಿದ್ದೇವೆ. ದೇಶದ ಇತರ ಭಾಗಗಳಿಗೂ ನಮ್ಮ ಪಕ್ಷವನ್ನು ವಿಸ್ತರಿಸಲು ಪ್ರಯತ್ನಿಸುತ್ತೇವೆ ಎಂದು ತಿಳಿಸಿದರು.
ತ್ರಿಪುರಾದಲ್ಲಿ ನಮ್ಮ ಪಕ್ಷದ ಪರವಾಗಿ 20% ಕ್ಕಿಂತ ಹೆಚ್ಚು ಮತದಾರರಿದ್ದಾರೆ. ನಾವು ಮುಂದಿನ ಎರಡು ವರ್ಷಗಳಲ್ಲಿ ಬಂಗಾಳವನ್ನು ಬಲಿಷ್ಠಗೊಳಿಸುತ್ತೇವೆ. ಇದರಿಂದ 2024 ರ ಲೋಕಸಭಾ ಚುನಾವಣೆಯಲ್ಲಿ ನಾವು ಎಲ್ಲ 42 ಸ್ಥಾನಗಳನ್ನು ಗೆಲ್ಲುತ್ತೇವೆ. ಇಲ್ಲಿಂದ ಬಿಜೆಪಿಯನ್ನು ಓಡಿಸಬೇಕು. ಟಿಎಂಸಿಯಲ್ಲಿ ಏಕರೂಪತೆ ಇದೆ. ನಾನು ಎಲ್ಲರಿಗೂ ಕೇಳಿಕೊಳ್ಳುವುದು ಇಷ್ಟೆ, ನಮ್ಮ ಪಕ್ಷವನ್ನು ಬಲಪಡಿಸಿ ಎಂದು ಮನವಿ ಮಾಡಿದರು.
ಮೇಘಾಲಯ ಮತ್ತು ಪಂಜಾಬ್ನಲ್ಲಿ ಬಿಜೆಪಿಯ ಆಜ್ಞೆಯ ಮೇರೆಗೆ ಕಾಂಗ್ರೆಸ್ ಕೆಲಸ ಮಾಡುತ್ತಿರುವುದಕ್ಕೆ ನನಗೆ ಬೇಸರವಾಗಿದೆ. ನಾನು ರವೀಂದ್ರನಾಥ ಟ್ಯಾಗೋರ್ ಅವರ ಹಾದಿಯನ್ನು ಅನುಸರಿಸಲಿದ್ದೇನೆ. ಎಕ್ಲಾ ಚೋಲೋ ರೇ(ನಾವು ಏಕಾಂಗಿಯಾಗಿ ಮುಂದುವರಿಯೋಣ) ನಾವು ಹೋರಾಡಬೇಕಾಗಿದೆ ಎಂದು ಕರೆ ನೀಡಿದರು.