ನವದೆಹಲಿ: ಉನ್ನಾವೊ ಅತ್ಯಾಚಾರ ಪ್ರಕರಣದ ಆರೋಪಿ ಬಿಜೆಪಿ ಉಚ್ಚಾಟಿತ ನಾಯಕ ಕುಲ್‌ದೀಪ್ ಸಿಂಗ್ ಸೆಂಗಾರ್ ಅವರ ಮಗಳ ಮದುವೆಯಲ್ಲಿ ಪಾಲ್ಗೊಳ್ಳುವ ಹಿನ್ನೆಲೆಯಲ್ಲಿ ದೆಹಲಿ ಹೈಕೋರ್ಟ್ ಇಂದು(ಜನವರಿ 16) ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ಉತ್ತರ ಪ್ರದೇಶದ ಗೋರಖ್‌ಪುರ ಮತ್ತು ಲಖನೌದಲ್ಲಿ ಮದುವೆ ಸಮಾರಂಭ ನಡೆಯಲಿದ್ದು, ಅದಕ್ಕಾಗಿ ಸಿದ್ಧತೆಗಳು ಮಾಡಿಕೊಳ್ಳಬೇಕಿರುವುದರಿಂದ ಕುಲದೀಪ್ ಸೆಂಗಾರ್ ಅವರಿಗೆ ಜಾಮೀನು ನೀಡುವಂತೆ ವಕೀಲ ಎನ್. ಹರಿಹರನ್ ಮತ್ತು ಪಿ.ಕೆ. ದುಬೆ ದೆಹಲಿ ಹೈಕೋರ್ಟಿಗೆ ಮನವಿ ಸಲ್ಲಿಸಿದರು.
ಇದನ್ನು ಓದಿ: ಯುಪಿ: ಉನ್ನಾವೊದಲ್ಲಿನ 14 ಸರಕಾರಿ ವೈದ್ಯರು ರಾಜೀನಾಮೆ
ಹೈಕೋರ್ಟಿನ ನ್ಯಾಯಾಧೀಶರಾದ ಮುಕ್ತಾ ಗುಪ್ತಾ ಮತ್ತು ಪೂನಂ ಎ. ಬಂಬಾ ಅವರಿದ್ದ ವಿಭಾಗೀಯ ಪೀಠವು ಜಾಮೀನು ಅರ್ಜಿಯನ್ನು ಮಂಜೂರು ಮಾಡಿದ್ದು, ಜನವರಿ 27ರಿಂದ ಫೆಬ್ರುವರಿ 10ರವರೆಗೆ ಇರಲಿದೆ. ಈ ಅವಧಿಯಲ್ಲಿ ಪ್ರತಿದಿನವೂ ಸಂಬಂಧಪಟ್ಟ ಪೊಲೀಸ್ ಠಾಣಾ ಅಧಿಕಾರಿಗೆ ಕುಲ್‌ದೀಪ್ ಸೆಂಗಾರ್ ವರದಿ ಮಾಡಿಕೊಳ್ಳಬೇಕು ಮತ್ತು ತಲಾ ₹1 ಲಕ್ಷದ ಎರಡು ಠೇವಣಿ ಇಡಬೇಕೆಂದು ಆದೇಶಿಸಿದ್ದಾರೆ.
2017ರಲ್ಲಿ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ್ದ ಪ್ರಕರಣ ಉತ್ತರ ಪ್ರದೇಶ ರಾಜ್ಯದ ಉನ್ನಾವೊ ಜಿಲ್ಲೆಯಲ್ಲಿ ನಡೆದಿದ್ದು, ಈ ಪ್ರಕರಣ ದೇಶಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿ ಖಂಡನೆಯನ್ನು ಖಂಡಿಸಲಾಗಿತ್ತು. ಈ ಪ್ರಕರಣದಲ್ಲಿ ಕುಲ್‌ದೀಪ್ ಸೆಂಗಾರ್ ಅಪರಾಧಿ ಎಂಬುದು ಸಾಬೀತಾಗಿದ್ದು, ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ