ಬೆಂಗಳೂರು : ಹಿಜಾಬ್ ಧರಿಸಿದ್ದ ಕಾರಣಕ್ಕೆ ವಿದ್ಯಾರ್ಥಿನಿಯರನ್ನು ಕಾಲೇಜು ಪ್ರವೇಶ ನಿರಾಕರಿಸಿ ವಿವಾದ ಸೃಷ್ಟಿಸಲಾಗಿದ್ದ ಅದೇ ಪ್ರದೇಶದಲ್ಲಿ ವಿಭಿನ್ನ ಧರ್ಮದ ವಿದ್ಯಾರ್ಥಿನಿಯರು ಒಟ್ಟಿಗೆ ಕೈ ಕೈ ಹಿಡಿದು ಕಾಲೇಜಿಗೆ ಬರುವ ಮೂಲಕ ಸೌಹಾರ್ದತೆ ಸಾರಿದ್ದಾರೆ.
ಹೌದು ಹಿಜಾಬ್ ಧರಿಸಿದ್ದರು ಎಂಬ ಕಾರಣಕ್ಕಾಗಿ ವಿದ್ಯಾರ್ಥಿನೀಯರು ಕಾಲೇಜು ಪ್ರವೇಶಿಸುವುದನ್ನು ಉಡುಪಿಯಲ್ಲಿ ನಿಷೇಧಿಸಲಾಗಿತ್ತು ನಿರಾಕರಿಸಲಾಗಿತ್ತು. ಹಿಜಾಬ್ ಗೆ ಪ್ರತಿಯಾಗಿ ಕೇಸರಿ ಶಾಲು ಹಾಕಿಕೊಂಡು ಕಾಲೇಜಿಗೆ ಬರುವ ಮೂಲಕ ವಿವಾದವನ್ನು ಹುಟ್ಟುಹಾಕಲಾಗಿತ್ತು. ಈ ವಿವಾದದ ಈಗ ಹೈಕೋರ್ಟ್ ಅಂಗಳದಲ್ಲಿದ್ದು, ಮಧ್ಯಂತರ ಆದೇಶವನ್ನು ಮಾಡಲಾಗಿತ್ತು. ಆದರೂ ಹಿಜಾಬ್ ಧರಿಸದಂತೆ ಅನೇಕ ಕಾಲೇಜುಗಳಲ್ಲಿ ಆಡಳಿತ ಮಂಡಳಿ ಒತ್ತಡ ಹೇರಿದ್ದವು. ಕೆಲ ಆಡಳಿತ ಮಂಡಳಿ ಮತ್ತು ಪತ್ರಕರ್ತರು ಹಿಜಾಬ್ ಧರಿಸಿದ್ದ ವಿದ್ಯಾರ್ಥಿನಿಯರನ್ನು ಶಾಲಾ- ಕಾಲೇಜಿನ ಕ್ರೀಡಾಂಗಣದ ತುಂಬೆಲ್ಲ ಓಡಾಡಿಸಿ ವಿಡಿಯೋ ಚಿತ್ರಿಕರಿಸಿ ಬಾಲಕಿಯರನ್ನು ಬೆದರಿಸುವ ಕೆಲಸ ಮಾಡಿದ್ದರು.
ಇದನ್ನೂ ಓದಿ : ಸಮಾಜವನ್ನು ಪ್ರಶ್ನಿಸಲು ಹೆಣ್ಣಿಗೆ ಮೊದಲು ಶಿಕ್ಷಣ ಬೇಕು
ಇವುಗಳ ನಡುವೆಯೇ ನಿನ್ನೆ ಉಡಪಿಯ ಸರಕಾರಿ ಪಿಯು ಕಾಲೇಜಿಗೆ ಹಿಜಾಬ್ ಧರಿಸಿದ್ದ ವಿದ್ಯಾರ್ಥಿನಿಯ ಜೊತೆ ಇತರೆ ಧರ್ಮದ ವಿದ್ಯಾರ್ಥಿನಿಯರು ಕೈ ಕೈ ಹಿಡುದುಕೊಂಡು ಬರುವ ಮೂಲಕ ಸೌಹಾರ್ದತೆಯನ್ನು ಸಾರಿದ್ದಾರೆ. ಈ ಹೃದಯಸ್ಪರ್ಶಿ ಫೋಟೊ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ” ಇದು ನನ್ನ ಭಾರತ ನಾವೆಲ್ಲರೂ ಒಂದೇ” ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಇದು ನನ್ನ ಭಾರತ ♥️
ಸರ್ವಜನಾಂಗದ ಶಾಂತಿಯ ತೋಟ,
ರಸಿಕರ ಕಂಗಳ ಸೆಳೆಯುವ ನೋಟ,
ಹಿಂದೂ, ಕ್ರೈಸ್ತ, ಮುಸಲ್ಮಾನ,
ಪಾರಸಿ, ಜೈನರುಧ್ಯಾನ…!#Indian#India pic.twitter.com/UDIiKsEuxt— sonu Radha (@IncRadha) February 17, 2022
ಈ ಸೌಹಾರ್ದ ಪೋಟೊವನ್ನು ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಛಾಯಚಿತ್ರಗ್ರಾಹಕ ಇರ್ಶಾದ್ ಮೊಹ್ಮದ್ ತೆಗೆದಿದ್ದಾರೆ. ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸೇರಿದಂತೆ ಸಾವಿರಕ್ಕೂ ಹೆಚ್ಚುಜನ ಫೆಸ್ಬುಕ್ ಹಾಗೂ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ. ಅನೇಕರು ಪ್ರೋಫೈಲ್ ಪಿಚ್ಚರ್ಆಗಿಯೂ ಬಳಸಿಕೊಂಡಿದ್ದಾರೆ. ಕೇಸರಿ ಶಾಲು – ಹಿಜಾಬ್ ಪ್ರಕರಣದ ನಡುವೆ ವಿದ್ಯಾರ್ಥಿಗಳೇ ಈ ಸೌಹಾರ್ಧತೆಗೆ ಮುಂದಾಗಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.