ನವದೆಹಲಿ : ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 2024-2025 ರ ಆರ್ಥಿಕ ವರ್ಷದ ಕೇಂದ್ರ ಬಜೆಟ್ ಅನ್ನು ಮಂಡಿಸಿದ್ದಾರೆ. ಇದರ ಬೆನ್ನಲ್ಲೇ, ಹಲವಾರು ವಸ್ತುಗಳು ಗ್ರಾಹಕರ ಪಾಲಿಗೆ ಅಗ್ಗ ಮತ್ತು ದುಬಾರಿಯಾಗಿವೆ. 2024ರ ಫೆಬ್ರುವರಿಯಲ್ಲಿ ಮಂಡಿಸಿದ ಮಧ್ಯಂತರ ಬಜೆಟ್ ಸೇರಿ ನಿರ್ಮಲಾ ಅವರು ಈವರೆಗೆ 7 ಬಾರಿ ಬಜೆಟ್ ಮಂಡಿಸಿದ್ದಾರೆ.
ನಿರ್ಮಲಾ ಅವರು ಮಂಡಿಸಿರುವ ಬಜೆಟ್‌ನಲ್ಲಿ ಯಾವುದು ಯಾವುದು ಇಳಿಕೆ, ಯಾವುದು ಏರಿಕೆ? ಎಂಬುದರ ಬಗ್ಗ ಮಾಹಿತಿ ಇಲ್ಲಿದೆ
ಅಗ್ಗವಾಗಿರುವ ವಸ್ತುಗಳ ಪಟ್ಟಿ ಇಲ್ಲಿದೆ
ಮೊಬೈಲ್‌ಗಳು ಮತ್ತು ಪರಿಕರಗಳ ಮೇಲಿನ ಸುಂಕವನ್ನು ಶೇಕಡಾ 15 ಕ್ಕೆ ಕಡಿತಗೊಳಿಸಲಾಗಿದೆ.
ಚಿನ್ನ ಮತ್ತು ಬೆಳ್ಳಿಯ ಮೇಲಿನ ಕಸ್ಟಮ್ಸ್ ಸುಂಕವನ್ನು ಶೇಕಡಾ 6 ಕ್ಕೆ ಮತ್ತು ಪ್ಲಾಟಿನಂ ಮೇಲೆ ಶೇಕಡಾ 6.4 ಕ್ಕೆ ಇಳಿಸಲಾಗಿದೆ.
ಸರ್ಕಾರವು ಫೆರೋ ನಿಕಲ್, ಬ್ಲಿಸ್ಟರ್ ತಾಮ್ರದ ಮೇಲಿನ ಮೂಲ ಕಸ್ಟಮ್ಸ್ ಸುಂಕವನ್ನು ತೆಗೆದುಹಾಕಿದೆ.
ಮೂರು ಕ್ಯಾನ್ಸರ್ ಚಿಕಿತ್ಸಾ ಔಷಧಗಳನ್ನು ಮೂಲ ಕಸ್ಟಮ್ಸ್ ಸುಂಕದಿಂದ ವಿನಾಯಿತಿ ನೀಡಲಾಗಿದೆ.
ಸೌರ ಫಲಕಗಳ ತಯಾರಿಕೆಯಲ್ಲಿ ಬಳಸಲಾಗುವ ವಿನಾಯಿತಿ ಪಡೆದ ಬಂಡವಾಳ ಸರಕುಗಳ ಪಟ್ಟಿಯನ್ನು ವಿಸ್ತರಿಸಲು ಹಣಕಾಸು ಸಚಿವರು ಪ್ರಸ್ತಾಪಿಸಿದೆ.
ಇದನ್ನೂ ಓದಿ : ಕೇಂದ್ರ ಬಜೆಟ್ 2024 ಮುಖ್ಯಾಂಶಗಳು
ದುಬಾರಿಯಾಗಿರು ವಸ್ತುಗಳ ಪಟ್ಟಿ ಇಲ್ಲಿದೆ
ಸರಕಾರವು ನಿಗದಿತ ಟೆಲಿಕಾಂ ಉಪಕರಣಗಳ ಮೇಲಿನ ಮೂಲ ಕಸ್ಟಮ್ಸ್ ಸುಂಕವನ್ನು 10% ರಿಂದ 15% ಕ್ಕೆ ಹೆಚ್ಚಿಸಿದೆ.
ಪ್ಲಾಸ್ಟಿಕ್ ಮೇಲಿನ ಆಮದು ಸುಂಕ ಏರಿಕೆ
ಸ್ಟೇಟ್ ಸ್ಟ್ಯಾಂಪ್ ಡ್ಯೂಟಿ ಹೆಚ್ಚಳಕ್ಕೆ ರಾಜ್ಯ ಸರ್ಕಾರಗಳಿಗೆ ಅವಕಾಶ
ವಿವಿಧ ರೀತಿಯ ಬಟ್ಟೆ, ವಸ್ತ್ರಗಳ ಬೆಲೆ ಏರಿಕೆ
ಎಲ್ಲಾ ರೀತಿಯ ವಿದ್ಯುತ್ ಉಪಕರಣಗಳ ಬೆಲೆ ಏರಿಕೆ
ಮೊಬೈಲ್ ಟವರ್ ಬಿಡಿ ಭಾಗಗಳ ಬೆಲೆ ಏರಿಕೆ