ಮಾಸ್ಕೋ/ಕೀವ್: ಉಕ್ರೇನ್ನ ರಾಜಧಾನಿ ಕೀವ್, ಮರಿಯುಪೋಲ್, ಹಾರ್ಕಿವ್ ಮತ್ತು ಸುಮಿ ನಗರಗಳಲ್ಲಿ ರಷ್ಯಾ ಕದನ ವಿರಾಮವನ್ನು ಘೋಷಿಸಿದೆ. ಕದನ ವಿರಾಮವು ಮಾಸ್ಕೋ ಸಮಯ ಬೆಳಗ್ಗೆ 10 ಗಂಟೆಯಿಂದ ಜಾರಿಗೆ ಬಂದಿದೆ.
ಉಕ್ರೇನ್ನ ನಾಲ್ಕು ನಗರಗಳಿಂದ ನಾಗರಿಕರನ್ನು ಸ್ಥಳಾಂತರಿಸಲು ಕದನ ವಿರಾಮ ಘೋಷಣೆಯಾಗಿದೆ. ರಷ್ಯಾದ ಸೇನೆಯು ಉಕ್ರೇನ್ನಲ್ಲಿ ಹಲವು ಮಾನವೀಯ ಕಾರಿಡಾರ್ಗಳನ್ನು ತೆರೆಯುವುದಾಗಿ ಘೋಷಿಸಿದೆ.
ಉಕ್ರೇನ್ ನಗರದ ಖಾರ್ಕಿವ್ನಲ್ಲಿನ ವಸತಿ ಕಟ್ಟಡಗಳನ್ನು ಗುರಿಯಾಗಿಸಿಕೊಂಡು ರಷ್ಯಾ ದಾಳಿ ಮಾಡಲು ನಿರ್ಧರಿಸಿತ್ತು. ಆದರೆ, ಸೀಜ್ ಫಾಯರ್ ಘೋಷಣೆ ಮಾಡಿದ್ದರಿಂದ ಬಂಕರ್ಗಳು ಸೇರಿದಂತೆ ಸುರಕ್ಷಿತ ಸ್ಥಳಗಳಿಗೆ ಹೋಗಲು ಈಗಾಗಲೇ ಜನರಿಗೆ ಸೂಚಿಸಲಾಗಿದೆ. ಆದರೂ ಸಹ ಇನ್ನು ಕೆಲವರು ಅಲ್ಲಿ ಸಿಲುಕಿರುವ ಶಂಕೆ ಇದೆ. ಈ ಮಧ್ಯೆ, ಉಕ್ರೇನ್ ಸೇನೆ ಅನೇಕ ರಷ್ಯಾದ ಟ್ಯಾಂಕ್ ಗಳನ್ನು ನಾಶಪಡಿಸಿದೆ ಎಂದು ಹೇಳಿಕೊಂಡಿದೆ.
ಇಂದು(ಮಾ.07) ಮಧ್ಯಾಹ್ನ 12.30 ರಿಂದ ಕೀವ್, ಖಾರ್ಕೀವ್, ಮಾರಿಯುಪೋಲ್ ಮತ್ತು ಸುಮಿ ನಗರಗಳಲ್ಲಿ ರಷ್ಯಾ ಕದನವಿರಾಮ ಘೋಷಣೆ ಮಾಡಿದೆ. ಈ ನಾಲ್ಕೂ ನಗರಗಳು ರಷ್ಯಾದ ದಾಳಿಯಿಂದ ಅತಿ ಹೆಚ್ಚು ಸಂಕಷ್ಟಕ್ಕೆ ತುತ್ತಾಗಿದ್ದು, ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಪ್ರದೇಶಗಳಾಗಿವೆ. ಸೋಮವಾರ ಮಧ್ಯಾಹ್ನ 12.30 ರಿಂದ ಕೀವ್, ಖಾರ್ಕೀವ್, ಮಾರಿಯುಪೋಲ್ ಮತ್ತು ಸುಮಿ ನಗರಗಳಲ್ಲಿ ರಷ್ಯಾ ಕದನವಿರಾಮ ಘೋಷಣೆ ಮಾಡಿದೆ. ಈ ನಾಲ್ಕೂ ನಗರಗಳು ರಷ್ಯಾದ ದಾಳಿಯಿಂದ ಅತಿ ಹೆಚ್ಚು ಸಂಕಷ್ಟಕ್ಕೆ ತುತ್ತಾಗಿದ್ದು, ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಪ್ರದೇಶಗಳಾಗಿವೆ.
ಕಳೆದ ಎರಡು ದಿನಗಳ ಹಿಂದೆ, ಮರಿಯುಪೋಲ್ ಮತ್ತು ವೊಲ್ನೋವಾಖಾ ನಗರಗಳಿಂದ ನಾಗರಿಕರು ನಿರ್ಗಮಿಸಲು ರಷ್ಯಾ 5 ಗಂಟೆಗಳ ಕದನ ವಿರಾಮವನ್ನು ಘೋಷಿಸಿತ್ತು. ಆ ಬಳಿಕವೂ ರಷ್ಯಾ ಶೆಲ್ ದಾಳಿ ನಡೆಸಿದ್ದರಿಂದ, ನಾಗರಿಕರ ಸ್ಥಳಾಂತರ ವಿಳಂಬವಾಯಿತು ಎಂದು ಉಕ್ರೇನ್ ಆರೋಪಿಸಿತ್ತು.
ಉಕ್ರೇನ್ನ ಅಣು ವಿದ್ಯುತ್ ಸ್ಥಾವರಗಳ ಮೇಲೆ ರಷ್ಯಾ ದಾಳಿ ಮಾಡಿದ್ದು, ಅಣು ವಿದ್ಯುತ್ ಸ್ಥಾವರಗಳ ಮೇಲೆ ದಾಳಿಯಿಂದ ದೊಡ್ಡ ಪ್ರಮಾದ ಉಂಟಾಗಿದೆ. ಚೆರ್ನೋಬಿಲ್, ಝಫೋರಿಝೀಯಾ ಎರಡು ಸ್ಥಾವರಗಳನ್ನು ರಷ್ಯಾ ಕೈವಶ ಮಾಡಿಕೊಂಡಿದೆ.
ಉಕ್ರೇನಿನ ಹಲವು ಭಾಗಗಳಲ್ಲಿ ಮಾನವೀಯ ಕಾರಿಡಾರ್ ಗಳನ್ನು ತೆರೆಯುವುದಾಗಿ ರಷ್ಯಾ ಘೋಷಿಸಿದೆ. ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್ ಅವರ ಕೋರಿಕೆ ಮೇರೆಗೆ ಕೈವ್, ಮಾರಿಯುಪೋಲ್, ಖಾರ್ಕಿವ್ ಮತ್ತು ಸುಮಿಯಿಂದ ಕಾರಿಡಾರ್ಗಳನ್ನು ತೆರೆಯಲಾಗುವುದು ಎಂದು ರಷ್ಯಾದ ರಕ್ಷಣಾ ಸಚಿವಾಲಯ ತಿಳಿಸಿದೆ. ಕಾರಿಡಾರ್ಗಳು ರಷ್ಯಾ ಸಮಯ ಬೆಳಗ್ಗೆ 10 ಗಂಟೆಯಿಂದ ಜಾರಿಯಲ್ಲಿರುತ್ತವೆ ಎಂದು ವರದಿಯಾಗಿದೆ.
ಸೇನಾ ಕಾರ್ಯಾಚರಣೆ ನಿಲ್ಲಿಸಲು ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ಅರ್ಜಿ
ರಷ್ಯಾ-ಉಕ್ರೇನ್ ನಡುವೆ ಯುದ್ಧದಿಂದಾಗಿ ಯುದ್ಧ ನಿಲ್ಲಿಸಿ ಶಾಂತಿ ಸ್ಥಾಪಿಸಬೇಕೆಂದು ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ವಿಚಾರಣೆ ಆರಂಭವಾಗಿದೆ. ರಷ್ಯಾ ಸೇನಾ ಕಾರ್ಯಾಚರಣೆ ನಿಲ್ಲಿಸಲು ಕೋರಿರುವ ಅರ್ಜಿ ವಿಚಾರಣೆ ಆರಂಭವಾಗಿದ್ದು, ನೆದರ್ಲೆಂಡ್ಸ್ನ ಹೇಗ್ನಲ್ಲಿರುವ ಅಂತರರಾಷ್ಟ್ರೀಯ ಕೋರ್ಟ್ ವಿಚಾರಣೆ ಆರಂಭವಾಗಿದೆ.
ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ಉಕ್ರೇನ್ ವಕೀಲರಿಂದ ವಾದಮಂಡನೆ ನಡೆಯುತ್ತಿದೆ. ನನ್ನ ದೇಶದ ಜನರನ್ನು ರಷ್ಯಾ ಸೇನೆ ಕೊಲ್ಲುತ್ತಿದೆ. ವೈದ್ಯಕೀಯ ಸೌಲಭ್ಯಗಳ ಮೇಲೂ ದಾಳಿ ಮಾಡುತ್ತಿದ್ದಾರೆ. ಗರ್ಭಿಣಿಯರಿಗೆ ಬಂಕರ್ಗಳಲ್ಲೇ ಹೆರಿಗೆ ಮಾಡಿಸಲಾಗುತ್ತಿದೆ. ಶಾಂತಿಗೆ ಉಕ್ರೇನ್ ಸಿದ್ಧವಿದೆ, ಆದರೆ, ರಷ್ಯಾ ಯುದ್ಧ ನಿಲ್ಲಿಸಬೇಕು ಎಂದು ವಾದಮಂಡನೆ ಮಾಡಿದ್ದಾರೆ.