ಯುಜಿಸಿ ನಿಬಂಧನೆಗಳನ್ನು ತಕ್ಷಣವೇ ಹಿಂತೆಗೆದುಕೊಳ್ಳಬೇಕು – ಕೇರಳ ವಿಧಾನಸಭೆ ನಿರ್ಣಯ

2025 ರ ಕರಡು ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ನಿಬಂಧನೆಗಳನ್ನು ತಕ್ಷಣವೇ ಹಿಂತೆಗೆದುಕೊಳ್ಳುವಂತೆ ಒತ್ತಾಯಿಸುವ ನಿರ್ಣಯವನ್ನು ಕೇರಳ ವಿಧಾನಸಭೆ ಜನವರಿ 21ರಂದು ಸರ್ವಾನುಮತದಿಂದ ಅಂಗೀಕರಿಸಿತು. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಮಂಡಿಸಿದ ಈ ನಿರ್ಣಯವು, ಮಾರ್ಗಸೂಚಿಗಳು ಭಾರತದ ಒಕ್ಕೂಟ ರಚನೆಗೆ ಅನುಗುಣವಾಗಿಲ್ಲ ಮತ್ತು ಸಂವಿಧಾನದಲ್ಲಿ ನಿಗದಿಪಡಿಸಿದ ತತ್ವಗಳನ್ನು ಸಮರ್ಪಕವಾಗಿ ಪ್ರತಿಬಿಂಬಿಸಲು ವಿಫಲವಾಗಿವೆ ಎಂದು ಹೇಳಿದೆ.

ಪ್ರಸ್ತಾವಿತ ವಿಧಿ-ವಿಧಾನಗಳನ್ನು ಪರಿರಾಮರ್ಶಿಸಬೇಕು ಮತ್ತು ಸಂಬಂಧಪಟ್ಟ ಎಲ್ಲರ ಹಿತಾಸಕ್ತಿಗಳನ್ನು ಸಮರ್ಪಕವಾಗಿ ಪರಿಗಣಿಸಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ರಾಜ್ಯ ಸರ್ಕಾರಗಳು, ಶಿಕ್ಷಣ ತಜ್ಞರು ಮತ್ತು ಇತರ ಪಾಲುದಾರರೊಂದಿಗೆ ಸಂಪೂರ್ಣ ಸಮಾಲೋಚನೆಗಳ ನಂತರವೇ ಹೊಸ ಮಾರ್ಗಸೂಚಿಗಳ ಸಂಚಯವನ್ನು ಮುಂದಿಡಬೇಕು ಎಂದು ಕೇಂದ್ರ ಸರ್ಕಾರವನ್ನು ನಿರ್ಣಯವು ಒತ್ತಾಯಿಸಿದೆ.

ಸಂವಿಧಾನದ ಏಳನೇ ಷೆಡ್ಯೂಲಿನ ಪ್ರಕಾರ, ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುವ ಮತ್ತು ಮೇಲ್ವಿಚಾರಣೆ ಮಾಡುವ ಅಧಿಕಾರವು ರಾಜ್ಯ ಸರ್ಕಾರಗಳ ಬಳಿ ಇದೆ ಎಂದು ಒತ್ತಿ ಹೇಳಿರುವ ಈ ನಿರ್ಣಯ  ಉನ್ನತ ಶಿಕ್ಷಣ ಸೇರಿದಂತೆ ಶಿಕ್ಷಣವನ್ನು ಸಮವರ್ತಿ ಪಟ್ಟಿಗೆ ಸ್ಥಳಾಂತರಿಸಿದ 1977 ರ 42 ನೇ ಸಾಂವಿಧಾನಿಕ ತಿದ್ದುಪಡಿಯನ್ನು ಉಲ್ಲೇಖಿಸಿ, ಕೇಂದ್ರ ಸರ್ಕಾರದ ಪಾತ್ರವು ಉನ್ನತ ಶಿಕ್ಷಣಕ್ಕಾಗಿ ಸಂಯೋಜನೆ ಮತ್ತು ಮಾನದಂಡಗಳನ್ನು ನಿಗದಿಪಡಿಸುವುದಕ್ಕೆ ಸೀಮಿತವಾಗಿರಬೇಕು ಎಂದು ನಿರ್ಣಯ ಹೇಳಿದೆ.

Donate Janashakthi Media

Leave a Reply

Your email address will not be published. Required fields are marked *