ಯು.ಜಿ.ಸಿ ನಿಯಮಾವಳಿ ತಿದ್ದುಪಡಿ ಕುರಿತು ಎಂ.ಸಿ. ಸುಧಾಕರ್‌ ಅವರೊಂದಿಗೆ ಸುದೀರ್ಘ ಚರ್ಚೆ

ಬೆಂಗಳೂರು: ಪ್ರಸ್ತುತ ಚರ್ಚೆಯಲ್ಲಿ ಇರುವ ಯು.ಜಿ.ಸಿ.ನಿಯಮಾವಳಿಗಳ ತಿದ್ದುಪಡಿಯ ಅಪಾಯಗಳ ಕುರಿತು, ಜಾಗೃತ ನಾಗರಿಕರು ಕರ್ನಾಟಕದ ನಿಯೋಗ  ಉನ್ನತ ಶಿಕ್ಷಣ ಸಚಿವರನ್ನು ಭೇಟಿ ಮಾಡಿ ಸುದೀರ್ಘ ಚರ್ಚೆ ನಡೆಸಿತು. ಯು.ಜಿ.ಸಿ ನಿಯಮಾವಳಿ

ಈ ನಿಯೋಗವು ಮಂಗಳವಾರ ಉನ್ನತ ಶಿಕ್ಷಣ ಸಚಿವರಾದ ಡಾ.ಎಂ.ಸಿ. ಸುಧಾಕರ್‌ ಅವರನ್ನು ಭೇಟಿ ಮಾಡಿ ಯು.ಜಿ.ಸಿ. ನಿಯಮಾವಳಿ ತಿದ್ದುಪಡಿ ಕುರಿತು ಸುದೀರ್ಘ ಚರ್ಚೆ ನಡೆಸಿದರು. ಚರ್ಚೆಯಲ್ಲಿ ಒಕ್ಕೂಟ ವ್ಯವಸ್ಥೆಯನ್ನು ನಾಶ ಮಾಡುವ, ಸ್ಥಳೀಯತೆ, ಸಾಮಾಜಿಕ ನ್ಯಾಯಕ್ಕೆ ಹಿನ್ನಡೆ ಉಂಟುಮಾಡುವ ಈ ತಿದ್ದುಪಡಿಯನ್ನು ತಿರಸ್ಕರಿಸಬೇಕು ಎಂದು ಮನವಿ ಸಲ್ಲಿಸಲಾಯಿತು. ಯು.ಜಿ.ಸಿ ನಿಯಮಾವಳಿ

ಇದನ್ನೂ ಓದಿ :ಯುಜಿಸಿ ಕರಡು ನಿಯಮ ತಿದ್ದುಪಡಿ ತಿರಸ್ಕರಿಸಿ : ಜಾಗೃತ ನಾಗರಿಕರು ಕರ್ನಾಟಕದಿಂದ ನಿರ್ಣಯ 

ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು ನಿಯೋಗದ ಸಲಹೆಗಳನ್ನು ಸ್ವೀಕರಿಸಿ, ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದರು.

ಈ ನಿಯೋಗದಲ್ಲಿ ನಿವೃತ್ತ ಉಪಕುಲಪತಿಗಳಾದ ಪ್ರೊ.ಎಸ್.ಜಾಫೆಟ್, ಪ್ರೊ.ರಾಜಾಸಾಬ್, ಡಾ. ಹಿ. ಚಿ. ಬೋರಲಿಂಗಯ್ಯ  ಹಾಗೂ ಜಾಗೃತ ನಾಗರಿಕರು ಕರ್ನಾಟಕದ ಪ್ರೊ.ಎಸ್. ಜಿ. ಸಿದ್ದರಾಮಯ್ಯ, ಮಾವಳ್ಳಿ ಶಂಕರ್, ಬಿ. ಶ್ರೀಪಾದ ಭಟ್, ವಿಮಲಾ ಕೆ. ಎಸ್. ಡಾ.ವಸುಂಧರಾ ಭೂಪತಿ, ಟಿ.ಸುರೇಂದ್ರರಾವ್  ಭಾಗವಹಿಸಿದ್ದರು. ಯು.ಜಿ.ಸಿ ನಿಯಮಾವಳಿ

ಈ ವಿಡಿಯೋ ನೋಡಿ ಉನ್ನತ ಶಿಕ್ಷಣವನ್ನು ಕೇಂದ್ರೀಕರಣಗೊಳಿಸುವ, ಆರೆಸ್ಸೆಸ್ ಸಿದ್ಧಾಂತಕ್ಕೆ ಅವಕಾಶ ಕಲ್ಪಿಸುವ ಯುಜಿಸಿ ತಿದ್ದುಪಡಿಗಳು…

Donate Janashakthi Media

Leave a Reply

Your email address will not be published. Required fields are marked *