ಮುಂಬೈ: ಉದ್ಯಮಿ ಗೌತಮ್ ಅದಾನಿ ಅವರಿಗೆ ಸೇರಿದ ಸಮೂಹ ಸಂಸ್ಥೆಗಳ ಷೇರುಗಳ ಮೌಲ್ಯ ಭಾರೀ ಪ್ರಮಾಣದಲ್ಲಿ ಕುಸಿತವಾಗುತ್ತಿದ್ದು, ಇದರಿಂದ ಭಾರತೀಯ ಜೀವ ವಿಮಾ ನಿಗಮ(ಎಲ್‌ಐಸಿ)ಕ್ಕೂ ದೊಡ್ಡ ನಷ್ಟ ಸಂಭವಿಸುತ್ತಿದೆ. ಈಗಾಗಲೇ, ಎರಡು ದಿನದ ಅವಧಿಯಲ್ಲಿ ಎಲ್‌ಐಸಿ 18 ಸಾವಿರ ಕೋಟಿ ನಷ್ಟವನ್ನು ಅನುಭವಿಸಿದೆ.
ಅದಾನಿ ಸಮೂಹ ಸಂಸ್ಥೆಗಳಲ್ಲಿ ಸರ್ಕಾರಿ ಒಡೆತನದ ಸಾರ್ವಜನಿಕ ಸಂಸ್ಥೆ ಎಲ್‌ಐಸಿ ಹಣ ಹೂಡಿಕೆ ಮಾಡಿದ್ದು, ಅದಾನಿ ಕಂಪನಿಯ ಷೇರು ಮೌಲ್ಯದಲ್ಲಿ ಕುಸಿತದಿಂದಾಗಿ ಎಲ್ಐಸಿಗೆ ನಷ್ಟ ಎದುರಾಗುತ್ತಿದೆ. ಎರದು ದಿನದಲ್ಲಿ ಎಲ್‌ಐಸಿ 18,647 ಕೋಟಿ ರೂಪಾಯಿ ಕಳೆದುಕೊಂಡಿದೆ. ಅದಾನಿ ಸಮೂಹ ಸಂಸ್ಥೆಗಳಲ್ಲಿ ಎಲ್‌ಐಸಿ ಸಂಸ್ಥೆಯು ಜನವರಿ 24ರ ವೇಳೆಗೆ 81,268 ಕೋಟಿ ರೂಪಾಯಿ ಹೂಡಿಕೆಯ ಮೌಲ್ಯ ಇತ್ತು. ಆದರೆ, ಜನವರಿ 27ರ ಹೊತ್ತಿಗೆ 62,621 ಕೋಟಿ ರೂಪಾಯಿಗೆ ಕುಸಿತ ಕಂಡಿದೆ.
ಇದನ್ನು ಓದಿ: ಉದ್ಯಮಿ ಗೌತಮ್ ಅದಾನಿ ವಿರುದ್ಧ ಷೇರು ತಿರುಚುವಿಕೆ-ಲೆಕ್ಕಪತ್ರ ವಂಚನೆ ಆರೋಪ; ತನಿಖೆಗೆ ಕಾಂಗ್ರೆಸ್ ಆಗ್ರಹ
ಎಲ್‌ಐಸಿ ಸಂಸ್ಥೆಯು ಅದಾನಿ ಗ್ರೀನ್ ಎನರ್ಜಿ, ಅದಾನಿ ಎಂಟರ್ ಪ್ರೈಸಸ್, ಅದಾನಿ ಪೋರ್ಟ್ಸ್, ಅದಾನಿ ಟೋಟಲ್ ಗ್ಯಾಸ್, ಅದಾನಿ ಟ್ರಾನ್ಸ್ಮಿಷನ್ಗಳ ಶೇ 1ರಷ್ಟು ಷೇರು ಹೂಡಿಕೆ ಮಾಡಿದೆ ಮಾಡಿದೆ ಎಂದು ವರದಿಯಾಗಿದೆ. ಇತ್ತೀಚೆಗೆ ಅಂಬುಜಾ ಸಿಮೆಂಟ್ಸ್ ಮತ್ತು ಎಸಿಸಿಯಲ್ಲೂ ಎಲ್‌ಐಸಿ ಹೂಡಿಕೆ ಮಾಡಿದೆ ಎನ್ನಲಾಗಿದೆ. ಈ ಕಂಪನಿಗಳಲ್ಲಿಯೂ ಷೇರುಗಳು ಮೌಲ್ಯದಲ್ಲಿ ಕುಸಿತ ಕಂಡಿದ್ದು, ಶೇ 27 ಹಾಗೂ ಶೇ 19ರ ನಡುವೆ ಕುಸಿದಿವೆ.
ಎಸ್ಬಿಐ ಷೇರು ಮೌಲ್ಯವೂ ಕುಸಿತ
ಅದಾನಿ ಸಮೂಹದ ಕಂಪನಿಗಳ ಷೇರು ಮೌಲ್ಯದಲ್ಲಿ ಕುಸಿತವಾಗುತ್ತಿಲೇ ಇದ್ದು, ಅದಾನಿ ಸಂಸ್ಥೆಯೊಂದಿಗೆ ಷೇರು ಪೇಟೆ ವ್ಯವಹಾರದಲ್ಲಿ ತೊಡಗಿಸಿಕೊಂಡ ಎಲ್‌ಐಸಿಯೊಂದಿಗೆ ಎಸ್ಬಿಐ ಷೇರು ಮೌಲ್ಯದಲ್ಲಿಯೂ ಕುಸಿತವಾಗಿದೆ. ಶುಕ್ರವಾರದ ಅಂತ್ಯದ ವೇಳೆಗೆ ಎಸ್ಬಿಐ ಷೇರು ಮೌಲ್ಯದಲ್ಲಿ ಶೇ 28.75ರಷ್ಟು ಕುಸಿತ ದಾಖಲಾಗಿತ್ತು. ಮತ್ತೊಂದೆಡೆ, ಎಲ್‌ಐಸಿ ಷೇರು ಮೌಲ್ಯದಲ್ಲಿ ಶೇ 23.45ರಷ್ಟು ಕುಸಿತವಾಗಿದೆ. ಅದಾನಿ ಸಮೂಹ ಸಂಸ್ಥೆಗಳಿಗೆ ಸಾಲ ನೀಡಿರುವ ಭಾರತೀಯ ಸ್ಟೇಟ್ ಬ್ಯಾಂಕ್(ಎಸ್ಬಿಐ) ಕೂಡ ನಷ್ಟದ ಭೀತಿ ಎದುರಿಸುತ್ತಿದೆ.
ಇದನ್ನು ಓದಿ: ವರಮಾನಗಳ ಅಸಮತೆ ಹೆಚ್ಚುವುದರಿಂದಾಗಿಯೇ ಸಂಪತ್ತಿನ ಅಸಮತೆಯೂ ಹೆಚ್ಚುತ್ತದೆ
ಅದಾನಿ ಸಮೂಹ ಸಂಸ್ಥೆಗಳು ಷೇರು ತಿರುಚುವಿಕೆ ಹಾಗೂ ಲೆಕ್ಕಪತ್ರ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕದ ಸಂಶೋಧನಾ ಸಂಸ್ಥೆ ಹಿಂಡನ್ಬರ್ಗ್ ವರದಿ ಬಿಡುಗಡೆಯಾದ ಬಳಿಕ ಅದಾನಿ ಸಮೂಹ ಸಂಸ್ಥೆಗಳನ್ನು ತನಿಖೆಗೆ ಒಳಪಡಿಸಬೇಕೆಂಬ ಆರೋಪಗಳು ಕೇಳಿ ಬರುತ್ತಿವೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ