ಉಡುಪಿ : ದೇಶಾದ್ಯಂತ ದೀಪಾವಳಿ ಸಂಭ್ರಮ ಜೋರಾಗಿಯೇ ಇದೆ. ಇದರ ನಡುವೆಯೇ ರಾಜ್ಯದ ಕೆಲವೆಡೆ ಅನಾಹುತಗಳು ಸಂಭವಿಸಿದ ಘಟನೆಗಳು ನಡೆದಿವೆ. ಹಾಗೆಯೇ ಇಂದು (ನವೆಂಬರ್ 13) ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಗಂಗೊಳ್ಳಿಯಲ್ಲಿ ಲಂಗರು ಹಾಕಿದ್ದ ಬೋಟ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಈ ಬೆಂಕಿ ಏಳು ಬೋಟ್‌ಗಳಿಗೆ ವಿಸ್ತರಿಸಿ ಅವೆಲ್ಲವೂ ಭಸ್ಮವಾಗಿವೆ. ಕೋಟ್ಯಾಂತರ
ಇದನ್ನೂ ಓದಿ:ಉಡುಪಿ| ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆ
ಗಂಗೊಳ್ಳಿ ಮೀನುಗಾರಿಕಾ ಬಂದರು ಪರಿಸರದಲ್ಲಿ ದೀಪಾವಳಿ ಹಿನ್ನೆಲೆ ಪೂಜೆ ನಡೆಯುತ್ತಿದ್ದ ವೇಳೆ ಈ ದುರಂತ ನಡೆದಿದೆ. ಪಟಾಕಿ ಸಿಡಿದು ಬೆಂಕಿ ಹಬ್ಬಿರಬಹುದೇ ಎಂಬ ಸಂಶಯವೂ ಕಾಡುತ್ತಿದೆ. ಇನ್ನು ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಕಾರ್ಯನಿರತವಾಗಿದೆ. ಆದರೂ ಬೆಂಕಿಯ ಜ್ವಾಲೆ ಕಡಿಮೆ ಆಗುವ ಲಕ್ಷಣ ಕಾಣುತ್ತಿಲ್ಲ. ಕೋಟ್ಯಾಂತರ
ಆದ್ದರಿಂದ ಇನ್ನೂ ಹೆಚ್ಚುವರಿ ಅಗ್ನಿಶಾಮಕ ವಾಹನಗಳನ್ನು ಕರೆಸಿಕೊಳ್ಳಲು ಮುಂದಾಗಿದ್ದು, ಅಗ್ನಿಯನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಈ ದುರಂತದಲ್ಲಿ ಕೋಟ್ಯಾಂತರ ರೂಪಾಯಿ ನಷ್ಟ ಆಗಿದೆ ಎನ್ನುವ ಮಾಹಿತಿ ಲಭ್ಯವಾಗಿದ್ದು, ಈ ಘಟನೆಗೆ ಕಾರಣ ಏನೆಂಬುದು ಇನ್ನೂ ನಿಖರವಾಗಿ ತಿಳಿದುಬಂದಿಲ್ಲ. ನಷ್ಟ