ಬೆಂಗಳೂರು: ಸನಾತನ ಧರ್ಮದ ವಿರುದ್ಧ ಹೇಳಿಕೆ ನೀಡಿದ ಪ್ರಕರಣದಲ್ಲಿ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್‌ಗೆ ಬೆಂಗಳೂರು ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಸನಾತನ ಧರ್ಮದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ನಂತರ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ವಿರುದ್ಧ ದಾಖಲಾಗಿದ್ದ ಪ್ರಕರಣದಲ್ಲಿ ಬೆಂಗಳೂರಿನ ಸಿಟಿ ಕೋರ್ಟ್ ಮಂಗಳವಾರ ಜಾಮೀನು ಮಂಜೂರು ಮಾಡಿದೆ.
ಸನಾತನ ಧರ್ಮದ ನಿರ್ಮೂಲನೆಗಾಗಿ ಚೆನ್ನೈನಲ್ಲಿ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಉದಯನಿಧಿ ಹೇಳಿಕೆ ನೀಡಿದ್ದರು. ಸನಾತನ ಧರ್ಮವು ಎಚ್‌ಐವಿ, ಏಡ್ಸ್, ಮಲೇರಿಯಾ ಇದ್ದಂತೆ ಇದನ್ನು ವಿರೋಧಿಸುವ ಬದಲು ನಿರ್ಮೂಲನೆ ಮಾಡಬೇಕಿದೆ ಎಂದು ಸಚಿವರು ಹೇಳಿದ್ದರು.
ಡಿಎಂಕೆ ನಾಯಕ ಸಚಿವ ಉದಯನಿಧಿ ಸ್ಟಾಲಿನ್‌ಗೆ ಖುದ್ದಾಗಿ ಹಾಜರಾಗುವಂತೆ ಕೋರ್ಟ್ ನೊಟೀಸ್ ನೀಡಿದ್ದು, ಇದರಂತೆ 42ನೇ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಮುಂದೆ ಹಾಜರಾದರು. ಇತ್ತೀಚೆಗೆ ಕರ್ನಾಟಕ ಹೈಕೋರ್ಟ್ ಆಯೋಜಕರ ವಿರುದ್ಧದ ಮುಂದಿನ ತನಿಖೆಗೆ ತಡೆ ನೀಡಿತ್ತು. ಪರಿಹಾರ ನೀಡುವಾಗ ನ್ಯಾಯಾಲಯವು “ಸಹಬಾಳ್ವೆಯೇ ಮಂತ್ರವಾಗಿದೆ, ನಾವು ಪರಸ್ಪರ ಒಪ್ಪದಿದ್ದರೂ ನಾವು ಪರಸ್ಪರ ಗೌರವಿಸಬೇಕು. ಅದು ಸಂವಿಧಾನ ಬಯಸಿದ ಸಂಸ್ಕಾರ. ಇದು ಒಂದು ನಿರ್ದಿಷ್ಟ ಸಮುದಾಯಕ್ಕೆ ಅಲ್ಲ. ಈ ದೇಶವನ್ನು ಉದ್ದೇಶಿಸಲಾಗಿದೆ ಎಂದಿದೆ.