ಸಂವಿಧಾನ ರಕ್ಷಣೆಗಾಗಿ,, ಜಾತ್ಯಾತೀತತೆಯ ಉಳಿವಿಗಾಗಿ ಬಿಜೆಪಿ ಸೋಲಿಸಲು ಯು ಬಸವರಾಜ್ ಕರೆ

ಬೆಂಗಳೂರು : ತ್ಯಾಗ ಬಲಿದಾನದ ಮೂಲಕ ಪಡೆದ ಸ್ವಾತಂತ್ರ್ಯ ಸಂವಿಧಾನ,ಪ್ರಜಾಪ್ರಭುತ್ವವನ್ನು ನಾಶ ಮಾಡಲು ಹೊರಟಿರುವ ಮೋದಿ ಸರ್ಕಾರವನ್ನು ಸೋಲಿಸಬೇಕೆಂದು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಯು ಬಸವರಾಜ್ ಕರೆ ನೀಡಿದರು.

ನಗರದ ಮೈಸೂರು ಕೋ.ಆಪರೇಟಿವ್ ಸೊಸೈಟಿ ಸಮುದಾಯ ಭವನದಲ್ಲಿ ಭಾರತ ಕಮ್ಯುನಿಸ್ಟ್ ( ಮಾರ್ಕ್ಸ್‌ವಾದಿ) ಮೈಸೂರು ಜಿಲ್ಲಾ ಸಮಿತಿವತಿಯಿಂದ ನಡೆದ ರಾಜಕೀಯ ಸಮಾವೇಶವನ್ನು ಉದ್ಘಾಟಿಸಿ ಮಾತನಾಡುತ್ತಾ ಒಳ್ಳೆಯ ದಿನಗಳನ್ನು ತರುತ್ತೇವೆ ಎಂದು ಹೇಳಿ ಜನರನ್ನು ಸಂಕಷ್ಟಕ್ಕೆ ತಳ್ಳಿದ್ದಾರೆ, ಸ್ವಾಮಿನಾಥನ್ ಆಯೋಗದ ವರದಿ ಜಾರಿ ಮಾಡುತ್ತೇವೆಂದ ಸರ್ಕಾರ ಸುಪ್ರೀಂಕೋರ್ಟಿಗೆ ಪ್ರಮಾಣ ಪತ್ರ ಸಲ್ಲಿಸುವ ಮೂಲಕ ಸಲ್ಲಿಸಲು ಸಾಧ್ಯವಿಲ್ಲವೆಂದು ರೈತರಿಗೆ ಮೋಸ ಮಾಡಿದ್ದಾರೆ. ಕೃಷಿ ಲಾಗುವಾಡುಗಳ ಬೆಲೆ ಹೆಚ್ಚಳ ಮಾಡಿ ರೈತರನ್ನ ಸಂಕಷ್ಟಕ್ಕೆ ಹೇಳಿದ್ದಾರೆ. ಯು ಬಸವರಾಜ್

ಕೋವಿಡ್ ಮಹಾಮಾರಿಯ ಸಂದರ್ಭದಲ್ಲಿ ಜನರಿಗೆ ಸೂಕ್ತ ಆರೋಗ್ಯ ವ್ಯವಸ್ಥೆ ಮಾಡದೆ 5 ಲಕ್ಷಕ್ಕೂ ಹೆಚ್ಚು ಜನರ ಸಾವಿಗೆ ಕಾರಣರಾಗಿದ್ದಲ್ಲದೆ, ವಿಶ್ವದ ಮುಂದೆ ದೇಶವನ್ನು ತಲೆತಗ್ಗಿಸುವಂತೆ ಮಾಡಿದ್ದೆ ಮೋದಿಯ ಸಾಧನೆಯಾಗಿದೆ, ಸಂವಿಧಾನದ ಅಡಿಯಲ್ಲೇ ಸರ್ಕಾರ ರಚಿಸಿ ಈಗ ಸಂವಿಧಾನ, ಪ್ರಜಾಪ್ರಭುತ್ವವನ್ನು ನಾಶ ಮಾಡುವಂತಹ ಹಾಗೂ ಪ್ರಜಾಪ್ರಭುತ್ವದ ಮೌಲ್ಯವನ್ನು ಹಾಳು ಮಾಡಿದ್ದಾರೆ. ಪ್ರಭುತ್ವವನ್ನು ಪ್ರಶ್ನೆ ಮಾಡುವವರನ್ನು ಜೈಲಿಗಟ್ಟುವ, ಬೆಳೆಗಳಿಗೆ ನ್ಯಾಯಯುತ ಬೆಲೆ ಕೇಳುವ, ಕೆಲಸಕ್ಕೆ ಕೂಲಿ ಕೇಳುವ ರೈತ-ಕಾರ್ಮಿಕರ ಮೇಲೆ ದೌರ್ಜನ್ಯ ಎಸಿಗಿದ್ದೇ ಮೋದಿಯ ಅವಧಿಯ ಒಳ್ಳೆಯ ದಿನಗಳಾಗಿವೆ ಎಂದು ವ್ಯಂಗ್ಯವಾಡಿದರು. ಯು ಬಸವರಾಜ್

ಇದನ್ನು ಓದಿ : ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸೋಲಿಸುವುದಕ್ಕಾಗಿ ಸ್ಪರ್ಧೆ – ಫಕೀರ ದಿಂಗಾಲೇಶ್ವರ

ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಗ್ರಾಮಾಂತರ ಪ್ರದೇಶದ ರೈತರಿಗೆ ಕೂಲಿಕಾರರಿಗೆ ಕೆಲಸದ ಭದ್ರತೆ ನೀಡುವ ಈ ಯೋಜನೆಯಲ್ಲಿ ನೂರು ದಿನಗಳ ಕೆಲಸ ನೀಡಬೇಕು, ಒಂದು ವೇಳೆ ಕೆಲಸ ನೀಡದಿದ್ದರೆ ನಿರುದ್ಯೋಗ ಭತ್ಯೆ ನೀಡಬೇಕೆಂಬ ಅಂಶವನ್ನ ತಿದ್ದುಪಡಿ ಮಾಡಿದ್ದು, ಮೋದಿ ಸರ್ಕಾರದ ಕೂಲಿಕಾರ ವಿರೋಧಿ ನೀತಿಯನ್ನ ಎದ್ದು ತೋರಿಸುತ್ತದೆ, ಮತ್ತೊಂದು ಕಡೆ ತೀವ್ರ ರೀತಿಯಲ್ಲಿ ಬೆಲೆ ಏರಿಕೆ ಮಾಡಿ ಬಡವರನ್ನು ಸಂಕಷ್ಟಕ್ಕೆ ತಳ್ಳಿರುವಂತ ಮೋದಿ ಸರ್ಕಾರವನ್ನು ಕಿತ್ತೊಗೆಯದಿದ್ದರೆ ರೈತ ಕಾರ್ಮಿಕರಿಗೆ ಸಂಕಷ್ಟ ತಪ್ಪಿದ್ದಲ್ಲ ಎಂದರು.

ಸಂವಿಧಾನ ರಕ್ಷಣೆಗಾಗಿ,, ಜಾತ್ಯಾತೀತತೆಯ ಉಳಿವಿಗಾಗಿ ಬಿಜೆಪಿ ಸೋಲಿಸಲು ಯು ಬಸವರಾಜ್ ಕರೆ

ಸಮಾವೇಶದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾರ್ಯದರ್ಶಿ ಜಗದೀಶ್ ಸೂರ್ಯ ಮಾತನಾಡಿ ಮೈಸೂರು ಜಿಲ್ಲೆಗೆ ಬಿಜೆಪಿಯ ಕೊಡುಗೆ ಶೂನ್ಯ ನೋಟ್ ಬ್ಯಾನ್‌,ಅವೈಜ್ಞಾನಿಕ ಜಿಎಸ್‌ಟಿಯನ್ನು ಜಾರಿಗೆ ತರುವ ಮೂಲಕ ಹಾಗೂ ಕೋವಿಡ್ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಸುಮಾರು ಮೂರು ಲಕ್ಷ ಉದ್ಯೋಗ ನಷ್ಟವಾಗಿದೆ 26,000 ಸಣ್ಣ ಹಾಗೂ ಗುಡಿ ಕೈಗಾರಿಕೆಗಳು ಮುಚ್ಚಿವೆ ಇದರಿಂದಾಗಿ ನೂರಾರು ಕುಟುಂಬ ಬೀದಿ ಪಾಲಾಗಿದೆ ಆದರೂ ಮೋದಿ ಸರ್ಕಾರ ಇವುಗಳ ಪುನಶ್ಚೇತನಕ್ಕೆ ಹಾಗೂ ಉದ್ಯೋಗದ ಸೃಷ್ಟಿಗೆ ಯಾವುದೇ ಕ್ರಮ ಕೈಗೊಂಡಿಲ್ಲ ರೈತ ವಿರೋಧಿ ನೀತಿಗಳಿಂದಾಗಿ ಸೂಕ್ತ ಬೆಲೆ ಸಿಗದೆ ಜಿಲ್ಲೆಯಲ್ಲಿ 2020 ರಿಂದ ಇಲ್ಲಿಯವರೆಗೆ ಸುಮಾರು 310 ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಾಗಿದ್ದರೂ ರೈತರ ನೆರವಿಗೆ ಬಾರದ ಮೋದಿ ಸರ್ಕಾರವನ್ನು ಜನಸಾಮಾನ್ಯರು ಏಕೆ ಬೆಂಬಲಿಸಬೇಕು ಎಂದು ಕೇಳಿದರು. ಯು ಬಸವರಾಜ್

ಅಲ್ಲದೆ ಮೈಸೂರಿನ ಪ್ಯಾರಿಸ್ ಮಾಡುವುದಾಗಿ ಹತ್ತು ವರ್ಷದ ಹಿಂದೆ ಹೇಳಿದ್ದ ಮೋದಿ ಮೈಸೂರಿಗೆ ಹತ್ತಾರು ಬಾರಿ ಬಂದರು ಇಲ್ಲಿನ ಪ್ರವಾಸೋದ್ಯಮದ ಬಗ್ಗೆ ಒಂದು ಮಾತನಾಡದಿರುವುದು ಮೋದಿಯ ಜನ ವಿರೋಧಿ ನೀತಿಯನ್ನು ಎತ್ತಿ ತೋರಿಸುತ್ತದೆ ಆದ್ದರಿಂದ ಈ ಬಾರಿ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಸಮಿತಿ ಸದಸ್ಯರಾದ ಕೆ.ಬಸವರಾಜ್,ಎನ್. ವಿಜಯಕುಮಾರ್,ಜಿ.ಜಯರಾಂ, ಲ.ಜಗನ್ನಾಥ್, ವಿ.ಬಸವರಾಜ್, ಬಿ ಎಂ ಶಿವಣ್ಣ ಜಿ ರಾಜೇಂದ್ರ ಉಪಸ್ಥಿತರಿದ್ದರು ಸಮ್ಮೇಳನವು ಬಿಜೆಪಿಯನ್ನು ಸೋಲಿಸಿ ಇಂಡಿಯಾ ಒಕ್ಕೂಟವನ್ನ ಗೆಲ್ಲಿಸಲು ನಿರ್ಣಯವನ್ನು ಕೈಗೊಂಡಿತ್ತು. ಯು ಬಸವರಾಜ್

ಇದನ್ನು ನೋಡಿ : ನಿರ್ಮಲಾ ಸೀತಾರಾಮನ್‌ರವರೆ, ಯಾಕಿಷ್ಟು ಸುಳ್ಳು ಹೇಳ್ತೀರಿ?! Janashakthi Media

Donate Janashakthi Media

Leave a Reply

Your email address will not be published. Required fields are marked *