ನಾಪತ್ತೆಯಾಗಿದ್ದ ಇಬ್ಬರು ಬಾಲಕಿಯರು ಬಾವಿಯಲ್ಲಿ ಶವವಾಗಿ ಪತ್ತೆ

ಕೋಲಾರ: ಅಕ್ಟೋಬರ್‌ 2ರಂದು ನಾಪತ್ತೆಯಾಗಿದ್ದ ಇಬ್ಬರು ಬಾಲಕಿಯರು ಅಕ್ಟೋಬರ್‌ 4ರಂದು ಬಾವಿಯಲ್ಲಿ ಶವವಾಗಿ ಪತ್ತೆಯಾದ ಘಟನೆ ಜಿಲ್ಲೆಯ ಮುಳಬಾಗಿಲು ತಾಲೂಕಿನ ಕುಪ್ಪಂಪಾಳ್ಯ ಬಳಿ ನಡೆದಿದೆ.

ಮೃತರನ್ನು ಧನ್ಯ ಬಾಯಿ (13) ಚೈತ್ರ ಬಾಯಿ (13) ಎಂದು ಗುರುತಿಸಲಾಗಿದೆ. ಈ ಬಾಲಕಿಯರು ಅಕ್ಟೋಬರ್.2ರಂದು ಮುಳಬಾಗಿಲು ತಾಲ್ಲೂಕಿನ ಯಳಚೇಪಲ್ಲಿಯ ನಿವಾಸದ ಮುಂದೆ ಆಟವಾಡುತ್ತಿದ್ದರು. ಈ ವೇಳೆ ನಾಪತ್ತೆಯಾಗಿದ್ದರು. ಇಬ್ಬರೂ ಸರ್ಕಾರಿ ಶಾಲೆಯಲ್ಲಿ ಏಳನೇ ತರಗತಿಯಲ್ಲಿ ಓದುತ್ತಿದ್ದರು.

ಇದನ್ನೂ ಓದಿ: ಕೃಷ್ಣರಾವ್‌ ಸಂತ್ರಸ್ತ ಯುವತಿಯನ್ನು ವಿವಾಹವಾಗದಿದ್ದರೆ ಆತನ ಮನೆಯಲ್ಲಿ ಧರಣಿ: ಪ್ರತಿಭಾ ಕುಳಾಯಿ

ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಹಾಗೂ ಮುಳಬಾಗಿಲು ಗ್ರಾಮಾಂತರ ಪೊಲೀಸರು ಭೇಟಿ‌ ನೀಡಿ ಪರಿಶೀಲಿಸಿದರು.

ದುಷ್ಕರ್ಮಿಗಳು ಬಾಲಕಿಯನ್ನು ಕೊಂದಿರುವ ಶಂಕೆ ವ್ಯಕ್ತವಾಗಿದೆ. ಮುಳಬಾಗಿಲು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ‌ತನಿಖೆ‌ ನಡೆಸುತ್ತಿದ್ದಾರೆ.

ಇದನ್ನೂ ನೋಡಿ: ಧರ್ಮಸ್ಥಳ | ಪ್ರಶ್ನೆಗಳಿಗೆ ಉತ್ತರಿಸುವ ಜವಾಬ್ದಾರಿ ಧರ್ಮಾಧಿಕಾರಿಯ ಮೇಲಿದೆ – ಎಸ್‌ ಜಿ ಸಿದ್ದರಾಮಯ್ಯ Janashakthi

Donate Janashakthi Media

Leave a Reply

Your email address will not be published. Required fields are marked *