ಗ್ಯಾಸ್ ಸೋರಿಕೆಯಾಗಿ ಇಬ್ಬರು ಮೃತ: 6 ಅಧಿಕಾರಿಗಳ‌ ವಿರುದ್ಧ ಎಫ್‌ಐಆರ್

ಸುರತ್ಕಲ್: ನಗರದ ಎಂಆರ್‌ಪಿಎಲ್ ನ ಶೇಖರಣಾ ಘಟಕದಲ್ಲಿ ಗ್ಯಾಸ್ ಸೋರಿಕೆಯಾಗಿ ಇಬ್ಬರು ಮೃತಪಟ್ಟ ಘಟನೆ ಇತೀಚೆಗೆ ನಡೆದಿದ್ದೂ, ಅದರ ಸಂಬಂಧ ಎಂಆರ್‌ಪಿಎಲ್ ಮ್ಯಾನೇಜರ್ ಸೇರಿ 6 ಮಂದಿ ಅಧಿಕಾರಿಗಳ‌ ವಿರುದ್ಧ ಜುಲೈ 15ರಂದು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸೋರಿಕೆ

ಘಟನೆಗೆ ಸಂಬಂಧಿಸಿ ದುರ್ಘಟನೆಯಲ್ಲಿ ಮೃತಪಟ್ಟಿದ್ದ ಉತ್ತರ ಪ್ರದೇಶ ಪ್ರಯಾಗ್ ರಾಜ್ ನಿವಾಸಿ ದೀಪ್ ಚಂದ್ರ ಅವರ ಪತ್ನಿ ಅನಿತಾ ಅವರು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.‌

ಇದನ್ನೂ ಓದಿ: ಇಬ್ಬರು ರೈತರು ಆತ್ಮಹತ್ಯೆ: ಕುಟುಂಬಕ್ಕೆ ಪರಿಹಾರ ನೀಡಲು ಸಂತೋಷ ಲಾಡ್ ಭರವಸೆ

ಎ1 ಆರೋಪಿಯಾಗಿ ಎಂಆರ್‌ಪಿಎಲ್ ನ ಮ್ಯಾನೇಜರ್, ಒಎಂ ಆಯಂಡ್ ಎಸ್‌ಸಿಜಿಎಂ (ಎ2), ಒಎಂ ಆಯಂಡ್ ಎಸ್ ಸೆಕ್ಷನ್ ನ ಜಿಎಂ (ಎ3), ಒಎಂ ಆಯಂಡ್ ಎಸ್ ಸೆಕ್ಷನ್ ನ ಸಿಎಂ (ಎ4), ಒಎಂ ಆಯಂಡ್ ಎಸ್ ನ ಎಸ್ ಐಸಿ (ಎ5) ಹಾಗೂ ಒಎಂಎಸ್ ಸೆಕ್ಷನ್ ನ ಪಿಎಸ್ (ಎ6) ಆರೋಪಿಗಳೆಂದು ಅನಿತಾ ಅವರ ದೂರು ಆಧರಿಸಿ ಸುರತ್ಕಲ್ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ.

ಸದ್ಯ ಆರೋಪಿಗಳ ಬಂಧನ ಪ್ರಕ್ರಿಯೆ ಆರಂಭಿಸಿರುವ ತನಿಖಾಧಿಕಾರಿಯಾಗಿರುವ ಸುರತ್ಕಲ್ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷರಾದ ಪ್ರಮೋದ್ ಕುಮಾರ್ ಅವರ ತಂಡ, ಎಲ್ಲಾ ಆರೋಪಿಗಳಿಗೆ ನೋಟಿಸ್ ಜಾರಿ ಮಾಡಿದೆ ಎಂದು ತಿಳಿದು ಬಂದಿದೆ.

ಇದನ್ನೂ ನೋಡಿ: 17 ಕೋಟಿ ಜನಸಂಖ್ಯೆ ಬಡತನದಿಂದ ಹೊರ ಬಂದಿರುವ ವರದಿಯ‌ ನೈಜತೆಯೇನು?

Donate Janashakthi Media

Leave a Reply

Your email address will not be published. Required fields are marked *