ವಾಷಿಂಗ್ಟನ್ ಜ 13 : ಅಮೆರಿಕದ ಅಧ್ಯಕ್ಷರಾಗಿ ಜೋ ಬಿಡೆನ್ ಜನವರಿ 20ರಂದು ಅಧಿಕಾರ ಸ್ವೀಕರಿಸಲಿದ್ದು, ಇದೀಗ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದಾರೆ. ಜನವರಿ 24ರ ವರೆಗೆ ವಾಷಿಂಗ್ಟನ್ ಡಿ.ಸಿಯಲ್ಲಿ ತುರ್ತು ಪರಿಸ್ಥಿತಿ ಹೇರಲಾಗಿದೆ. ಜೋ ಬಿಡೆನ್ ಅಧಿಕಾರ ಸ್ವೀಕಾರದ ವೇಳೆ ಟ್ರಂಪ್ ಬೆಂಬಲಿಗರಿಂದ ಭಾರೀ ಹಿಂಸಾಚಾರ ನಡೆಯುವ ಸಾಧ್ಯತೆ ಇದೆ.
ಹಿಂದೆಂದೂ ಕಂಡರಿಯ ದಂತಹ ಕ್ಯಾಪಿಟಲ್ ಹಿಲ್ ದಾಂಧಲೆಯನ್ನು ಕಂಡ ಅಮೆರಿಕದಲ್ಲಿ ಮತ್ತೂಮ್ಮೆ ಹಿಂಸಾಚಾರ ಸ್ಫೋಟಿಸಲಿದೆ ಯೇ? ಎಂಬ ಪ್ರಶ್ನೆ ಈಗ ಮತ್ತೆ ಎದುರಾಗಿದೆ. ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬೆಂಬಲಿಗರು ದೊಡ್ಡ ಮಟ್ಟದ ಹಿಂಸಾಚಾರ ಹಾಗೂ ಪ್ರತಿಭಟನೆ ನಡೆಸಲು ಸಂಚು ರೂಪಿಸಿದ್ದಾರೆ. ಟ್ರಂಪ್ ಪರವಾದ ಆನ್‌ಲೈನ್ ನೆಟ್‌ವರ್ಕ್‌ಗಳಲ್ಲಿ ಅಮೆರಿಕದ ಎಲ್ಲ 50 ಪ್ರಾಂತ್ಯಗಳು ಹಾಗೂ ವಾಷಿಂಗ್ಟನ್ ಡಿಸಿಯಲ್ಲಿ ಸಶಸ್ತ್ರ ಹೋರಾಟ ಸಹಿತ ಬೇರೆ ಬೇರೆ ದಿನಾಂಕಗಳಂದು ಪ್ರತಿಭಟನೆ ಹಮ್ಮಿಕೊಳ್ಳುವ ಕುರಿತು ಚರ್ಚೆ ನಡೆದಿದೆ ಎಂದು ಎಫ್ಬಿಐ ಹೇಳಿದೆ.
ಟ್ರಂಪ್ ತುರ್ತುಪರಿಸ್ಥಿತಿ ಘೋಷಿಸಿರುವುದಕ್ಕೆ ವಿವಿಧ ದೇಶಗಳು ಖಂಡನೆ ಹಾಗೂ ಆಕ್ರೋಶ ವ್ಯಕ್ತಪಡಿಸಿವೆ. ಅಧಿಕಾರ ಬಿಟ್ಟು ಕೊಡದೆ ಟ್ರಂಪ ಉದ್ಧಟತನ ತೋರುತ್ತಿದ್ದಾರೆ. ಇದು ಪ್ರಜಾಪ್ರಭತ್ವ ವ್ಯವಸ್ಥೆಗೆ ಎಸಗುತ್ತಿರುವ ದ್ರೋಹ, ಟ್ರಂಪ್ ನ ದುರಹಂಕಾರಿ ವರ್ತನೆಗೆ ತಡೆ ಒಡ್ಡಬೇಕು ಎಂದು ಒತ್ತಾಯಿಸಿವೆ.
ಇದನ್ನೂ ಓದಿ : ಟ್ರಂಪ್ ಬೆಂಬಲಿಗರಿಂದ ವೈಟ್ ಹೌಸ್ ಮೇಲೆ ದಾಳಿ