ಹಸಿರು ಬಣ್ಣಕ್ಕೆ ತಿರುಗುತ್ತಿದ್ದಾಳೆ ತುಂಗಭದ್ರೆ: ವಿಷಕಾರಿಯಾಗುತ್ತಿರುವ ನೀರಿನ ಬಗ್ಗೆ ಜನರಲ್ಲಿ ಆತಂಕ

ಗದಗ: ತುಂಗಭದ್ರಾ ಜಲಾಶಯದ ನೀರು ವಿಷಕಾರಿಯಾಗುತ್ತಿದ್ದು, ನೀರು ಹಸಿರು ಬಣ್ಣಕ್ಕೆ ತಿರುಗುವುದು ಜನರ ಆತಂಕಕ್ಕೆ ಕಾರಣವಾಗಿದೆ. ತುಂಗಭದ್ರೆ

ಲಾಶಯ ತುಂಬುತ್ತಿದಂತೆಯೇ ತುಂಗಭದ್ರಾ ಜಲಾಶಯದ ನೀರು  ಒಂದು ತಿಂಗಳು ಕಳೆಯುತ್ತಿದ್ದಂತೆ ಇಡೀ ನೀರು ಹಸಿರು ಬಣ್ಣಕ್ಕೆ ತಿರುಗುತ್ತದೆ. ಜಲಾಶಯದ ಹಿನ್ನೀರು ಪ್ರದೇಶದಲ್ಲಿ ನೀರೆಲ್ಲಾ ಹಸಿರು ಬಣ್ಣಕ್ಕೆ ತಿರುಗಿ ನೀರು ಸಂಪೂರ್ಣವಾಗಿ ವಿಷಕಾರಿಯಾಗುತ್ತಿದೆ. ಪ್ರತಿ ವರ್ಷ ನೀರು ಹಸಿರು ಬಣ್ಣಕ್ಕೆ ತಿರುಗುವುದು ಜನರ ಆತಂಕಕ್ಕೆ ಕಾರಣವಾಗಿದೆ. ಈ ವಿಷಕಾರಿ ನೀರು ಕೇವಲ ಮನುಷ್ಯರಿಗೆ ಮಾತ್ರ ಅಲ್ಲ, ನೀರಿನಲ್ಲಿರುವ ಜಲಚರಗಳಿಗೂ ಹಸಿರು ಬಣ್ಣದ ನೀರು ಕುತ್ತು ತಂದಿದೆ.

ಇದನ್ನೂ ಓದಿ : ಹಣವಿರುವ ಚೀಲವನ್ನು ಮರೆತು ಬಸ್ಸಿನಲ್ಲೇ ಬಿಟ್ಟು ಹೋಗಿದ್ದ ವೃದ್ದೆ:ಹಣವನ್ನು ಹಿಂದಿರುಗಿಸಿ ಪ್ರಾಮಾಣಿಕತೆ‌ ಮೆರೆದ ವಾಯುವ್ಯ ಸಾರಿಗೆ ಸಂಸ್ಥೆ

ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಹಮ್ಮಿಗಿ ಗ್ರಾಮದಲ್ಲಿ ಶಿಂಗಟಾಲೂರು ಏತನೀರಾವರಿ ಯೋಜನೆಯಡಿ ತುಂಗಭದ್ರಾ ನದಿಗೆ ನಿರ್ಮಿಸಿರೋ ಬ್ರಿಜ್ ಕಂ ಬ್ಯಾರೇಜ್ ನೀರೆಲ್ಲಾ ಹಸಿರು ಬಣ್ಣಕ್ಕೆ ತಿರುಗಿ ನೀರು ಸಂಪೂರ್ಣವಾಗಿ ವಿಷಕಾರಿಯಾಗುತ್ತಿದೆ. ಗದಗ-ಬೆಟಗೇರಿ ಅವಳಿ ನಗರ, ಗದಗ, ಮುಂಡರಗಿ ಹಾಗೂ ಶಿರಹಟ್ಟಿ ಭಾಗದ ಪಟ್ಟಣ ಹಾಗೂ ಗ್ರಾಮಗಳಿಗೆ ಕುಡಿಯುವ ನೀರಿಗೆ ಆಧಾರ ಇದೇ ನೀರು. ನೀರು ಹಸಿರಾಗಿದ್ರಿಂದಾಗಿ ಜನರಲ್ಲಿ ಹೆಚ್ಚದ ಆತಂಕ ತಂದಿದೆ.

ಕಾರ್ಖಾನೆಗಳಿಂದ ನದಿಗೆ ಬಿಡುವ ವಿಷಕಾರಿ ತ್ಯಾಜ್ಯ, ಮತ್ತೊಂದೆಡೆ ಜಲಾನಯನ ಪ್ರದೇಶದಲ್ಲಿ ಕೃಷಿ ಭೂಮಿಯಲ್ಲಿ ಅತಿಹೆಚ್ಚು ರಸಗೊಬ್ಬರ ಹಾಗೂ ಔಷಧಿ ಬಳಕೆ ಮಾಡುವುದರಿಂದ ಇದರ ತ್ಯಾಜ್ಯದ ನೀರು ನೇರವಾಗಿ ನದಿಗೆ ಹರಿದು ಬರುತ್ತಿದೆ. ಕೂಡಲೇ ಅಧಿಕಾರಿಗಳು ನೀರನ್ನ ಲ್ಯಾಬ್ ಗೆ ಕಳಿಸಿ ಪರೀಕ್ಷಿಸಲು ಸ್ಥಳೀಯರ ಮನವಿ. ತುಂಗಭದ್ರೆ

ಇದನ್ನೂ ನೋಡಿ : ಕಲಬುರಗಿ | ಬಹುತ್ವ ಸಂಸ್ಕತಿ ಭಾರತೋತ್ಸವ-2025 Janashakthi Media

Donate Janashakthi Media

Leave a Reply

Your email address will not be published. Required fields are marked *