ಸುರಕ್ಷಿತವಾಗಿ ಸಚಿವರೊಂದಿಗೆ ಬೆಂಗಳೂರು ಸೇರಿದ ಅಪಾಯದಲ್ಲಿದ್ದ ಚಾರಣಿಗರು

ಬೆಂಗಳೂರು: ರಾಜ್ಯ ಸರ್ಕಾರ ಕೊನೆಗೂ ಉತ್ತರಾಖಂಡದ ಹವಾಮಾನ ವೈಪರೀತ್ಯಕ್ಕೆ ತೆರಳಿದ್ದವರಲ್ಲಿ ರಕ್ಷಿಸಲ್ಪಟ್ಟ 13 ಮಂದಿಯನ್ನು ಗುರುವಾರ ತಡರಾತ್ರಿ ಬೆಂಗಳೂರಿಗೆ ಕರೆತರುವಲ್ಲಿ ಯಶಸ್ವಿಯಾಗಿದೆ. ಸುರಕ್ಷಿತ

ಬೆಂಗಳೂರಿನ ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಚಿವ ಕೃಷ್ಣಬೈರೆಗೌಡ ಅವರ ಜೊತೆ ವಿಮಾನದಲ್ಲಿ 13 ಮಂದಿ ಕನ್ನಡಿಗರು ಆಗಮಿಸಿದ್ದಾರೆ. ವಿಮಾನ ನಿಲ್ದಾಣದ ಬಳಿ ಕಾದಿದ್ದ ಅವರ ಕುಟುಂಬಸ್ಥರು ಸುರಕ್ಷಿತವಾಗಿ ಬಂದ ಚಾರಣಿಗರನ್ನು ಆತ್ಮೀಯವಾಗಿ ಖುಷಿಯಿಂದ ಬರಮಾಡಿಕೊಂಡು ಸಂತಸ ವ್ಯಕ್ತಪಡಿಸಿದರು.

ಇದನ್ನು ಓದಿ : ಬಿಜೆಪಿ ಸಂಸದೆ ಕಂಗನಾ ರಾನಾವತ್‌ಗೆ ಕಪಾಳಮೋಕ್ಷ

ಈ ಬಗ್ಗೆ ಸಚಿವ ಕೃಷ್ಣಬೈರೇಗೌಡ ಟ್ವಿಟ್ಟರ್‌ನಲ್ಲಿ ಹಿಮಾಪಾತದಲ್ಲಿ ಮೃತರಾದ ಕನ್ನಡಿಗರ ಮೃತದೇಹಗಳನ್ನು ದೆಹಲಿಯಿಂದ ಬೆಳಿಗ್ಗೆ 5.30 ಕ್ಕೆ ವಿಮಾನಗಳ ಮೂಲಕ ಸಾಗಿಸಲಾಗುತ್ತದೆ. ನಾವು ಆದಷ್ಟು ಬೇಗ ಆಯಾ ಸಂಸ್ಥೆಗಳೊಂದಿಗೆ ವಿಮಾನಗಳ ವೇಳಾಪಟ್ಟಿಯನ್ನು ಪೋಸ್ಟ್ ಮಾಡುತ್ತೇವೆ. ಬೆಂಗಳೂರಿನಲ್ಲಿ ಸರ್ಕಾರಿ ಅಧಿಕಾರಿಗಳು ಪಾರ್ಥಿವ ಶರೀರವನ್ನು ಸ್ವೀಕರಿಸಲಿದ್ದಾರೆ ಎಂದರು.

ವಿಮಾನ ನಿಲ್ದಾಣದಿಂದ ಮೃತರ ಮನೆಗಳಿಗೆ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ವಿಪತ್ತು ನಿರ್ವಹಣಾ ಆಯುಕ್ತ ಶಿವಾನಂದ್ ಐಎಎಸ್ (9449839844) ಅಧಿಕಾರಿಗಳ ತಂಡದೊಂದಿಗೆ ವಿಮಾನ ನಿಲ್ದಾಣದಲ್ಲಿದ್ದು ಸಮನ್ವಯ ಸಾಧಿಸಲಿದ್ದಾರೆ. ಶುಕ್ರವಾರ ಅವರ ಪಾರ್ಥಿವ ಶರೀರಗಳನ್ನು ಬೆಂಗಳೂರಿಗೆ ತರಲಾಗುವುದು ಎಂದಿದ್ದಾರೆ.

ಇದನ್ನು ನೋಡಿ : ಬಿಜೆಪಿಯನ್ನು ಕೈ ಬಿಟ್ಟ ಐದು ರಾಜ್ಯಗಳು Janashakthi Media

Donate Janashakthi Media

Leave a Reply

Your email address will not be published. Required fields are marked *