ಸಾರಿಗೆ ನೌಕರ ಪ್ರತಿಭಟನೆ : ಜಂಟಿ ಸಭೆಯ ಭರವಸೆ

ತುಮಕೂರು: ತುಮಕೂರು ವಿಭಾಗಿಯ ಕಛೇರಿ ಎದುರು ಸಾರಿಗೆ ನೌಕರರಿಗೆ ಕೆಲಸದ ಒತ್ತಡ ವಿರೋಧಿಸಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಸಂಘದಿಂದ (CITU ಸಂಯೋಜಿತ) ಪತ್ರಿಭಟನೆ ನಡೆಸಲಾಯಿತು.

ತುಮಕೂರು ವಿಭಾಗದಲ್ಲಿಯೂ ಕಾರ್ಮಿಕರ ಕೊರತೆ ಇದ್ದು. ತಾಂತ್ರಿಕ ಸಿಬ್ಬಂದಿಗಳ ಕೊರತೆ- ಉತ್ತಮ ಗುಣ ಮಟ್ಟದ ಬಿಡಿಬಾಗಗಳು ಸಮಯಕ್ಕೆ ಸರಿಯಾಗಿ ಸರಬರಾಜು ಆಗುತ್ತಿಲ್ಲ. ಹಳೇ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಸಾರಿಗೆ ಕಾರ್ಮಿಕರ ಹೆಚ್ಚಿರುವ ಕೆಲಸದ ಹೊರೆಯನ್ನು ಪರಿಗಣಿಸದೆ ಇರುವುದು .ಸೇಡಿನ ಕ್ರಮವಾಗಿ ಶಿಕ್ಷಿಸಲು, ಇಂಕ್ರಿಮೆಂಟ್ ಕಡಿತ ಮಾಡಿಸೋದು ಗ್ಲಾಸ್ ಏರ್ ಕ್ರಾಕ್ ಆದಲ್ಲಿ ಚಾಲಕರನ್ನು ಹೊಣೆಗಾರರನ್ನಾಗಿ ಮಾಡಿ ರೂ. 45೦೦ ದಿಂದ 5೦೦೦ ದವರೆಗೆ ದಂಡ ಹಾಕಿ ಸಂಬಳದಲ್ಲಿ ಕಡಿತ ಮಾಡುವುದು , ಫಾರಂ 4 ನ್ನು ಪದೇ- ಪದೇ ಬದಲಾಯಿಸುತ್ತಿರುವುದು ಮೊದಲಾದ ವಿಷಯ ಕುರಿತು ಆಗ್ರಹಿಸಿ ಇಂದು ಸಾರಿಗೆ ನೌಕರರ ಸಂಘ ಪ್ರತಿಭಟನೆ ನಡಿಸಿತು.

ಪತ್ರಿಭಟನಾಕಾರರ ಮನವಿ ಸ್ವಿಕರಿದ ವಿಭಾಗಿಯ ನಿಯಂತ್ರಣಾಧಿಕಾರಿಗಳಾದ ಗಜೆಂದ್ರ ಕುಮಾರ್ ಅವರು ಸಮಸ್ಯೆಗಳ ಬಗೆಹರಿಸಲು ಜಂಟಿ ಸಭೆನಡೆಸುವುದಾಗಿ , ಅನ್ಯಾಯದ ಕ್ರಮಗಳು ಅಗಿದಾರೆ ಪರಿಶಿಲಿಸಿ ಕ್ರಮ ವಹಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಸಂಗಟನೆಯ ಮುಖಂಡರು ತಿಳಿಸಿದ್ದಾರೆ.

ಪ್ರತಿಭಟನೆಯನ್ನು ಉದ್ದೆಶಿಸಿ ಸಂಘದ ರಾಜ್ಯಾಧ್ಯಕ್ಷ ಹೆಚ್.ಡಿ . ರೆವಪ್ಪ ಅವರು ಮಾತನಾಡಿ ಸಾರಿಗೆ ನಿಗಮಗಳಲ್ಲಿ ಕಾರ್ಮಿಕ ಸ್ನೆಹಿ ಅಡಳಿತ ಇಲ್ಲದೆ ಇರುವುದು ಅನ್ಯಾಯದ ಕ್ರಮ ವಾಗಿದೆ ಎಂದು ತಮ್ಮ ಕಳವಳವನ್ನ ವ್ಯಕ್ತಪಡಿಸಿದರು. ವಿಪರಿತ ಒತ್ತಡದಲ್ಲಿ ಕೆಲಸ ನಿರ್ವಹಿಸುವ ಸಾರಿಗೆ ಕಾರ್ಮಿಕರ ಸಮಸ್ಯೆಗಳನ್ನು ಬಗೆ ಹರಿಸಲು ಒಂದು ವ್ಯವಸ್ಥೆ ನಿರ್ಮಿಸಲು ಒತ್ತಾಯಿಸಿಯಿಸಿದ್ದಾರೆ.

ಸಂಘದ ರಾಜ್ಯ ಪ್ರಧಾನ ಕಾರ್ಯಧರ್ಶಿ, ಹೆಚ್.ಎಸ್. ಮಂಜುನಾಥ್ ಅವರು ಮಾತನಾಡಿ ಘಟಕ / ವಿಭಾಗ ಮಟ್ಟದಲ್ಲಿ ಕಾರ್ಮಿಕರಿಗೆ ಅಗುತ್ತಿರುವ ಕೆಲಸದ ಹೆಚ್ಚಳ, ಕಿರುಕುಳಗಳು ಮತ್ತು ಭಷ್ಟಚಾರಕ್ಕೆ ಕಡಿವಾಣ ಹಾಕಿ ಕಾರ್ಮಿಕರ ಅಹಾವಲು ಅಲಿಸುವಂತಾಗ ಬೇಕು ಎಂದು ತಿಳಿಸಿದರು. ಮೋಹನ್ ದಾಸ್ ಮತ್ತಿರರ ಮೇಲಿನ ಸೇಡಿನ ಕ್ರಮ ನಿಲ್ಲಿಸಬೆಕು. ಇಂಕ್ರೀಮೇಟ್ ಕಡಿತ ,ಅಕ್ರಮ ದಂಡಗಳನ್ನು ವಾಪ್‌ಸ್ಸ ಮಾಡಬೇಕು. ಸಂಘದ ವಿಭಾಗಿಯ ಘಟಕದ ಗೌರವ ಅಧ್ಯಕ್ಷರಾದ ಸೈಯದ್ ಮುಜೀಬ್ ಅವರು ಮಾತನಾಡಿ ಸ್ವಭಾವಿಕ ನ್ಯಾಯದಡಿಯಲ್ಲಿ ಸಹ ನಡೆದು ಕೊಳ್ಳದ ನಡೆಗಳು ಅಸಂವಿಧಾನಿಕ , ಒತ್ತಡದಿಂದ ಅಲ್ಲ ಕೆಲಸ ಮಾಡಿಸಬೇಕಾದ್ದು ನೌಕರರ ತುಂಬು ಮನಸ್ಸಿನಿಂದ ಕೆಲಸ ಮಾಡುವ ವಾತಾವರಣ ನಿರ್ಮಾಣ ಮುಖ್ಯ. ಸಾರಿಗೆ ಸಂಸ್ಥೆಯ ಕಾರ್ಮಿಕರ ವಿರೋಧಿ ನಡೆಗಳಿಗೆ ಕಾರ್ಮಿಕ ನ್ಯಾಯಲಯಗಳಲ್ಲಿ ಸಾರಿಗೆ ಕಾರ್ಮಿಕ ಸಾವಿರಾರು ಪ್ರಕರಣಗಳು ಬಾಕಿ ಇರುವುದೆ ಸಾಕ್ಷಿ, ಮನಪರಿರ್ವತೆ ಮುಖ್ಯವಾಗಬೇಕೆ ವಿನಹ:  ಬರಿ ಶಿಕ್ಷೆಯಲ್ಲ ಎಂದು ಕಳವಳವನ್ನ ವ್ಯಕ್ತಪಡಿಸಿದರು.

ಇದನ್ನೂಓದಿ:ಸಾರಿಗೆ ನೌಕರರ ಹೋರಾಟಕ್ಕೆ ಆಂಧ್ರ ಸಾರಿಗೆ ನೌಕರರ ಸಂಘದ ಬೆಂಬಲ

ಪ್ರತಿಭಟನೆಯಲ್ಲಿ ಸಂಘದ ವಿಭಾಗಿಯ ಘಟಕದ ಅಧ್ಯಕ್ಷರಾದ ದೇವರಾಜು , ಪ್ರಧಾನ ಕಾರ್ಯಧರ್ಶಿ ಸಮಿವುಲ್ಲಾ, ಖಚಾಂಚಿ  ರಾಜಣ್ಣ, ಉಪಾಧ್ಯಕ್ಷರಾದ ಮೋಹನ್ ದಾಸ್,  ಲಕ್ಷ್ಮನಾರಾಯಣ, ಬಿಎಂಟಿಸಿ ನೌಕರರ ಸಂಘದ ಶ್ರೀಮತಿ ಕುಸುಮಾ ಮತ್ತಿತರು ಉಪಸ್ಥಿತರಿದ್ದರು.

 

 

Donate Janashakthi Media

Leave a Reply

Your email address will not be published. Required fields are marked *