ವಿಜಯಪುರ: ವಿಜಯಪುರದ ಕೇಂದ್ರ ಬಸ್ ನಿಲ್ದಾಣದಲ್ಲಿ ಪ್ಯಾಂಟ್, ಶರ್ಟ್ ಧರಿಸಿ ಭಿಕ್ಷೆ ಬೇಡುತ್ತಿದ್ದ ಯುವತಿಯನ್ನು ಲಿಂಗತ್ವ ಅಲ್ಪಸಂಖ್ಯಾತರ ಗುಂಪೊಂದು ಹಲ್ಲೆ ನಡೆಸಿ, ಬೆತ್ತಲೆಗೊಳಿಸಿದ ಪ್ರಕರಣ ತಡವಾಗಿ ಬಂದಿದೆ.
ನೋಡೋದಕ್ಕೆ ಲಿಂಗತ್ವ ಅಲ್ಪಸಂಖ್ಯಾತರಂತೆ ಕಾಣುತ್ತಿದ್ದ ಯುವತಿಯನ್ನು ಟ್ರಾನ್ಸ್ -ಜೆಂಡರ್ಸ್ ಎಂದೇ ಭಾವಿಸಿದ್ದಾರೆ. ಎಲ್ಲಿಂದಲೋ ಬಂದು ಇಲ್ಲಿ ಭಿಕ್ಷೆ ಬೇಡುತ್ತಿದ್ದಾಳೆ ಎಂದು ಭಾವಿಸಿ, ಆಕೆಯನ್ನು ಅಟ್ಟಾಡಿಸಿ ಹೊಡೆದಿದ್ದಾರೆ. ಅಂಗಲಾಚಿ ಬೇಡಿಕೊಂಡರು ಸಹ ಬಿಡದೆ, ತಮ್ಮ ಒಳಾಂಗವನ್ನು ತೋರಿಸಿ ವಿಕೃತಿ ಮೆರೆದಿದ್ದಾರೆ. 15 ದಿನಗಳ ಹಿಂದೆ ನಡೆದ ಘಟನೆ ಎಂದು ಹೇಳಲಾಗುತ್ತಿದೆ.
ವಿಜಯಪುರ ನಗರ ಬಸ್ ನಿಲ್ದಾಣ ಬಳಿಯ ಲಲಿತ ಮಹಲ್ ಹೋಟೆಲ್ ಮುಂಭಾಗ ಘಟನೆ ನಡೆದಿದೆ. ಯುವತಿಯೊಬ್ಬಳನ್ನು ನಡುರಸ್ತೆಯಲ್ಲಿ ಬೆತ್ತಲೆ ಮಾಡಿ ಹಿಗ್ಗಾಮುಗ್ಗಾ ಥಳಿಸಲಾಗುತ್ತಿದ್ದರೂ ಯಾರೊಬ್ಬರೂ ಸಹಾಯಕ್ಕೆ ಬಾರದಿರುವುದು ಸಮಾಜದ ಸ್ಥಿತಿ ಹೇಗಿದೆ ಎಂಬುದನ್ನು ತೋರಿಸುತ್ತದೆ. ಜನರು ಕೂಡಾ ಇದನ್ನು ನೋಡುತ್ತಾ, ವಿಡಿಯೋ ಚಿತ್ರಕರಣ ಮಾಡಿರುವುದು ಸಮಾಜವೇ ತಲೆತಗ್ಗಿಸುವಂತಹ ವಿಚಾರ.
ಇದನ್ನೂ ಓದಿ: ಏರ್ಪೋಟ್ ಆಡಳಿತ ಮಂಡಳಿಯಿಂದ ಅನ್ಯಾಯ ; ಏರ್ಪೋಟ್ ಟ್ಯಾಕ್ಸಿ ಚಾಲಕರಿಂದ ಪ್ರತಿಭಟನೆ
ಟ್ರಾನ್ಸ್ -ಜೆಂಡರ್ಸ್ ಅಂತ ಹೇಳಿಕೊಂಡು ಹಣ ಕೇಳುತ್ತೀಯಾ ಅಂತ ಏಳೆಂಟು ಟ್ರಾನ್ಸ್ -ಜೆಂಡರ್ಸ್‌ಗಳು, ಯುತಿಯ ಪ್ಯಾಂಟ್, ಶರ್ಟ್ ಬಿಚ್ಚಿ ಬೆತ್ತಲೆಗೊಳಿಸಿ ಮರ್ಮಾಂಗಕ್ಕೆ ಒದ್ದು, ಖಾರದಪುಡಿ ಎರಚಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎಂದು ಪೊಲೀಸ್ ಅದಿಕಾರಿಗಳು ತಿಳಿಸಿದ್ದಾರೆ. ಹಲ್ಲೆ ನಡೆಸಿದವರನ್ನು ಪತ್ತೆ ಮಾಡಿ, ಪ್ರಕರಣ ದಾಖಲಿಸಿಕೊಳ್ಳಲಾಗುವುದು’ ಎಂದು ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ ತಿಳಿಸಿದ್ದಾರೆ.
ಇದನ್ನೂ ನೋಡಿ: ಸೋರುತಿಹುದು ಸಂಸತ್ತು : ಕೋಟ್ಯಾಂತರ ವೆಚ್ಚದ ದೆಹಲಿ ಹೊಸ ಸಂಸತ್ ಭವನದಲ್ಲಿ ಮಳೆ ನೀರುJanashakthi Media