ಮನಾಲಿ: ದಟ್ಟವಾಗಿ ಕವಿದ ಮಂಜು, ವಿಪರೀತ ಚಳಿಯಿಂದ ಟ್ರಾಫಿಕ್ ಜಾಮ್ – 3-4 ಗಂಟೆಕಾಲ ನಿಂತಲ್ಲೇ ನಿಂತ ವಾಹನಗಳು

ಹಿಮಾಚಲ ಪ್ರದೇಶ : ಹಿಮಾಚಲ ಪ್ರದೇಶದ ಮನಾಲಿಯಲ್ಲಿ ದಟ್ಟವಾದ ಮಂಜು ಆವರಿಸಿ ದೊಡ್ಡ ಅವಾಂತರ ಸೃಷ್ಟಿಯಾಗಿದೆ.

ವಿಪರೀತ ಚಳಿ ಹಾಗೂ ಮಂಜಿನಿಂದ ಟ್ರಾಫಿಕ್ ಜಾಮ್ ಉಂಟಾಗಿದೆ.  ಸೋಲಂಗ್‌ ಹಾಗೂ ಅಟಲ್ ಟನಲ್ ಬಳಿ 1 ಸಾವಿರಕ್ಕೂ ಹೆಚ್ಚು ಪ್ರವಾಸಿ ವಾಹನಗಳು ಸಿಲುಕಿಕೊಂಡಿದ್ದವು.

ಇದನ್ನೂ ಓದಿ : ಮುಂಬೈ | ಖ್ಯಾತ ನಿರ್ದೇಶಕ ಶ್ಯಾಮ್ ಬೆನಗಲ್ ನಿಧನ

ಗಂಟೆಗಟ್ಟಲೇ ರಸ್ತೆಯಲ್ಲಿ ಟ್ರಾಫಿಕ್ ಉಂಟಾಗಿ ಸಾರ್ವಜನಿಕರು ಪರಿತಪಿಸುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಸ್ಥಳೀಯರ ಸಹಾಯದಿಂದ ಪ್ರವಾಸಿಗರನ್ನ ರಕ್ಷಣೆ ಮಾಡಲಾಗಿದೆ. 3-4 ಗಂಟೆಕಾಲ ವಾಹನಗಳು ನಿಂತಲ್ಲೇ ನಿಂತಿವೆ. ಪೊಲೀಸರು 700 ಕ್ಕೂ ಹೆಚ್ಚು ಟೂರಿಸ್ಟ್ ಗಳನ್ನ ಸ್ಥಳಾಂತರ ಮಾಡಿದ್ದಾರೆ.

ಕ್ರಿಸ್ ಮಸ್ ಹಾಗೂ ನ್ಯೂ ಇಯರ್ ಆಚರಣೆ ಹಿನ್ನೆಲೆ ಹೆಚ್ಚು ಪ್ರವಾಸಿಗರು ಆಗಮಿಸಿರುವ ಹಿನ್ನೆಲೆ ನಿರ್ವಹಣೆಯೇ ದೊಡ್ಡ ಸವಾಲಾಗಿದೆ.

ಇದನ್ನೂ ನೋಡಿ : ಮನುವಾದಿ ಅಮಿತ್ ಶಾ ವಜಾಕ್ಕೆ ದಲಿತ ಹಕ್ಕುಗಳ ಸಮಿತಿ ಆಗ್ರಹ Janashakthi Media

Donate Janashakthi Media

Leave a Reply

Your email address will not be published. Required fields are marked *