ರಾಯಚೂರು: ಜಿಲ್ಲೆಯ ಮಸ್ಕಿ ಪಟ್ಟಣದಲ್ಲಿ ಸುಮಾರು 4000 ವರ್ಷಗಳಷ್ಟು ಹಳೆಯದಾದ ಮಾನವ ವಸತಿ ಪ್ರದೇಶದ ಕುರುಹುಗಳು ಪತ್ತೆಯಾಗಿವೆ. ಇದು ಮಸ್ಕಿಯ ಬೆಟ್ಟ ಮತ್ತು ಆಂಜನೇಯ ದೇವಾಲಯದ ಸುತ್ತಮುತ್ತ ಉತ್ಖನನ ನಡೆಸಿದಾಗ ಕಂಡುಬಂದಿದೆ. ಈ ಸಂಶೋಧನೆಯು ಮಸ್ಕಿಯ ಇತಿಹಾಸವನ್ನು ಸಾವಿರಾರು ವರ್ಷಗಳ ಹಿಂದಕ್ಕೆ ಕೊಂಡೊಯ್ಯುತ್ತದೆ ಮತ್ತು ಇಲ್ಲಿ ಜನರು ವಾಸಿಸುತ್ತಿದ್ದ ಪ್ರದೇಶವನ್ನು ಸೂಚಿಸುತ್ತದೆ.
ಇಲ್ಲಿ ಉತ್ಖನನದಲ್ಲಿ, ಕಲಾಕೃತಿಗಳು ಮತ್ತು ಕೆಲವು ಉಪಕರಣಗಳು ಪತ್ತೆಯಾಗಿವೆ, ಇದು ಅಂದು ಅಭಿವೃದ್ಧಿ ಹೊಂದಿದ ವಸಾಹತು ಪ್ರದೇಶವಿತ್ತು ಎಂಬುದನ್ನು ಸೂಚಿಸುತ್ತದೆ. ಅಮೆರಿಕ, ಕೆನಡಾ ಮತ್ತು ಭಾರತದ 20 ಕ್ಕೂ ಹೆಚ್ಚು ಸಂಶೋಧಕರ ತಂಡ ಈ ಉತ್ಖನನದಲ್ಲಿ ಭಾಗವಹಿಸಿದೆ. ಅವರು 11 ರಿಂದ 14 ನೇ ಶತಮಾನದ ವರೆಗಿನ ಜನವಸತಿ ಕುರುಹುಗಳನ್ನು ಪತ್ತೆ ಹಚ್ಚಿದ್ದಾರೆ. ಅವರ ಜೀವನ ಮಟ್ಟ, ಆಹಾರ ಪದ್ಧತಿ, ಮನೆಗಳ ಆಕಾರ ಮತ್ತು ಮಣ್ಣಿನ ಮಡಿಕೆಗಳಂತಹ ವಸ್ತುಗಳನ್ನು ಸಹ ಕಂಡುಹಿಡಿಯಲಾಗಿದೆ.
ಇದನ್ನೂ ಓದಿ: ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣ: ನ್ಯಾಯ ಒದಗಿಸಿ ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯಲು ಮನವಿ
ಭಾರತದ ದೆಹಲಿಯ NCR ಶಿವ ನಾಡರ್ ವಿವಿ ಹಾಗೂ ಅಮೆರಿಕ ಮೂಲದ ಸ್ಟ್ಯಾನ್ ಫೋರ್ಡ್ ವಿವಿಯ ಪ್ರೊಫೆಸರ್ ಡಾ ಆಂಡ್ರ್ಯೂ ಎಂ ಬಾಯರ್, ಕೆನಡಾದ ಮೆಕ್ಗಿಲ್ ವಿವಿಯ ಡಾ ಪೀಟರ್ ಜಿ ಜೋಹಾನ್ಸೆನ್ ಅವರ ನೇತೃತ್ವದಲ್ಲಿ ಉತ್ಖನನ ನಡೆಸಲಾಗಿದೆ. ಕಳೆದ ಮೂರು ತಿಂಗಳಿನಿಂದ ಈ ತಂಡವೂ ಮಸ್ಕಿಯಲ್ಲಿ ಸಂಶೋಧನೆ ನಡೆಸಿದ್ದು, ಈ ಹುಡುಕಾಟದಲ್ಲಿ ನಾಗರಿಕತೆಯ ಚಿಹ್ನೆಗಳನ್ನು ಪತ್ತೆ ಮಾಡುವ ಕಾರ್ಯವನ್ನು ಮಾಡಿದ್ದಾರೆ.

ಕಾರ್ಯಾಚರಣೆ ನಡೆಸುವ ಮುನ್ನ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎಎಸ್ಐ) ಅನುಮತಿ ಪಡೆದುಕೊಂಡಿದ್ದಾರೆ. ಮಸ್ಕಿಯಲ್ಲಿ ಸುಮಾರು 271 ಸ್ಥಾನಗಳನ್ನು ಗುರುತಿಸಿದ್ದ ತಂಡ ಸದ್ಯ ಮಲ್ಲಿಕಾರ್ಜುನ ಬೆಟ್ಟ ಮತ್ತು ದೇವಾಯದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕ್ರಿಪೂ 11 ಮತ್ತು 14ನೇ ಶತಮಾನಗಳಲ್ಲಿ ಮಾನವರು ಇಲ್ಲಿ ವಾಸಿಸುತ್ತಿದ್ದರು ಎಂಬುದನ್ನು ದೃಢಿಪಡಸುವ ಪುರಾವೆಗಳನ್ನು ಪತ್ತೆ ಮಾಡಿದ್ದಾರೆ. ಉತ್ಖನನದಲ್ಲಿ ಮಣ್ಣಿನ ಮಡಿಕೆಗಳು, ಹರಿತವಾದ ಉಪಕರಣಗಳು, ಅಡುಗೆ ಸಾಮಾಗ್ರಿಗಳನ್ನು ಸಂಶೋಧಕರು ಪತ್ತೆ ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕದಂಬಿ, ಸುಮಾರು 4 ಸಾವಿರ ವರ್ಷಗಳ ಹಿಂದೆ ಮಸ್ಕಿಯಲ್ಲಿ ಮಾನವನ ನೆಲೆ ಇತ್ತು ಎಂಬದಕ್ಕೆ ಪುರಾವೆಗಳು ಸಿಕ್ಕಿದೆ ಎಂದು ತಿಳಿಸಿದ್ದಾರೆ.
ಇದನ್ನೂ ನೋಡಿ: ಎದೆಗೆ ನಾಟುವ ಸಿನಿಮಾ – ಹೆಬ್ಬುಲಿ ಕಟ್ – ಚಂದ್ರಪ್ರಭ ಕಠಾರಿ Janashakthi Media
