ನವದೆಹಲಿ: ತಮಿಳುನಾಡು, ಕೇರಳ ಮತ್ತು ಪುದುಚೇರಿಯಲ್ಲಿ ವಿಧಾನಸಭಾ ಕ್ಷೇತ್ರಗಳಿಗೆ ಮತ್ತು ಅಸ್ಸಾಂ ಮತ್ತು ಪಶ್ಚಿಮ ಬಂಗಾಳದ ವಿಧಾನಸಭಾ ಕ್ಷೇತ್ರಗಳಿಗೆ ಮೂರನೇ ಹಂತದ ಮತದಾನ ನಾಳೆ ನಡೆಯಲಿದೆ. ತಮಿಳುನಾಡು, ಕೇರಳ ಮತ್ತು ಪುದುಚೇರಿಯಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಒಂದೇ ಹಂತದಲ್ಲಿ ಹಾಗೂ ಅಸ್ಸಾಂ ಮೂರು ಹಂತ ಹಾಗೂ ಪಶ್ಚಿಮ ಬಂಗಾಳದಲ್ಲಿ ಎಂಟು ಹಂತದ ಮತದಾನ ನಿಗದಿಯಾಗಿತ್ತು.
ಈಗಾಗಲೇ ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಲ್ಲಿ ಎರಡು ಹಂತದಲ್ಲಿ ಮತದಾನ ನಡೆದಿದೆ. ನಾಳಿನ ಮತದಾನದಲ್ಲಿ ತಮಿಳುನಾಡಿನ ಕನ್ನಾಕುಮಾರಿ ಲೋಕಸಭಾ ಕ್ಷೇತ್ರ ಮತ್ತು ಕೇರಳದ ಮಲಪ್ಪುರಂ ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.
ಕೇರಳ : ಕೇರಳದಲ್ಲಿ ಆಡಳಿತರೂಢ ಕಮ್ಯೂನಿಸ್ಟ್ ಪಕ್ಷಗಳ ನೇತೃತ್ವದ ಎಡ ಪ್ರಜಾಸತ್ತಾತ್ಮಕ ರಂಗ ಕಾಂಗ್ರೆಸ್ ಪಕ್ಷ ನೇತೃತ್ವದ ಸಂಯುಕ್ತ ಪ್ರಜಾಸತ್ತಾತ್ಮಕ ರಂಗದ ನಡುವೆ ನೇರ ಪೈಪೋಟಿ ಇರುವ ಕೇರಳದಲ್ಲಿ ನಾಳೆ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಬಿಜೆಪಿ ಪಕ್ಷವು ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು ಕ್ಷೇತ್ರಗಳಲ್ಲಿ ಪ್ರಚಾರ ಕೈಗೊಂಡಿದ್ದರು.
ಇದನ್ನು ಓದಿ : ಕೇರಳ ಚುನಾವಣೆ ಹೇಗಿದೆ? ಎಲ್.ಡಿ.ಎಫ್ ಯುಡಿಎಫ್ ನಡುವೆ ನಡೆದಿದೆ ನೇರ ಹಣಾಹಣಿ
ರಾಜ್ಯದ 140 ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯಲಿರುವ ಮತದಾನದಲ್ಲಿ ಜನತೆ ತಮ್ಮ ಮತವನ್ನು ಚಲಾಯಿಸಲಿದ್ದಾರೆ. ಕೇರಳದಲ್ಲಿ ಸುಮಾರು 2.74 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ರಾಜ್ಯದ 40,771 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಅಧಿಕಾರಾವಧಿಯಲ್ಲಿ ಮತ್ತೊಂದು ಅವಧಿಗೆ ಪ್ರಯತ್ನಿಸುತ್ತಿದ್ದಾರೆ. ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ಪಕ್ಷದ ಪ್ರಮುಖರು ಯುಡಿಎಫ್ ಪರವಾಗಿ ಪ್ರಚಾರದಲ್ಲಿ ಭಾಗಿಯಾಗಿದ್ದರು.
ಒಟ್ಟು 2,74,46,039 ಮತದಾರರು ತಮ್ಮ ಮತದಾನಕ್ಕೆ ಅರ್ಹಲಿದ್ದು, ಒಟ್ಟು ಮತದಾರರಲ್ಲಿ 1,41,62,025 ಮಹಿಳೆಯರು, 1,32,83,724 ಪುರುಷರು ಮತ್ತು 290 ಮಂದಿ ಲಿಂಗಾಯತ ಮತದಾರರು ಸೇರಿದ್ದಾರೆ.
ತಮಿಳುನಾಡು : ತಮಿಳುನಾಡು ರಾಜ್ಯದ ಎಲ್ಲಾ 234 ಕ್ಷೇತ್ರಗಳಲ್ಲಿ ನಾಳೆ ಮತದಾನ ನಡೆಯಲಿದೆ. ವಿಧಾನಸಭೆ ಚುನಾವಣೆಯ ಜೊತೆಗೆ ಕಳೆದ ವರ್ಷ ಸಂಸದ ವಸಂತಕುಮಾರ್ ಅವರ ನಿಧನದಿಂದ ತೆರವಾಗಿದ್ದ ಕನ್ಯಾಕುಮಾರಿ ಲೋಕಸಭಾ ಸ್ಥಾನಕ್ಕೂ ಉಪಚುನಾವಣೆ ನಡೆಯಲಿದೆ.
ಅಣ್ಣಾ ಡಿಎಂಕೆ ಹಾಗೂ ಡಿಎಂಕೆ ಪಕ್ಷಗಳು ಸೇರಿದಂತೆ ವಿವಿಧ ಚುನಾವಣೆ ಘೋಷಣೆಯಾಗಿ ಪ್ರಚಾರಕ್ಕಾಗಿ ಒಂದು ತಿಂಗಳಿಗಿಂತಲೂ ಕಡಿಮೆ ಸಮಯವಿದ್ದಾಗ, ರಾಜ್ಯದ ಪ್ರಾದೇಶಕ ಪಕ್ಷಗಳು ಮತ್ತು ರಾಷ್ಟ್ರೀಯ ಪಕ್ಷಗಳು ಚುನಾವಣಾ ಪೂರ್ವ ಮೈತ್ರಿಯನ್ನು ಸಾಧಿಸಲು ಚುನಾವಣೆ ದಿನಾಂಕ ಘೋಷಣೆಗೂ ಮೊದಲು ಬಿರುಸಿನ ತಯಾರಿಗಳು ನಡೆಸಿದ್ದವು.
ಇದನ್ನು ಓದಿ : ಮುನ್ನಲೆ ಪಡೆಯುವುದೇ ಹೊಸ ಪಕ್ಷಗಳ ಚುನಾವಣಾ ಹಣಾಹಣಿ
ರಾಜ್ಯದ ಒಟ್ಟು 6 ಕೋಟಿ 62 ಲಕ್ಷ 69 ಸಾವಿರ 955 ಮತದಾರರು ಚುನಾವಣೆಯಲ್ಲಿ ತಮ್ಮ ಮತದಾನದ ಹಕ್ಕು ಚಲಾಯಿಸಲಿದ್ದಾರೆ. 88 ಸಾವಿರ 937 ಮತದಾನ ಕೇಂದ್ರಗಳಲ್ಲಿ ಮತದಾನ ನಡೆಯಲಿದೆ ಎಂದು ಮುಖ್ಯ ಚುನಾವಣಾ ಅಧಿಕಾರಿ ಸತ್ಯ ಬ್ರಾತಾ ಸಾಹೂ ಹೇಳಿದರು.
300 ಮತದಾನ ಕೇಂದ್ರಗಳು ಸೂಕ್ಷ್ಮ ಮತಕೇಂದ್ರಗಳಾಗಿವೆ ಮತ್ತು 10 ಸಾವಿರಕ್ಕೂ ಹೆಚ್ಚು ಮತಕೇಂದ್ರಗಳು ಸಾಮಾನ್ಯ ಕೇಂದ್ರಗಳಾವೆ. 1 ಲಕ್ಷ 58 ಸಾವಿರ ಭದ್ರತಾ ಸಿಬ್ಬಂದಿಯನ್ನು ಮತದಾನ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. 4 ಲಕ್ಷಕ್ಕೂ ಹೆಚ್ಚು ಸರ್ಕಾರಿ ನೌಕರರು ಮತದಾನದ ಕರ್ತವ್ಯದಲ್ಲಿದ್ದಾರೆ.ಈ ಚುನಾವಣೆಗೆ 1 ಲಕ್ಷ 58 ಸಾವಿರ ಎಲೆಕ್ಟ್ರಾನಿಕ್ ಮತದಾನ ಯಂತ್ರಗಳನ್ನು ಬಳಸಲಾಗುತ್ತಿದೆ.
ಇದನ್ನು ಓದಿ : ಪಶ್ಚಿಮ ಬಂಗಾಳದ ಉದ್ಯೋಗ ಬಿಕ್ಕಟ್ಟು: ತೃಣಮೂಲದ ಒಂದು ದಶಕದ ಆಡಳಿತ
ಕೋವಿಡ್ ಕಾರಣಗಳಿಂದಾಗಿ, ಪ್ರತಿ ಸಾವಿರ ಮತದಾರರಿಗೆ ಒಂದು ಮತದಾನ ಕೇಂದ್ರವನ್ನು ಸ್ಥಾಪಿಸಲಾಗಿದೆ. ಒಟ್ಟು 118 ಚುನಾವಣಾ ವೀಕ್ಷಕರು ರಾಜ್ಯದಲ್ಲಿ ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ.ಬೆಳಿಗ್ಗೆ ಏಳು ಗಂಟೆಗೆ ಪ್ರಾರಂಭವಾಗುವ ಮತದಾನ ಸಂಜೆ ಏಳು ಗಂಟೆಯವರೆಗೆ ನಡೆಸುವ ಸಾಧ್ಯತೆಗಳಿವೆ.
ಕೊರೊನಾ ಸೋಂಕಿತರೂ ಮತದಾನ ನಡೆಸಲು ಬೇಕಾದ ಎಲ್ಲಾ ಪೂರ್ವ ತಯಾರಿಗಳನ್ನು ಸಹ ಕೈಗೊಳ್ಳಲಾಗಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ. ಕನಿಷ್ಠ 12 ಪಿಪಿಇ ಕಿಟ್‌ಗಳಿದ್ದು, ಪ್ರತಿ ಬೂತ್‌ನಲ್ಲಿಯೂ ಕೊನೆಯ ಗಂಟೆವರೆಗೂ ಕೋವಿಡ್ ಪಾಸಿಟಿವ್ ವ್ಯಕ್ತಿಗಳಿಗೆ ಮತ ಚಲಾಯಿಸಲು ಸಾಧ್ಯವಾಗುತ್ತದೆ.
ಪುದುಚೇರಿ : ಪುದುಚೇರಿ ಕೇಂದ್ರಾಡಳಿತ ಪ್ರದೇಶಲ್ಲಿ ನಾಳೆ ಎಲ್ಲಾ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಇಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಮಹಿಳಾ ಮತದಾರರಿಗಾಗಿ ವಿಶೇಷ ಮಹಿಳಾ ಮತಗಟ್ಟೆ ಸ್ಥಾಪಿಸಲಾಗಿದೆ. ಚುನಾವಣೆಗೆ ಸ್ಪರ್ಧಿಸಿರುವ 289 ಪುರುಷ ಮತ್ತು 35 ಮಹಿಳಾ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಒಟ್ಟು 10,04,507 ಮತದಾರರು 324 ಅಭ್ಯರ್ಥಿ ಭವಿಷ್ಯವನ್ನು ನಿರ್ಧರಿಸಲಿದ್ದಾರೆ.
ಮತದಾರರೊಂದಿಗೆ ಮುಖ್ಯ ಚುನಾವಣಾ ಅಧಿಕಾರಿ ಸುರ್ಬೀರ್ ಸಿಂಗ್, ಕೇಂದ್ರಾಡಳಿತ ಪ್ರದೇಶದ 635 ಸ್ಥಳಗಳಲ್ಲಿ 1558 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಎಲ್ಲ ಮಹಿಳಾ ಮತಗಟ್ಟೆ ಸ್ಥಾಪಿಸಿದ್ದು, ಮತದಾನ ಕೇಂದ್ರಗಳಲ್ಲಿ ಕನಿಷ್ಠ ಸೌಲಭ್ಯಗಳು, ಗಾಲಿಕುರ್ಚಿಗಳು ಮತ್ತು ಸಾರಿಗೆ ಸೌಲಭ್ಯಗಳನ್ನು ಒದಗಿಸಲಾಗಿದೆ.
ಇದನ್ನು ಓದಿ : 14 ವರ್ಷಗಳ ನಂತರ ನಂದಿಗ್ರಾಮ ‘ಗೋಲೀಬಾರ್’ನ ಪಿತೂರಿ ಬಯಲು?
ಈ ಚುನಾವಣೆಯಲ್ಲಿ 1558 ನಿಯಂತ್ರಣ ಘಟಕಗಳು 1677 ಬ್ಯಾಲೆಟ್ ಘಟಕಗಳು ಮತ್ತು 1558 ವಿವಿಪಿಎಟಿಗಳನ್ನು ಬಳಸಲಾಗುವುದು. ಕೇಂದ್ರಾಡಳಿತ ಪ್ರದೇಶದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. 6835 ಮತದಾನ ಸಿಬ್ಬಂದಿ, 4811 ಭದ್ರತಾ ಸಿಬ್ಬಂದಿ ಮತ್ತು ಸಿಆರ್‌ಪಿಎಫ್‌ನ 40 ತುಕಡಿಗಳನ್ನು ನಿಯೋಜಿಸಲಾಗಿದೆ.
ಇದನ್ನು ಓದಿ : ಚುನಾವಣಾ ಬಾಂಡ್ ಬಗ್ಗೆ ಸುಪ್ರಿಂ ಕೋರ್ಟ್: ವಾಸ್ತವ ಪ್ರಶ್ನೆಯಿಂದ ನುಣುಚಿಕೊಳ್ಳುವ ಕ್ರಮ
ಅಂದ ಮತದಾರರು ಮತದಾನ ಮಾಡುವುದಕ್ಕಾಗಿ ಮತಗಟ್ಟೆ ಅಧಿಕಾರಿಗಳು ಬ್ರೈಲಿ ಮತಪತ್ರಗಳು ಹೊಂದಿರುತ್ತಾರೆ ಹಾಗೂ ಕೋವಿಡ್ 19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಎಲ್ಲಾ ಮತಗಟ್ಟೆಗಳನ್ನು ಸ್ವಚ್ಛಗೊಳಿಸಲಾಗುವುದು ಎಂದು ಸುರ್ಬೀರ್ ಸಿಂಗ್ ಹೇಳಿದರು. ಮತದಾರರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಥರ್ಮಲ್ ಸ್ಕ್ಯಾನರ್‌ಗಳು, ಹ್ಯಾಂಡ್ ಸ್ಯಾನಿಟೈಜರ್‌ಗಳು ಮತ್ತು ಹ್ಯಾಂಡ್ ಗ್ಲೌಸ್‌ಗಳು ಲಭ್ಯವಿರುತ್ತವೆ ಮತ್ತು ಮತದಾರರು ಮತದಾನ ಕೇಂದ್ರದಲ್ಲಿ ಸಾಮಾಜಿಕ ದೂರವನ್ನು ಕಾಯ್ದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ.
ಪಶ್ಚಿಮ ಬಂಗಾಳ : ಬಂಗಾಳದಲ್ಲಿ ಟಿಎಂಸಿ, ಬಿಜೆಪಿ ಪಕ್ಷಗಳು ತಮ್ಮದೇ ಮೈತ್ರಿಯೊಂದಿಗೆ, ಕಾಂಗ್ರೆಸ್-ಸಿಪಿಐ(ಎಂ) ಮತ್ತು ಇತರೆ ಪಕ್ಷಗಳ ನೇತೃತ್ವದ ಮೈತ್ರಿಕೂಟ ಚುನಾವಣಾ ಕಣದಲ್ಲಿವೆ.
ಈಗಾಗಲೇ ಪಶ್ಚಿಮ ಬಂಗಾಳದಲ್ಲಿ ನಡೆಯಲಿರುವ ನಾಲ್ಕನೇ ಹಂತದ ಮತದಾನಕ್ಕೆ ಪ್ರಚಾರ ಮತ್ತಷ್ಟು ಬಿರುಸುಗೊಂಡಿದ್ದು, ಆಡಳಿತರೂಢ ಟಿಎಂಸಿ ಪರವಾಗಿ ಚಿತ್ರನಟಿ ಹಾಗೂ ಸಮಾಜವಾದಿ ಪಕ್ಷದ ಸಂಸದೆ ಜಯ ಬಚ್ಚನ್ ಮತ್ತು ಪಕ್ಷದ ಸುಪ್ರೀಮೋ ಪ್ರಚಾರ ಕೈಗೊಂಡಿದ್ದಾರೆ.
ಸಿಪಿಐ(ಎಂ) ಪಕ್ಷದ ಹಿರಿಯ ನಾಯಕರಾದ ಮಾಣಿಕ್ ಸರ್ಕಾರ್, ಬಿಮನ್ ಬಸು ಮತ್ತು ಸೂರ್ಯಕಾಂತ ಮಿಶ್ರಾ ಅಲಿಪುರ್ ದೌರ್, ಕೂಚ್ ಬೆಹಾರ್ ಮತ್ತು ಡಾರ್ಜಿಲಿಂಗ್ ನಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಈ ಜಿಲ್ಲೆಗಳಲ್ಲಿ ನಾಲ್ಕನೇ ಮತ್ತು ಐದನೇ ಹಂತಗಳಲ್ಲಿ ಮತದಾನ ನಡೆಯುತ್ತದೆ.
ಇದನ್ನು ಓದಿ : ಪಶ್ಚಿಮ ಬಂಗಾಳದ ಚುನಾವಣೆ ಹೇಗಿದೆ ಆಡಳಿತ ವಿರೋಧಿ ಅಲೆ ಎಡಪಕ್ಷಕ್ಕೆ, ಬಿಜೆಪಿಗೆ ಲಾಭವಾಗುತ್ತಾ?
ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಗಳ 16 ವಿಧಾನಸಭಾ ಕ್ಷೇತ್ರಗಳು, ಹೂಗ್ಲಿಯ 08 ಮತ್ತು ಹೌರಾದ 07 ಕ್ಷೇತ್ರಗಳು ಸೇರಿದಂತೆ 31 ವಿಧಾನಸಭಾ ಕ್ಷೇತ್ರ ಮತದಾನ ನಡೆಯಲಿದೆ.ಬಿಗಿ ಭದ್ರತೆಯೊಂದಿಗೆ, ನ್ಯಾಯಯುತವಾಗಿ ಶಾಂತಿಯುತ ಮತದಾನ ನಡೆಸಲು ಚುನಾವಣಾ ಆಯೋಗ ಸಿದ್ದತೆ ನಡೆಸಿ ಮಾಡಿಕೊಂಡಿದೆ. ರಾಜ್ಯ ಪೊಲೀಸ್ ಸಿಬ್ಬಂದಿಗಳಲ್ಲದೆ ಕೇಂದ್ರ ಸಶಸ್ತ್ರ ಅರೆ ಸೈನಿಕ ಪಡೆಗಳ (ಸಿಎಪಿಎಫ್) 600 ಕ್ಕೂ ಹೆಚ್ಚಿನ ಬೆಟಾಲಿಯನ್ ಸೇರಿದಂತೆ ಒಟ್ಟು 10,871 ಮತಗಟ್ಟೆಗಳಲ್ಲಿ ಭದ್ರತೆಗೆ ನಿಯೋಜನೆಗೊಂಡಿದ್ದಾರೆ.
ಮತದಾನ ಕೇಂದ್ರಗಳಲ್ಲಿ ಹೆಚ್ಚಿನ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಸೂಕ್ಷ್ಮ ಮತಗಟ್ಟೆ ವ್ಯಾಪ್ತಿಯಲ್ಲಿ ಮತದಾನ ಜಾಗೃತಿ ಬಗ್ಗೆ ಭದ್ರತಾ ಸಿಬ್ಬಂದಿಗಳು ಧ್ವಜ ಮೆರವಣಿಗೆಗಳನ್ನು ಸಹ ನಡೆಸಿದ್ದರು. ಮತದಾನ ಪ್ರಕ್ರಿಯೆಯಲ್ಲಿ ಅಂತರ್ಜಾಲ ಮೂಲಕ ನೇರ ಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಸೂಕ್ಷ್ಮ ಪ್ರದೇಶಗಳಲ್ಲಿ ಡ್ರೋನ್ ಕ್ಯಾಮಾರಗಳ ಮೂಲಕ ವೀಕ್ಷಣೆಗೆ ತಯಾರಿ ನಡೆಸಲಾಗಿದೆ.
ಮೂರು ಜನ ಸಚಿವರು ಹಾಗೂ ಸಿನಿ ತಾರೆಯರು ಮೂರನೆ ಹಂತದ ಮತದಾನದಲ್ಲಿ ಅದೃಷ್ಠ ಪರೀಕ್ಷೆಗೆ ಇಳಿದಿದ್ದಾರೆ.
ಅಸ್ಸಾಂ : ಅಸ್ಸಾಂ ರಾಜ್ಯಕ್ಕೆ ನಡೆಯುತ್ತಿರುವ ವಿಧಾನಸಭಾ ಚುನಾವಣೆಯಲ್ಲಿ ಮೂರನೇ ಹಾಗೂ ಅಂತಿಮ ಹಂತದ ಮತದಾನ ನಾಳೆ ನಡೆಯಲಿದೆ.40 ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಮತದಾನದಲ್ಲಿ 25 ಮಹಿಳೆಯರು ಸೇರಿದಂತೆ ಒಟ್ಟು 337 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಇದನ್ನು ಓದಿ : ಅಸ್ಸಾಂ ಚುನಾವಣೆ: “ಬಿಜೆಪಿಗೆ ಕುರ್ಚಿ- ಕಾಂಗ್ರೆಸ್ ಗೆ ಅಸ್ತಿತ್ವದ ಚಿಂತೆ”
ಬಿಜೆಪಿ, ಅಸೋಮ್ ಗಣ ಪರಿಷತ್ ಮತ್ತು ಬಿಪಿಎಫ್‌ನ ಹಲವಾರು ಸಚಿವರು ರಾಜ್ಯ ಬಿಜೆಪಿ ಅಧ್ಯಕ್ಷರು ಇಲ್ಲಿನ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳಾಗಿದ್ದಾರೆ. ಮುಕ್ತ, ನ್ಯಾಯಯುತ ಮತ್ತು ಸುರಕ್ಷಿತ ಮತದಾನ ನಡೆಸಲು ಎಲ್ಲಾ ಸಿದ್ಧತೆಗಳನ್ನು ಮಾಡಲಾಗುತ್ತಿದೆ ಎಂದು ಜಂಟಿ ಚುನಾವಣಾ ಅಧಿಕಾರಿಯಾದ ರಾಹುಲ್ ಚಂದ್ರ ದಾಸ್ ಅವರು ತಿಳಿಸಿದ್ದರು.
ಪಶ್ಚಿಮ ಬಂಗಾಳದಲ್ಲಿ ವಿವಿಧ ಕ್ಷೇತ್ರಗಳಿಗೆ ಇನ್ನೂ 5 ಹಂತದಲ್ಲಿ ಮತದಾನ ನಡೆಯಲಿದೆ. ಐದು ರಾಜ್ಯಗಳು ಮತ್ತು ವಿವಿಧ ರಾಜ್ಯಗಳಲ್ಲಿ ನಡೆಯುತ್ತಿರುವ ಉಪಚುನಾವಣೆಯ ಫಲಿತಾಂಶ ಮೇ 2ರಂದು ಪ್ರಕಟಗೊಳ್ಳಲಿದೆ.