ಟೋಲ್‌ಗಳ ನಡುವಿನ 60 ಕಿ.ಮೀ. ಅಂತರ ನಿಯಮ ಉಲ್ಲಂಘನೆಯ 181 ಕೇಂದ್ರ ಪತ್ತೆ!

ಸುರತ್ಕಲ್‌: ನಗರ ವ್ಯಾಪ್ತಿಯಲ್ಲಿ 5 ರಿಂದ 10 ಕಿಲೋ ಮೀಟರ್‌ ಮತ್ತು ಹೊರಗೆ 60 ಕಿಲೋ ಮೀಟರ್‌  ಅಂತರದೊಳಗೆ ಇರುವ ಟೋಲ್‌ ಕೇಂದ್ರಗಳು ಕಾನೂನುಬಾಹಿರ ಎಂದು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಹೇಳಿದ್ದು, ಈಗ ಹೆದ್ದಾರಿ ಇಲಾಖೆಯು ಇಂತಹ 181 ಟೋಲ್‌ ಕೇಂದ್ರಗಳು ಇರುವುದನ್ನು ಗುರುತಿಸಿ ಸಚಿವಾಲಯಕ್ಕೆ ವರದಿ ಸಲ್ಲಿಸಿದೆ.

ಕರ್ನಾಟಕದಲ್ಲಿಯೂ ಇಂತಹ ಒಟ್ಟು 19 ಟೋಲ್‌ ಕೇಂದ್ರಗಳನ್ನು ಗುರುತಿಸಲಾಗಿದ್ದು, ಹೆದ್ದಾರಿ ಟೋಲ್‌ ನಿಯಮ 8ನ್ನು ಉಲ್ಲಂಘಿಸಿ ನಿರ್ಮಿಸಲಾಗಿದೆ. ಇದರಲ್ಲಿ 10 ಟೋಲ್‌ ಕೇಂದ್ರಗಳು ಸರಿಸುಮಾರು 50ರಿಂದ 59 ಕಿ.ಮೀ. ಅಂತರ ದಲ್ಲಿ ನಿರ್ಮಾಣವಾಗಿದ್ದರೆ, ಉಳಿದ 9 ಟೋಲ್‌ ಗೇಟ್‌ಗಳು ಕನಿಷ್ಠ 11ರಿಂದ 35 ಕಿ.ಮೀ. ಅಂತರದಲ್ಲಿ ನಿರ್ಮಾಣವಾಗಿವೆ.

ಇದರಲ್ಲಿ ಸುರತ್ಕಲ್‌ ಹೆಜಮಾಡಿ ಟೋಲ್‌ ಗೇಟ್‌ 11 ಕಿ.ಮೀ., ಕುಲುಮೆ ಪಾಳ್ಯ-ಬೆಂಗಳೂರು 12 ಕಿ.ಮೀ., ತಲಪಾಡಿ -ಸುರತ್ಕಲ್‌ 32 ಕಿ.ಮೀ., ಹೆಜಮಾಡಿ -ಗುಂಡ್ಮಿ 49 ಕಿ.ಮೀ., ಹೊಳೆಗದ್ದೆ-ಬೆಳಕೇರಿ 49 ಕಿ.ಮೀ., ಸಾಸ್ತಾನ- ಶಿರೂರು ನಡುವೆ 59 ಕಿ.ಮೀ. ನಡುವೆ ನಿರ್ಮಾಣವಾಗಿದೆ.

ತಲಪಾಡಿ – ಹೆಜಮಾಡಿ ನಡುವೆ ಕೇವಲ 43 ಕಿ.ಮೀ. ಅಂತರವಿದೆ. ನವಯುಗ ಸಂಸ್ಥೆಯು ಹೆದ್ದಾರಿ 66ರಲ್ಲಿ ನಿರ್ಮಾಣ ಮಾಡಿರುವ ಟೋಲ್‌ಗೇಟ್‌ಗಳು ಹೆಚ್ಚಿನ ಅಂತರ ಕಾಯ್ದುಕೊಂಡಿಲ್ಲ. ನಿಯಮ ಉಲ್ಲಂಘಿಸಿದ ಅತೀ ಹೆಚ್ಚು, 23 ಟೋಲ್‌ ಕೇಂದ್ರಗಳು ಉತ್ತರ ಪ್ರದೇಶದಲ್ಲಿದ್ದರೆ, ಕರ್ನಾಟಕ ಅನಂತರದ ಸ್ಥಾನದಲ್ಲಿದೆ.

Donate Janashakthi Media

Leave a Reply

Your email address will not be published. Required fields are marked *