ಟೋಕಿಯೋ : ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾರತದ ಕ್ರೀಡಾಪಟುಗಳು ಉತ್ತಮ ಪ್ರದರ್ಶನ ನೀಡುವ ಮೂಲಕ ಭರವಸೆ ಮೂಡಿಸಿದ್ದಾರೆ. ಮೊದಲ ದಿನವೆ ಅರ್ಚರಿಯಲ್ಲಿ ಕ್ವಾರ್ಟರ್ ಫೈನಲ್ ಗೆ ಲಗ್ಗೆ ಇಟ್ಟಿದ್ದಾರೆ.
ಭಾರತದ ಕಾಲಮಾನದ ಪ್ರಕಾರ ಇಂದು ಮುಂಜಾನೆ ನಡೆದ ಆರ್ಚರಿ ಮಿಶ್ರ ಡಬಲ್ಸ್‌ನಲ್ಲಿ ಬಿಲ್ಲುಗಾರ್ತಿ ದೀಪಿಕಾ ಕುಮಾರಿ ಮತ್ತು ಪ್ರವೀಣ್ ಜಾದವ್ ಗೆಲುವಿನ ನಗೆ ಬೀರಿ ಕ್ವಾರ್ಟರ್ ಫೈನಲ್ಗೆ ಪ್ರವೇಶ ಪಡೆದಿದ್ದಾರೆ.
ಇದನ್ನೂ ಓದಿ : ಟೋಕಿಯೋ ಒಲಂಪಿಕ್ಸ್ ಕ್ರೀಡಾಕೂಟಕ್ಕೆ ಚಾಲನೆ – ಪದಕದ ಭರವಸೆ ಮೂಡಿಸಿರುವ ಆಟಗಾರರು
ಶನಿವಾರ ನಡೆದ ಆರ್ಚರಿ ಮಿಶ್ರ ಡಬಲ್ಸ್ನ ಪ್ರೀ ಕ್ವಾರ್ಟರ್ ಫೈನಲ್ನಲ್ಲಿ ಭಾರತದ ದೀಪಿಕಾ ಕುಮಾರಿ ಹಾಗೂ ಪ್ರವೀಣ್ ಅವರು ಚೈನೀಸ್ ತೈಪೆ ವಿರುದ್ಧ 5-3 ಅಂತರದಿಂದ ಗೆದ್ದು ಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟರು. ಕ್ವಾರ್ಟರ್ ಫೈನಲ್ನಲ್ಲಿ ದೀಪಿಕಾ ಹಾಗೂ ಪ್ರವೀಣ್ ಅವರು ಸೌತ್ ಕೊರಿಯಾ ತಂಡವನ್ನು ಎದುರಿಸಲಿದೆ.
ಇದೇ ಮೊದಲ ಬಾರಿಗೆ ಈ ಇಬ್ಬರು ಮಿಶ್ರ ಡಬಲ್ಸ್‌ನಲ್ಲಿ ಜೋಡಿಯಾಗಿ ಕಣಕ್ಕಿಳಿಯುತ್ತಿದ್ದಾರೆ. ಅರ್ಹತಾ ಸುತ್ತಿನಲ್ಲಿ ಅತಿ ಹೆಚ್ಚು ಅಂಕಗಳಿಸಿದ ಮಹಿಳಾ ಹಾಗೂ ಪುರುಷರ ತಂಡ ಸ್ಪರ್ಧಿಗಳನ್ನು ಮಿಶ್ರ ಡಬಲ್ಸ್‌ಗೆ ಆಯ್ಕೆ ಮಾಡುವ ಕಾರಣ ದೀಪಿಕಾ ಕುಮಾರಿ ಹಾಗೂ ಪ್ರವೀಣ್ ಜಾಧವ್ ಈ ಸ್ಪರ್ಧೆಯಲ್ಲಿ ಕಣಕ್ಕಿಳಿಯುತ್ತಿದ್ದಾರೆ.
ಆರಂಭದಲ್ಲಿ ಭಾರತ ತಂಡ ಮೊದಲ ಸೆಟ್‌ನ ಅಂತ್ಯಕ್ಕೆ 0-2 ಅಂತರದಿಂದ ಹಿನ್ನಡೆಯಲ್ಲಿತ್ತು. ಆದರೆ ಬಳಿಕ ಅದ್ಭುತ ಪ್ರದರ್ಶನದ ಮೂಲಕ ಪಂದ್ಯದ ಮೇಲೆ ಮತ್ತೆ ಹಿಡಿತ ಸಾಧಿಸಿದ ಭಾರತದ ಜೋಡಿ ಎರಡನೇ ಸೆಟ್‌ನಲ್ಲಿ ಟೈ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ನಂತರ ಚೈನೀಸ್ ತೈಪೆ ವಿರುದ್ಧ ಮೇಲುಗೈ ಸಾಧಿಸಿ ಗೆಲುವು ಸಂಪಾದಿಸಿದೆ.