ಟೋಕಿಯೊ: ಒಲಿಂಪಿಕ್ಸ್‌ನ 8ನೇ ದಿನವಾದ ನೆನ್ನೆ ಭಾರತದ ಅರ್ಚರಿ ಪಟು ದೀಪಿಕಾ ಕುಮಾರಿ ಮಹಿಳಾ ಸಿಂಗಲ್ಸ್ ಬಿಲ್ಲುಗಾರಿಕೆ ವಿಭಾಗದಲ್ಲಿ ಪಂದ್ಯವೊಂದರಲ್ಲಿ ಗೆಲುವು ಸಾಧಿಸಿದ್ದು, ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ರಷ್ಯಾ ಒಲಿಂಪಿಕ್ ಕಮಿಟಿಯ ಆಟಗಾರ್ತಿ ಕ್ಸೆನಿಯಾ ಪೆರೋವಾ ವಿರುದ್ಧ ದೀಪಿಕಾ ಕುಮಾರಿ ಗೆಲುವು ಸಾಧಿಸಿದ್ದಾರೆ.
ಯುಮೆನೋಶಿಮಾ ಫೈನಲ್ ಫೀಲ್ಡ್ ನಲ್ಲಿ ನಡೆದ 1/8 ಎಲಿಮಿನೇಷನ್ ಸುತ್ತಿನಲ್ಲಿ ದೀಪಿಕಾ ಕುಮಾರಿ ರಷ್ಯಾ ಒಲಿಂಪಿಕ್ ಕಮಿಟಿಯ ಕ್ಸೆನಿಯಾ ಪೆರೋವಾ ವಿರುದ್ಧ 6-5 ಅಂತರದಲ್ಲಿ ಜಯ ಸಾಧಿಸಿದರು. ಮೊದಲ 5 ಸುತ್ತುನಲ್ಲಿ ಕ್ಸೆನಿಯಾ ವಿರುದ್ಧ ದೀಪಿಕಾ ಕುಮಾರಿ 28-25, 26-27, 28-27, 26-26 ಹಾಗೂ 25-28 ಅಂಕಗಳನ್ನು ಗಳಿಸಿದರು. ಇವರಿಬ್ಬರ ನಡುವಿನ ಪಂದ್ಯವು ಸಮಬಲ ಸಾಧಿಸಿದ ಕಾರಣದಿಂದ ಮತ್ತೊಂದು ಅತ್ಯಧಿಕ ಶೂಟ್‌ಆಫ್ ಸುತ್ತನ್ನು ಆಯೋಜಿಸಲಾಯಿತು.
ಇದನ್ನು ಓದಿ: ಆರ್ಚರಿ: ಚಾಂಪಿಯನ್ ವಿರುದ್ಧ ಅತನು ದಾಸ್ ಭರ್ಜರಿ ಗೆಲುವು- ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶ
2016ರ ರಿಯೋ ಒಲಿಂಪಿಕ್ಸ್ ರಷ್ಯಾ ತಂಡ ವಿಭಾಗದಲ್ಲಿ ಬೆಳ್ಳಿ ಪದಕ ವಿಜೇತೆ ಕ್ಸಿನಿಯಾ ಪೆರೊವಾ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ದೀಪಿಕಾ ಕುಮಾರಿ ವಿರುದ್ಧ ಸೋಲುಂಡರು, ಭಾರತೀಯ ಸ್ಪರ್ಧಿ ದೀಪಿಕಾ ಕುಮಾರಿ ಪಂದ್ಯವನ್ನು ಗೆಲ್ಲುವುದರ ಮೂಲಕ ಕ್ವಾರ್ಟರ್ ಫೈನಲ್ ಪ್ರವೇಶ ಪಡೆದಿದ್ದಾರೆ.
ವಿಶ್ವ ನಂ.1 ಆರ್ಚರಿ ಪಟು ದೀಪಿಕಾ ಕುಮಾರಿ ಶೂಟ್‌ಆಫ್ 10 ಅಂಕಗಳನ್ನು ಗಳಿಸುವ ಮೂಲಕ ಚೊಚ್ಚಲ ಒಲಿಂಪಿಕ್ಸ್ ಪದಕ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. ಇಂದು ಕ್ವಾರ್ಟರ್ ಫೈನಲ್, ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳು ನಡೆಯಲಿದ್ದು ದೀಪಿಕಾ ಮೇಲೆ ಭಾರತೀಯರು ಬೆಟ್ಟದಷ್ಟು ನಿರೀಕ್ಷೆಗಳನ್ನು ಇಟ್ಟಿದ್ದಾರೆ.
ಇದನ್ನು ಓದಿ: ಬಾಕ್ಸರ್ ಮೇರಿ ಕೋಮ್ ಒಲಿಂಪಿಕ್ಸ್ ಪಂದ್ಯದಿಂದ ಹೊರಕ್ಕೆ
ಒಲಿಂಪಿಕ್ಸ್ ನಲ್ಲಿ ಮೂರನೇ ಬಾರಿಗೆ ಆಡುತ್ತಿರುವ ದೀಪಿಕಾ ಕುಮಾರಿ ಬಿಲ್ಲುಗಾರಿಕೆ ಸ್ಪರ್ಧೆಯ ಅಂತಿಮ ಎಂಟರ ಘಟ್ಟಕ್ಕೆ ತಲುಪಿದ್ದಾರೆ. ಬಿಲ್ಲುಗಾರಿಕೆಯಲ್ಲಿ ಭಾರತ ಈ ಹಂತಕ್ಕೆ ತಲುಪಿದ್ದು ಇದೇ ಮೊದಲ ಬಾರಿಗೆ ಎಂಬ ಹೆಗ್ಗಳಿಕೆಯಾಗಿದೆ. ಕ್ವಾರ್ಟರ್ ಫೈನಲ್‌ನಲ್ಲಿ ದೀಪಿಕಾ ದಕ್ಷಿಣ ಕೊರಿಯಾ ಸ್ಯಾನ್ ಆನ್ ಅವರನ್ನು ಎದುರಿಸಲಿದ್ದಾರೆ.