ಟೋಕಿಯೋ : 32ನೇ ಒಲಿಂಪಿಕ್ಸ್ ಕ್ರೀಡಾಕೂಟ 2020ಕ್ಕೆ ಶುಕ್ರವಾರ ವರ್ಣರಂಜಿತ ಸಮಾರಂಭದೊಂದಿಗೆ ಚಾಲನೆ ದೊರೆಯಿತು.
ಕೋವಿಡ್ ಕಾರಣದಿಂದಾಗಿ ಒಂದು ವರ್ಷ ಮುಂದೂಡಲ್ಪಟ್ಟಿದ್ದ ಕ್ರೀಡಾಕೂಟ ಆಯೋಜನೆಗೆ 2013ರಲ್ಲಿ ಟೋಕಿಯೊ ಬಿಡ್ ಗೆದ್ದ ಸಮಯದ ಹಿಂದಿನ ವೀಡಿಯೊದೊಂದಿಗೆ ಸಮಾರಂಭಕ್ಕೆ ವಿದ್ಯುಕ್ತ ಚಾಲನೆ ನೀಡಲಾಯಿತು. ನಂತರ 20 ಸೆಕೆಂಡುಗಳ ಇಂಡಿಗೊ ಮತ್ತು ಬಿಳಿ ಪಟಾಕಿಗಳೊಂದಿಗೆ ಪ್ರದರ್ಶಿಸಲಾದ ಬಣ್ಣಗಳು ಜಪಾನಿನ ಸಂಸ್ಕೃತಿಯ ಸಂಕೇತಗಳಾಗಿದ್ದವು.
ಲಿಂಗ ಸಮಾನತೆ ಸಾರಿದ ಭಾರತ : ಲಿಂಗ ಸಮಾನತೆ ಸಾರುವ ಉದ್ದೇಶದಿಂದ ಈ ಬಾರಿ ಮಹಿಳೆ ಹಾಗೂ ಪುರುಷ ಅಥ್ಲೀಟ್ ಧ್ವಜಧಾರಿಯಾಗಿ ಕಾಣಿಸಿಕೊಂಡರು. ಅದರಂತೆ ಭಾರತ ಪರ ಹಾಕಿ ತಂಡದ ನಾಯಕ ಮನ್‌ಪ್ರೀತ್ ಸಿಂಗ್ ಹಾಗೂ ಮಹಿಳಾ ಬಾಕ್ಸರ್ ಮೇರಿ ಕೋಮ್ ಸಾಂಪ್ರದಾಯಿಕ ಉಡುಗೆಯೊಂದಿಗೆ ಮೈದಾನ ಪ್ರವೇಶಿದರು. ಇವರ ಜತೆ 18 ಕ್ರೀಡಾಪಟುಗಳು, 6 ಅಧಿಕಾರಿಗಳು ಸೇರಿ ಒಟ್ಟು 26 ಮಂದಿ ದೇಶದ ತ್ರಿವರ್ಣ ಬಾವುಟ ಹಿಡಿದು ಮೈದಾನ ಪ್ರವೇಶಿಸಿದರು.
ಅ.8ರವರೆಗೆ ಈ ಕ್ರೀಡಾ ಕೂಡ ನಡೆಯುವ ಈ ಕ್ರೀಡಾಕೂಟದಲ್ಲಿ ಭಾರತದಿಂದ ಒಟ್ಟು 125 ಅಥ್ಲೀಟ್ ಗಳು ಪಾಲ್ಗೊಳ್ಳಲಿದ್ದಾರೆ. ಕೊರೋನಾ ಹಿನ್ನೆಲೆ ಪ್ರೇಕ್ಷಕರಿಲ್ಲದೆ ಕ್ರೀಡಾಕೂಟ ನಡೆಯುತ್ತಿದೆ.