ಇಂದು ಠಾಗೋರ್ ಜನ್ಮದಿನ

ಬಂಗಾಳಿ ವಿಧ್ವಾಂಸ, ಕವಿ, ಕಾದರಂಬರಿಕಾರ, ಸಂಗೀತಕಾರರಾದ ರವೀಂದ್ರನಾಥ ಠಾಗೋರ್‌ ಅವರು ಮೇ ೭, ೧೮೬೧ ರಂದು ಜನಿಸಿದರು.

ಬಂಗಾಳಿ ಮಹಾ ವಿದ್ವಾಂಸರಾಗಿದ್ದ ಅವರು ಬಂಗಾಳಿ ಭಾಷೆಯಲ್ಲಿ ಹಲವು ಕಾದರಂಬರಿಗಳನ್ನು ಬರೆದಿದ್ದಾರೆ. ಅಲ್ಲದೆ ಅವರು ಸಂಗೀತಕಾರರಾಗಿ ಮತ್ತು ನಾಟಕ ರಚಿಸುವ ಮೂಲಕ ಅವರು ಜನ ಮಾನಸದಲ್ಲಿ ಸದಾಕಾಲ ಉಳಿದುಕೊಳ್ಳುವ ವ್ಯಕ್ತಿತ್ವದವರು.

೧೯ನೇ ಶತಮಾನದ ಕೊನೆಯಲ್ಲಿ ಮತ್ತು ೨೦ನೇ ಶತಮಾನದ ಆರಂಭದಲ್ಲಿ ಬಂಗಾಳಿ ಸಾಹಿತ್ಯ ಮತ್ತು ಸಂಗೀತಕ್ಕೆ ಹೊಸ ರೂಪ ಠಾಗೋರ್‌ ಅವರು ರಚಿಸಿದ ನವನವೀನವೂ ಮತ್ತು ಸುಂದರವೂ ಆದ ಪದ್ಯ ʻʻಗೀತಾಂಜಲಿʼʼ ಕಾವ್ಯಕ್ಕೆ ೧೯೧೩ರ ನೊಬೆಲ್ ಸಾಹಿತ್ಯ ಪ್ರಶಸ್ತಿ ದೊರೆತಿದೆ. ಏಷ್ಯಾ ಖಂಡದಲ್ಲಿಯೇ ಮೊದಲ ನೋಬಲ್‌ ಪುರಸ್ಕಾರ ತಂದುಕೊಟ್ಟ ಮೊದಲಿಗರು.

ಕಲ್ಕತ್ತಾದ ಪಿರಾಲಿ ಬ್ರಾಹ್ಮಣ ಕುಟುಂಬಕ್ಕೆ ಸೇರಿದ ಠಾಗೋರ್ ‌ತಮ್ಮ ಎಂಟನೇ ವಯಸ್ಸಿನಲ್ಲಿ ಪದ್ಯ ರಚನೆ ಆರಂಭಿಸಿದರು. ಹದಿನಾರನೇ ವಯಸ್ಸಿನಲ್ಲಿ ಅವರು ಭಾನುಶಿಂಘೊ (“ಸೂರ್ಯಸಿಂಹ”) ಎಂಬ ಗುಪ್ತನಾಮದಡಿ ಮೊದಲ ಮಹತ್ವದ ಕವನವನ್ನು ಪ್ರಕಟಿಸಿದರು. ಮೊದಲು ಸಣ್ಣ ಕಥೆಗಳು ಮತ್ತು ನಾಟಕಗಳನ್ನು ೧೮೭೭ರಲ್ಲಿ ಬರೆದರು.

ಬ್ರಿಟಿಷ್ ಆಡಳಿತವನ್ನು ಬಹಿರಂಗವಾಗಿ ಖಂಡಿಸಿದ ಟಾಗೋರ್‌ ಭಾರತೀಯ ಸ್ವಾತಂತ್ರ್ಯ ಚಳವಳಿಯನ್ನು ಬೆಂಬಲಿಸಿದರು. ಅವರು ಜಗತ್ತಿಗೆ ನೀಡಿದ ಬಹುದೊಡ್ಡ ಗ್ರಂಥಮಾಲೆ ಮತ್ತು ಅವರು ಸ್ಥಾಪಿಸಿದ ಸಂಸ್ಥೆ ವಿಶ್ವ-ಭಾರತಿ ವಿಶ್ವಾವಿದ್ಯಾನಿಲಯ-ಇವು ಅವರ ಪ್ರಮುಖ ಕೊಡುಗೆ. ಟಾಗೋರ್‌ರ ರಾಜಕೀಯ ಚಿಂತನೆ ಕ್ಲಿಷ್ಟಕರವಾಗಿದ್ದವು. ಸಾರ್ವಭೌಮತ್ವವನ್ನು ವಿರೋಧಿಸಿದ ಅವರು ಭಾರತೀಯ ರಾಷ್ಟ್ರೀಯತಾವಾದಿಗಳನ್ನು ಬೆಂಬಲಿಸಿದರು.

೧೯೧೯ರಲ್ಲಿ ನಡೆದ ಜಲಿಯನ್‌ವಾಲಾ ಭಾಗ್‌ ಹತ್ಯಾಕಾಂಡವನ್ನು ವಿರೋಧಿಸಿ ಅವರು ನೈಟ್‌ಹುಡ್‌ ಪದವಿಯನ್ನು ಪ್ರತಿಭಟನಾರ್ಥವಾಗಿ ತ್ಯಜಿಸಿದರು. ಗಾಂಧಿ-ಟಾಗೋರ್‌ ಅವರದು ಪ್ರಕ್ಷುಬ್ಧ ಸಂಬಂಧ. ಆದರೂ ಅಸ್ಪೃಶ್ಯರಿಗೆ ಪ್ರತ್ಯೇಕ ಮತದಾರ ಸಮುದಾಯ ನಿರ್ಮಾಣವಾಗಬೇಕು ಎಂಬ ಗಾಂಧಿ- ಅಂಬೇಡ್ಕರ್‌ ನಡುವಿನ ಜಗಳವನ್ನು ಪರಿಹರಿಸುವಲ್ಲಿ ಹಾಗೂ ಗಾಂಧಿಯವರ “ಆಮರಣ” ಉಪವಾಸವನ್ನು ಕೊನೆಗೊಳಿಸುವಲ್ಲಿ ಅವರು ಪ್ರಮುಖ ಪಾತ್ರವಹಿಸುತ್ತಿದ್ದರು.

ಒಂದು ಹಕ್ಕಿಯನ್ನು ಪಂಜರದಲ್ಲಿಟ್ಟು, ಅದು ಸಾಯುವವರೆಗೆ ಪುಸ್ತಕದ ಹರಿದ ಪುಟಗಳನ್ನು ಬಲವಂತವಾಗಿ ತಿನ್ನಿಸುವ ಕಥೆ “ದ ಪ್ಯಾರೊಟ್ಸ್ ಟ್ರೈನಿಂಗ್”‌ನಲ್ಲಿ ಟಾಗೋರ್‌ ಸಾಂಪ್ರದಾಯಕ ಶಾಲಾ ಪದ್ಧತಿಯನ್ನು ಕಟುವಾಗಿ ಟೀಕಿಸಿದ್ದಾರೆ.

ಭಾರತೀಯ ಸಾಂಪ್ರದಾಯಕ ಶಾಸ್ತ್ರೀಯ ಕಠೋರತೆಯ ಚೌಕಟ್ಟಿನಿಂದ ಹೊರ ಬಂದ ಟಾಗೋರ್‌ ಬಂಗಾಳಿ ಕಲಾ ಪ್ರಕಾರಕ್ಕೆ ಹೊಸ ಮೆರಗು ನೀಡಿದರು.

ಗೀತಾಂಜಲಿ (ಗೀತೆಗಳು), ಗೋರ (ಸುಂದರ ಮುಖಿ) ಮತ್ತು ಘರೇ ಬೈರೆ((ಮನೆ ಮತ್ತು ಪ್ರಪಂಚ)) ಇವರ ಹೆಸರಾಂತ ಕೃತಿಗಳು. ಅವರು ರಚಿಸಿದ ಕವನಗಳು, ಸಣ್ಣ ಕಥೆಗಳು, ಮತ್ತು ಕಾದಂಬರಿಗಳು ಅವುಗಳ ಸಾಹಿತ್ಯಕ್ಕೆ, ಆಡುಮಾತಿನ ಪ್ರಯೋಗಕ್ಕೆ, ವಿಚಾರಶೀಲ ವಾಸ್ತವಿಕತೆಗೆ ಮತ್ತು ತತ್ವಶಾಸ್ತ್ರದ ಅವಲೋಕನಕ್ಕೆ ಪ್ರಶಂಸನೀಯವಾಗಿವೆ.

ಠಾಗೋರ್‌ ರಚಿಸಿದ ಎರಡು ಗೀತೆಗಳಿಗೆ ರಾಷ್ಟ್ರ ಮನ್ನಣೆ ಸಿಕ್ಕಿದೆ. ‘ಜನ ಗಣ ಮನ’ ಭಾರತದ ರಾಷ್ಟ್ರಗೀತೆಯಾದರೆ. ‘ಅಮರ್ ಶೋನರ್ ಬಾಂಗ್ಲಾ’ ಬಾಂಗ್ಲಾದೇಶದ ರಾಷ್ಟ್ರಗೀತೆಯಾಗಿದೆ.

ರವೀಂದ್ರನಾಥ ಠಾಗೋರ್‌ ಅವರು ಕಾವ್ಯಕ್ಕೆ ಹೆಸರುವಾಸಿಯಾದರೂ ಕಾದಂಬರಿಗಳು, ಪ್ರಬಂಧಗಳು, ಸಣ್ಣ ಕಥೆಗಳು, ಪ್ರವಾಸ ಕಥನಗಳು, ನಾಟಕಗಳು, ಮತ್ತು ಸಾವಿರಾರು ಗೀತೆಗಳನ್ನೂ ರಚನೆ ಮಾಡಿದ್ದಾರೆ. ಗದ್ಯ ಪ್ರಕಾರದಲ್ಲಿ ಕಿರು ಕಥೆಗಳನ್ನು ಅತ್ಯಂತ ಪ್ರಖ್ಯಾತಿಯನ್ನು ಪಡೆದುಕೊಂಡಿದೆ.

ಹಿಂದು ಮದುವೆಯ ಆಚರಣೆ ಮತ್ತು ವಿವಾಹಿತ ಬಂಗಾಳಿ ಮಹಿಳೆಯರ ವಿಷಾದಕರ ಬರಡು ಜೀವನ, ಮಧ್ಯಮ ವರ್ಗದ ಭಾರತೀಯರ ಬೂಟಾಟಿಕೆಯ ಮೇಲೆ ಹೈಮಂತಿಯಲ್ಲಿ, ಟಾಗೋರ್‌ ವಾಗ್ದಾಳಿ ನಡೆಸಿದ್ದಾರೆ. ಸೂಕ್ಷ್ಮ ಸ್ವಭಾವದ ಯುವತಿ ಹೈಮಂತಿಯು ಅವಳ ನವಿರು ಸ್ವಭಾವದಿಂದಾಗಿ ಜೀವನವನ್ನು ಹೇಗೆ ತೊರೆಯಬೇಕಾಗುತ್ತದೆ ಎಂಬುದನ್ನು ವಿವರಿಸಿದ್ದಾರೆ. ರಾಮನ ಸಂಶಯದಿಂದಾಗಿ ಪ್ರಾಣತ್ಯಾಗದ ಪರೀಕ್ಷೆಗೊಳಪಟ್ಟ ಸೀತೆಯ ಸ್ಥಿತಿಯನ್ನು ವೈಭವೀಕರಿಸುವ ಹಿಂದು ಸಂಪ್ರದಾಯದ ಮೇಲೆ ಟಾಗೋರ್‌ ನೇರ ಆಕ್ರಮಣ ನಡೆಸುತ್ತಾರೆ.

ಹಿಂದು-ಮುಸ್ಲಿಮ್ ಬಿಕ್ಕಟ್ಟುಗಳನ್ನು ಮುಸಲ್ಮಾನಿ ದೀದಿ ಯಲ್ಲಿ ಟಾಗೋರ್‌ ಪರಾಮರ್ಶಿಸಿದ್ದಾರೆ. ಅದು ಅವರ ಮಾನವೀಯ ಮುಖವನ್ನು ಅನೇಕ ರೂಪದಲ್ಲಿ ಅನಾವರಣಗೊಳಿಸುತ್ತದೆ. ಇನ್ನೊಂದೆಡೆ ಯುವಕನೊಬ್ಬ ತನ್ನ ಸಾಹಿತ್ಯ ಆಕಾಂಕ್ಷೆಗಳನ್ನು ಗುಪ್ತವಾಗಿಡುವುದನ್ನು ವಿವರಿಸುವ ಮೂಲಕ ದರ್ಪಹರಣ್‌  ಟಾಗೋರ್‌ರ ಸ್ವಪ್ರಜ್ಞೆಯನ್ನು ಬಿಂಬಿಸುತ್ತದೆ.

ಠಾಗೋರ್ ಕಾವ್ಯಗಳಿಗೆ ಅನೇಕ ಸಂಗೀತಕಾರರು ಸಂಗೀತ ಸಂಯೋಜನೆ ನೀಡಿದ್ದಾರೆ. ಕಾವ್ಯ ಗೀತಾಂಜಲಿಯು “ಸ್ಟ್ರೀಮ್ ಆಫ್ ಲೈಫ್”‌ನ ರೂಪಾಂತರ, ಸಂಗೀತಕಾರ ಗ್ಯಾರಿ ಸ್ಕೈಮ್ಯನಾನ್‌ರವರ “ಪ್ರಾಣ್” ಮೊದಲಾದವು.

ಭಾಷೆ ಮತ್ತು ಕಲೆಯಿಂದ – ಇತಿಹಾಸ ಮತ್ತು ರಾಜಕೀಯದವರೆಗೆ ಅನುರಣಿಸಿದ ಈ ಆಸ್ತಿ ಬಂಗಾಳಿ ಸಂಸ್ಕೃತಿಯಲ್ಲಿ ಸ್ಫುಟವಾಗಿ ಗೋಚರಿಸುತ್ತದೆ. ಅವರೊಬ್ಬ ‘ಶಿಖರಪ್ರಾಯ ಪುರುಷ’, ‘ಬಹುಮುಖಿ ವ್ಯಕ್ತಿತ್ವದ ಇವರ ಚಿಂತನೆ ಇಂದಿಗೂ ಪ್ರಸ್ತುತ’ ಎಂದು ನೊಬೆಲ್ ಪ್ರಶಸ್ತಿ ಪುರಸ್ಕೃತ ಅಮರ್ತ್ಯ ಸೇನ್‌ ರವೀಂದ್ರನಾಥ ಟಾಗೋರ್‌ ಅವರನ್ನು ಮುಕ್ತ ಕಂಠದಿಂದ ಕೊಂಡಾಡಿದ್ದರು.

Donate Janashakthi Media

Leave a Reply

Your email address will not be published. Required fields are marked *