ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಲೋಕಸಭೆ ಚುನಾವಣೆಯ ಎರಡನೇ ಹಂತದಲ್ಲಿ ಮತದಾನ ನಡೆಯುವ ಎಲ್ಲ ಕ್ಷೇತ್ರಗಳಲ್ಲಿ ಮತ ಚಲಾಯಿಸುವಂತೆ ಜನರಿಗೆ ವಿನಂತಿ ಮಾಡಿದ್ದಾರೆ.
‘ಪ್ರೀತಿಯ ದೇಶದ ನಿವಾಸಿಗಳೇ, ಇಂದು ದೇಶದ ಭವಿಷ್ಯವನ್ನು ನಿರ್ಧರಿಸುವ ಐತಿಹಾಸಿಕ ಚುನಾವಣೆಯ ಎರಡನೇ ಹಂತದ ಮತದಾನ ನಡೆಯುತ್ತಿದೆ. ಮುಂದಿನ ಸರ್ಕಾರ ‘ಕೆಲವು ಬಿಲಿಯನೇರ್’ ಅಥವಾ ‘140 ಕೋಟಿ ಭಾರತೀಯರದ್ದು’ ಎಂಬುದನ್ನು ನಿಮ್ಮ ಮತ ನಿರ್ಧರಿಸುತ್ತದೆ.
ಇದನ್ನು ಓದಿ : ಕಳೆದ 6 ವರ್ಷಗಳಲ್ಲೇ ಅತಿಹೆಚ್ಚು ಉಷ್ಣಾಂಶ ದಾಖಲಾದ ದಿನ: ಏಪ್ರಿಲ್ 25ರ ಗುರುವಾರ
ಆದ್ದರಿಂದ ಎಲ್ಲರೂ ಮನೆಯಿಂದ ಹೊರಗೆ ಬಂದು ‘ಸಂವಿಧಾನದ ಯೋಧ’ ಆಗುವ ಮೂಲಕ ಪ್ರಜಾಪ್ರಭುತ್ವದ ರಕ್ಷಣೆಗೆ ಮತ ಹಾಕುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ’ ಎಂದು ಹೇಳಿದ್ದಾರೆ.
ಲೋಕಸಭಾ ಚುನಾವಣೆಯ ಎರಡನೇ ಹಂತದಲ್ಲಿ ಕರ್ನಾಟಕದ 14 ಕ್ಷೇತ್ರಗಳು ಸೇರಿದಂತೆ ದೇಶದ 13 ರಾಜ್ಯಗಳ 88 ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಣದಲ್ಲಿದ್ದು, ಕೇರಳದ ವಯನಾಡ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.
ಇದನ್ನು ನೋಡಿ : ಮೋದಿಯವರ ‘ಮುಸ್ಲಿಂ, ಮೊಘಲ್, ಮಟನ್’ ಎನ್ನುವ ಅಪಾಯಕಾರಿ ಸಿದ್ಧಾಂತ. Janashakthi Media