ಬಹುಕೋಟಿ ಪಡಿತರ ವಿತರಣೆ ಹಗರಣ : ಇಡಿ ಬಲೆಗೆ ಬಿದ್ದ ಟಿಎಂಸಿ ನಾಯಕ

ಕೋಲ್ಕತ್ತಾ : ಬಹುಕೋಟಿ ಪಡಿತರ ವಿತರಣೆ ಹಗರಣದಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ದೇಗಂಗಾ ಎಂಬಲ್ಲಿನ ತಣಮೂಲ ಕಾಂಗ್ರೆಸ್ ನಾಯಕನನ್ನು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿದೆ. ಬಹುಕೋಟಿ
ಕೇಂದ್ರ ತನಿಖಾ ಸಂಸ್ಥೆ ತಡರಾತ್ರಿ ಟಿಎಂಸಿಯ ದೇಗಂಗಾ ಬ್ಲಾಕ್ ಅಧ್ಯಕ್ಷ ಅನಿಸುರ್ ರೆಹಮಾನ್ ಮತ್ತು ಅವರ ಹಿರಿಯ ಸಹೋದರನನ್ನು ಸುಮಾರು 14 ಗಂಟೆಗಳ ಕಾಲ ಕೋಲ್ಕತ್ತಾ ಕಚೇರಿಯಲ್ಲಿ ಗ್ರಿಲ್ ಮಾಡಿದ ನಂತರ ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಡಿತರ ವಿತರಣೆ ಹಗರಣಕ್ಕೆ ಸಂಬಂಧಿಸಿದಂತೆ ರೆಹಮಾನ್ ಮತ್ತು ಅವರ ಸಹೋದರನನ್ನು ಬಂಧಿಸಲಾಗಿದೆ. ವೈದ್ಯಕೀಯ ಪರೀಕ್ಷೆಯ ನಂತರ ನಾವು ಅವರನ್ನು ನಗರದ ನ್ಯಾಯಾಲಯಕ್ಕೆ ಹಾಜರುಪಡಿಸುತ್ತೇವೆ ಎಂದು ಅಧಿಕಾರಿ ಪಿಟಿಐಗೆ ತಿಳಿಸಿದರು.

ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರ ತನಿಖಾ ಸಂಸ್ಥೆಯಿಂದ ಬಂಧಿಸಲ್ಪಟ್ಟಿರುವ ರಾಜ್ಯದ ಮಾಜಿ ಅರಣ್ಯ ಸಚಿವ ಜ್ಯೋತಿಪ್ರಿಯೋ ಮಲ್ಲಿಕ್ ಅವರಿಗೆ ರೆಹಮಾನ್ ತುಂಬಾ ಆಪ್ತರಾಗಿದ್ದರು. ಇಡಿ ಅಧಿಕಾರಿಗಳು ಅಕ್ಕಿ ಗಿರಣಿ ಮಾಲೀಕ ಬಾರಿಕ್ ಬಿಸ್ವಾಸ್ ಮತ್ತು ಮಾಜಿ ಸಚಿವರ ಇನ್ನೊಬ್ಬ ಆಪ್ತರಿಗೆ ಇಂದು ನಗರದ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್‌್ಸ ಜಾರಿ ಮಾಡಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಇಡಿ, ಬಿಸ್ವಾಸ್ ಅವರ ನಿವಾಸಗಳು ಮತ್ತು ಅಕ್ಕಿ ಗಿರಣಿ ಮೇಲೆ ದಾಳಿ ನಡೆಸಿದಾಗ, 40 ಲಕ್ಷ ರೂ.ಗೂ ಹೆಚ್ಚು ನಗದು ಮತ್ತು ಯುಎಇಯಲ್ಲಿನ ಆಸ್ತಿಯಲ್ಲಿ ಅವರು ಹೂಡಿಕೆ ಮಾಡಿದ ಕೆಲವು ದಾಖಲೆಗಳನ್ನು ವಶಪಡಿಸಿಕೊಂಡಿತ್ತು.

 

Donate Janashakthi Media

Leave a Reply

Your email address will not be published. Required fields are marked *