ಆಸ್ಟ್ರೇಲಿಯಾ ಟೆಸ್ಟ್ ಸರಣಿ : ತಿರುವುಗಳಿಗೆ ಅರ್ಥ ತುಂಬಿದ ಆಟಗಾರರ ರೋಚಕ ಕಥೆ

ಚೊಚ್ಚಲ ಟೆಸ್ಟ್ ಸರಣಿಯಲ್ಲಿ ಹೊಸ ತಿರುವು ತಂದುಕೊಟ್ಟ  ನಟರಾಜನ್, ಠಾಕೂರ್, ಸಿರಾಜ್, ಸುಂದರ್, ಸೈನಿ  ತಮ್ಮ ನಿಜ ಜೀವನದಲ್ಲಿಯೂ ಸಹ ಅದ್ಬುತವಾದ ತಿರುವುಗಳನ್ನು ಪಡೆದುಕೊಂಡಿದ್ದಾರೆ. 

ತಿರುವುಗಳು ಸಂಭವಿಸುತ್ತದೆ ಎಂಬುದನ್ನು ಹೇಳಲು ಯಾರಿಂದಲೂ ಸಾಧ್ಯವಿಲ್ಲ, ಆದುದರಿಂದ ಅವುಗಳನ್ನು ತಿರುವುಗಳು ಎಂದು ಕರೆಯಲಾಗುತ್ತದೆ.  ಭಾರತೀಯ ಕ್ರೀಕೇಟ್ ಆಟಗಾರರು ಅಂತಹ ಭವ್ಯವಾದ ತಿರುವು ಪಡೆದುಕೊಂಡಿದ್ದಾರೆ,  ಇದು 2001 ರ ಭಾರತ-ಆಸ್ಟ್ರೇಲಿಯಾ ಟೆಸ್ಟ್ ಸರಣಿಯ ನಂತರದ ಅತ್ಯುತ್ತಮ ತಿರುವು ಆಗಿದೆ. ಇದು ಭಾರತದ ಕ್ರಿಕೆಟಿಂಗ್ ಇತಿಹಾಸದಲ್ಲಿ ಒಂದು ಬೃಹತ್ ಕ್ಷಣವಾಗಿದೆ.

ಆಸಕ್ತಿದಾಯಕ ವಿಷಯವೆಂದರೆ, ಹೊಸ ತಿರುವು ತಂದುಕೊಟ್ಟ ಆಸ್ಟ್ರೇಲಿಯಾ ಟೆಸ್ಟ್ ಸರಣಿಯಲ್ಲಿ ಭಾಗಿಯಾಗಿದ್ದ ಕ್ರಿಕೆಟಿಗರ ತಮ್ಮ ನಿಜ ಜೀವನದಲ್ಲಿಯೂ ಸಹ ಅದ್ಬುತವಾದ ತಿರುವುಗಳನ್ನು ಪಡೆದುಕೊಂಡಿದ್ದಾರೆ. ಭಾರತದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ ನಟರಾಜನ್, ಶಾರ್ದೂಲ್ ಠಾಕೂರ್ , ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್ ಮತ್ತು ನವದೀಪ್ ಸೈನಿ ಕ್ರಿಕೆಟ್ ಕಲಿತ ರೀತಿ, ಬೆಳದ ಪರಿ ಅಚ್ಚರಿ ಮೂಡಿಸುತ್ತದೆ.

ಎನ್. ನಟರಾಜನ್

ನಟರಾಜನ್ ಮಗ್ಗ ಕಾರ್ಮಿಕನ ಮಗ, ಐಷಾರಾಮಿ ಶೂ ಹಾಗೂ ಕ್ರಿಕೆಟ್ ಗೇರ್‌ಗಳನ್ನು ಕೊಂಡುಕೊಳ್ಳಲು ಹಣವಿಲ್ಲದಷ್ಟು ಬಡತನ, ಅನೇಕ ವರ್ಷಗಳಿಂದ ಒಂದು ಹೊಸ ಬೂಟ್ ಕೊಳ್ಳಲು ಹಣ  ಖರ್ಚು ಮಾಡುವುದಕ್ಕಾಗಿ ನೂರು ಬಾರಿ ಯೋಚಿಸಬೇಕಾಗುತ್ತಿತ್ತು. ನಿರಂತ್ರ ಪರಿಶ್ರಮದ ಮೂಲಕ, ಶ್ರದ್ಧೆಯಿಂದ ಕ್ರಿಕೇಟ್ ಕಲಿತ ನಟರಾಜನ್  ಭಾರತ ತಂಡಕ್ಕೆ ಆಯ್ಕೆಯಾದರು. ಟಿವಿಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದುದನ್ನು ಆತನ ತಾಯಿ ಟಿವಿಯಲ್ಲಿ ನೋಡಿ  ಆನಂದಭಾಷ್ಪ ಸುರಿಸಿದರು.  ಅವನು ಯುಎಇ ಯಲ್ಲಿ ಐಪಿಎಲ್ ಆಡುತ್ತಿದ್ದಾಗ ಅವನ ಪತ್ನಿ ಒಂದು ಹೆಣ್ಣು ಮಗುವಿಗೆ ಜನ್ಮವಿತ್ತರು. ನಟರಾಜನ್  ಬಯೋಬಬಲ್ ನಿಯಮದಂತೆ ನೇರವಾಗಿ ಆಸ್ಟ್ರೇಲಿಯಾಕ್ಕೆ ಹೋದ ಕಾರಣ ತನ್ನ ಮಗಳನ್ನು ಇನ್ನೂ ನೋಡಿಲ್ಲ. ನಟರಾಜ್ ಆಡಿದ ಎರಡು ಪಂದ್ಯಗಳಲ್ಲಿ ಅದ್ಬುತ ಬೌಲಿಂಗ್ ಮೂಲಕ 3 ವಿಕೇಟ್ ಪಡೆದಿದ್ದಾರೆ.  ಭರವಸೆಯ ಬೌಲರ್ ಆಗಿ ಹೊರಹೊಮ್ಮಿದ್ದಾರೆ.

ಶಾರ್ದುಲ್ ಠಾಕೂರ್

ಶಾರ್ದುಲ್ ಠಾಕೂರ್ ಬೊಜ್ಜಿನ ಸಮಸ್ಯೆಯಿಂದಾಗಿ ಕ್ರಿಕೆಟ್ ದೂರ ಉಳಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಸಚಿನ್ ತೆಂಡೂಲ್ಕರ್ ನೀಡಿದ ಸಲಹೆಯನ್ನು ಪಡೆದು ಬೊಜ್ಜುನ್ನು ಕಡಿಮೆ ಮಾಡಿದರು.  ಪರಿಣಾಮ ಮುಂಬೈ ಪರವಾಗಿ ಹಾಗೂ ಐಪಿಎಲ್‌ನಲ್ಲಿ ಆಡಲು ಸಾಧ್ಯವಾಯಿತು. ಮುಂದಿನ ಕ್ರಿಕೆಟಿಂಗ್ ವೃತ್ತಿ ಜೀವನಕ್ಕಾಗಿ  ಇದು ದಾರಿಯಾಯಿತು. ಬಲಗೈ ವೇಗದ ಬೌಲರ್ ಆಗಿರುವ ಶಾರ್ದುಲರ್ ಎಸೆತೆಗಳನ್ನು ಎದುರಿಸುವುದು ಕಷ್ಟ. ಕೊನೆಯ ಪಂದ್ಯದಲ್ಲಿ ಇವರು ತೋರಿದ ಪ್ರದರ್ಶನದಿಂದ ಭಾರತ ಸರಣಿ ಗೆಲ್ಲಲು ಸಾಧ್ಯವಾಯಿತು. ಮೊದಲ ಇನ್ನಿಂಗ್ಸ್ ನಲ್ಲಿ 3 ವಿಕೇಟ್, ಎರಡನೆಯ ಇನ್ನಿಂಗ್ಸ್ ನಲ್ಲಿ 04 ವಿಕೇಟ್, ಹಾಗೂ ಆ ಪಂದ್ಯದಲ್ಲಿ 68 ರನ್ ಗಳಸಿ ಮಹತ್ವದ ಪಾತ್ರವನ್ನು ವಹಿಸಿದ್ದರು.   ಶಾರ್ದುಲ್ ಈಗ ಭಾರತದ ಭರವಸೆಯ ಆಟಗಾರರಾಗಿ ಕಾಣುತ್ತಿದ್ದಾರೆ.

ಸಿರಾಜ್ ರೋಸ್

ಮಹಮದ್ದ ಸಿರಾಜ್  ರೋಜ್ ಬಡತನದಲ್ಲಿ ಬೆಳೆದ ಹುಡುಗ ಇವರ ತಂದೆ  ಒಬ್ಬ ಬಡ ರಿಕ್ಷಾ ಚಾಲಕ. ಕ್ರಿಕೆಟೆ ಆಡುವುದು ಇರಲಿ ಉಹಿಸಿಕೊಳ್ಳುವುದಕ್ಕೂ ಆಗದ ಸ್ಥಿತಿ, ಆದರೂ ಪಟ್ಟು ಬಿಡದೆ ಪಟ್ಟ ಪರಿಶ್ರಮದಿಂದ ಈಗ ಭಾರತದ ಹೊಸ ಬಾಲ್ ಬೌಲರ್ ಎನಿಸಿಕೊಂಡರು. ತಂದೆ ನಿಧನರಾದಾಗ ಸಿರಾಜ್ ಅವರು ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದ ಕಾರಣ ತಂದೆಯ ಅಂತಿಮ ವಿಧಿ-ವಿಧಾನಗಳನ್ನು ನಿರ್ವಹಿಸಲು ಸಾಧ್ಯವಾಗಲಿಲ್ಲ.  ಒಟ್ಟಾರೆ ಟೆಸ್ಟ್ ಸರಣಿಯಲ್ಲಿ 13 ವಿಕೆಟ್ ಪಡೆಯುವ ಮೂಲಕ ಭಾರತದ ಗೆಲುವಿಗೆ ಮಹತ್ವದ ಪಾತ್ರ ವಹಿಸಿದ್ದಾರೆ.

 

ನವದೀಪ್ ಸೈನಿ

ಮತ್ತೊಬ್ಬ ಭರವಸೆಯ ಬೌಲರ್ ನವದೀಪ್ ಸೈನಿ ಅವರ ತಂದೆ ಒಬ್ಬ ಸರ್ಕಾರಿ ಅಧಿಕಾರಿಯ ಚಾಲಕರಾಗಿದ್ದರು. ತನ್ನ ಮಗನಿಗೆ ದುಬಾರಿ ಕ್ರಿಕೆಟ್ ತರಬೇತಿಯನ್ನು ಕೊಡಿಸಲು ಸಾಧ್ಯವಾಗಲಿಲ್ಲ. ಆದುದರಿಂದ ಸೈನಿ ತಾನು ಒಬ್ಬ ಉತ್ತಮ ಕ್ರಿಕೆಟಿಗನಾಗಬೇಕೆಂಬ ಕನಸನ್ನು ನನಸಾಗಿಸಲು 300 ರೂಪಾಯಿ ಧನಸಹಾಯ ನೀಡುವಂತೆ ಟೆನಿಸ್ ಬಾಲ್‌ನ ಪ್ರದರ್ಶನ ಪಂದ್ಯವನ್ನು ಏರ್ಪಡಿಸಿದ್ದರು.  ಅಲ್ಲಿಂದ ಆರಂಭಗೊಂಡ ಕ್ರಿಕೇಟ್ ಜೀವನ ಇಂದು ಭಾರತದ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸುವ ವರೆಗೆ ಬೆಳೆದಿದೆ.  ಟೆಸ್ಟ್ ಸರಣಿಯಲ್ಲಿ 04 ವಿಕೇಟ್ ಪಡೆಯುವ ಮೂಲಕ ಭರವಸೆ ಮೂಡಿಸಿದ್ದಾರೆ.

ವಾಷಿಂಗ್ಟನ್ ಸುಂದರ್

ಮತ್ತೊಬ್ಬ ಭರವಸೆಯ ಬ್ಯಾಟ್ಸಮನ್ ಮತ್ತು ಸ್ಪಿನ್ ಬೌಲರ್ ವಾಷಿಂಗ್ಟನ್ ಸುಂದರ್ ಕೂಡಾ ಆರ್ಥಿಕ ಸಮಸ್ಯೆಗಳ ನಡುವೆ ಕ್ರಿಕೆಟ್ ಕಲಿತವರು.  ಕೊನೆಯ ಪಂದ್ಯದಲ್ಲಿ ಎರಡು ಇನ್ನಿಂಗ್ಸ್ ಗಳಿಂದ ಮಹತ್ವದ 84 ರನ್ ಕಲೆ ಹಾಕಿ ಭಾರತದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು.  ಈ ಹುಡುಗರೆಲ್ಲರೂ ಚೊಚ್ಚಲ ಆಟಗಾರರಾಗಿ ಒಗ್ಗೂಡಿ ಈ ಪಂದ್ಯಕ್ಕೆ ಹೊಸ ತಿರುವನ್ನು ನೀಡಿದ್ದಾರೆ. ಅವರ ಕ್ರಿಕೇಟಿಂಗ್ ವೃತ್ತಿ ಜೀವನದಲ್ಲಿ ಅನುಭವಿಸಿದ ಗೊಂದಲಗಳಿಗೆ, ವೈಫಲ್ಯಗಳಿಗೆ, ಹೋರಾಟಗಳಿಗೆ ಹಾಗೂ ಅಭದ್ರತೆಗಳಿಗೆ ಈ ಟೆಸ್ಟ್ ಅರ್ಥ ಕೊಟ್ಟಿತು. ಭಾರತ-ಆಸ್ಟ್ರೇಲಿಯಾ ಟೆಸ್ಟ್ ಸರಣಿಯಲ್ಲಿ ಭಾಗವಹಿಸಲು ಅವಕಾಶ ಸಿಕ್ಕಾಗ, ಅದನ್ನು ಉತ್ತಮ ರೀತಿಯಲ್ಲಿ ಉಪಯೋಗಿಸಿಕೊಂಡರು.

ಹಿರಯ ಆಟಗಾರ ಚೇತೇಶ್ವರ ಪೂಜಾರ್ ನೆಲಕ್ಕಚ್ಚಿ ಆಡುವ ಮೂಲಕ  ರಾಹುಲ್ ದ್ರಾವಿಡ್ ಆಟವನ್ನು ನೆನಪಿಸಿದರು. ರಿಷಿಬ್ ಪಂತ್ ಅಪದ್ಬಾಂದವನ ಆಟವಾಡಿದ್ದು, ಅಜಿಂಕ್ಯ ರಹಾನೆ ಟೆಸ್ಟ್ ಕ್ರಿಕೆಟ್ ನ ಭರವಸೆಯ ನಾಯಕನಾಗಿ ಕಾಣುತ್ತಿದ್ದಾನೆ ಭಾರತದ ಕ್ರಿಕೇಟನಲ್ಲಿ ಕಂಡ ಅನೇಕ ತಿರುವುಗಳಾಗಿವೆ.

 

 

 

Donate Janashakthi Media

Leave a Reply

Your email address will not be published. Required fields are marked *