ಮೈಕ್ರೊ ಫೈನಾನ್ಸ್ ಕಿರುಕುಳ: ಸ್ಮಶಾನದಲ್ಲಿ 3 ದಿನ ಕಾಲ ಕಳೆದ ಬೇಸತ್ತ ಮಹಿಳೆ

ರಾಯಚೂರು: ಮೈಕ್ರೊ ಫೈನಾನ್ಸ್ ಕಿರುಕುಳಕ್ಕೆ ಬೇಸತ್ತು ಮಹಿಳೆಯೊಬ್ಬಳು ಸ್ಮಶಾನದಲ್ಲಿ ಮೂರುದಿನ ಕಾಲ ಕಳೆದ ಘಟನೆ ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಹಟ್ಟಿ ಪಟ್ಟಣದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಸುಮಾರು ದಿನಗಳ ಹಿಂದೆ ವಾರ ವಾರ ಕಟ್ಟುವ ಕಂತಿನ ಮೂಲಕ ಸಂತ್ರಸ್ತೆ ವನಜಾಕ್ಷಿ ಅವರು ಮೈಕ್ರೊ ಫೈನಾನ್ಸ್​ನಲ್ಲಿ ಸಾಲ ಪಡೆದಿದ್ದರು. ಮನೆಯ ಅರ್ಥಿಕ ಪರಸ್ಥಿತಿ ಸರಿಯಾಗಿ ಇಲ್ಲದೆ ಇರುವುದರಿಂದ ಎರಡು ಮೂರು ಕಂತುಗಳು ಬಾಕಿ ಉಳಿಸಿಕೊಂಡಿದ್ದರು. ಇದರಿಂದ ಮೈಕ್ರೊ ಫೈನಾನ್ಸ್ ಸಿಬ್ಬಂದಿಗಳು ಕಿರುಕುಳ ನೀಡಲು ಆರಂಭಿಸಿದರು.

ಇದನ್ನೂ ಓದಿ: ಮೈಕ್ರೋ ಫೈನಾನ್ಸ್ ವ್ಯವಸ್ಥೆಯ ಕರಾಳಮುಖ: ಗ್ರಾಮೀಣ ಕರ್ನಾಟಕದ ಸಂಕಟ

ನಿಮ್ಮನ್ನು ಯಾರೂ ಮೂಸಲ್ಲ, ನಿಮ್ಮ ಹೆಣ್ಮಕ್ಕಳನ್ನು ದಂಧೆ ಕಳುಹಿಸಿಯಾದ್ರೂ ಹಣ ಕೊಡಿ‌ ಎಂದು ಕಿರುಕುಳ ನೀಡುತ್ತಿದ್ದರು. ಇದರಿಂದ ಹೆದರಿದ ವನಜಾಕ್ಷಿ ಮಗಳು ಭಾರತಿ ಕಳೆದ ಮೂರು ದಿನ ಸ್ಮಶಾನದಲ್ಲಿ ಕಾಲಕಳೆದಿದ್ದಾರೆ.

ಇದನ್ನೂ ನೋಡಿ: ಜೀವ ನುಂಗುತ್ತಿರುವ ಮೈಕ್ರೋ ಫೈನಾನ್ಸ್‌ : ಕಡಿವಾಣ ಹಾಕುವುದೆ ಕರ್ನಾಟಕ ಸರ್ಕಾರ?! #microfinance |janashakthi

Donate Janashakthi Media

Leave a Reply

Your email address will not be published. Required fields are marked *