ವಿಜಯಪುರ| ಆಸಿಡ್​ನ್ನು ನೀರೆಂದು ಭಾವಿಸಿ ಮದ್ಯದಲ್ಲಿ ಹಾಕಿ ಕುಡಿದ ವ್ಯಕ್ತಿ ಸಾವು – ಬಿಜೆಪಿ ಮುಖಂಡನ ವಿರುದ್ಧ ಪ್ರಕರಣ ದಾಖಲು

Please follow and like us:
ವಿಜಯಪುರ: ಟೇಬಲ್ ಮೇಲಿಟ್ಟಿದ್ದ ಆಸಿಡ್​ನ್ನು ನೀರೆಂದು ಭಾವಿಸಿ ಮದ್ಯದಲ್ಲಿ ಹಾಕಿಕೊಂಡು ಕುಡಿದು ಅಸ್ವಸ್ಥನಾಗಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೇ ಇಂದು ಜಿಲ್ಲಾಸ್ಪತ್ರೆಯಲ್ಲಿ ಸಾವನ್ನಪ್ಪಿರುವಂತಹ ಘಟನೆ ನಗರದಲ್ಲಿ ನಡೆದಿದೆ. ವಿಜಯಪುರ

ಮಹಮ್ಮದ ಶಫೀಕ್ ಮನಿಯಾರ್ (40) ಮೃತ ವ್ಯಕ್ತಿ ಎಂದು ಗುರುತಿಸಲಾಗಿದ್ದೂ, ಅವರ ಸಾವಿಗೆ ಬಾರ್ ಮಾಲೀಕ, ಮ್ಯಾನೇಜರ್ ಹಾಗೂ ವೇಟರ್ ನಿರ್ಲಕ್ಷವೇ ಕಾರಣವೆಂದು ಕುಟುಂಬಸ್ಥರು ದೂರು ದಾಖಲಿಸಿದ್ದಾರೆ.

ವಿಜಯಪುರ ನಗರದ ಎಲ್​ಬಿಎಸ್ ಮಾರುಕಟ್ಟೆ ಮೇಲಿರುವ ಸಿದ್ದಾರ್ಥ್​ ಬಾರ್​ನಲ್ಲಿ ಘಟನೆ ನಡೆದಿತ್ತು. ಮೊಹಮ್ಮದ್ ಪತ್ನಿ ಶಾಹೀದಾಳಿಂದ ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಬಾರ್ ಮಾಲೀಕ ಹಾಗೂ ಬಿಜೆಪಿ ಮುಖಂಡ ವಿಜುಗೌಡ ಎಸ್​ ಪಾಟೀಲ್​, ಮ್ಯಾನೇಜರ್ ಅಪ್ಪಾಸಾಬ್ ಮಮದಾಪೂರ, ವೇಟರ್ ಆನಂದ ಶಿಂಧೆ ಮೇಲೆ ಬಿಎನ್‌ಎಸ್ ಕಾಯ್ದೆ 106 (1), 3 (5) ಕಲಂ ಪ್ರಕಾರ ದೂರು ದಾಖಲಿಸಲಾಗಿದೆ.

ಬಾರ್ ಟೇಬಲ್ ಮೇಲೆ ನಿರ್ಲಕ್ಷ್ಯದಿಂದ ಆಯಸಿಡ್ ಬಾಟಲ್ ಇಟ್ಟಿದ್ದೇ ಮೊಹಮ್ಮದ ಸಾವಿಗೆ ಕಾರಣವೆಂದು ಪತ್ನಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಮೈಕ್ರೋ ಫೈನಾನ್ಸ್ ವ್ಯವಸ್ಥೆಯ ಕರಾಳಮುಖ: ಗ್ರಾಮೀಣ ಕರ್ನಾಟಕದ ಸಂಕಟ

ನಡೆದದ್ದೇನು?

ನಿನ್ನೆ ಬೆಳಿಗ್ಗೆ 8 ಗಂಟೆ ಸುಮಾರಿಗೆ ಸಿದ್ದಾಸಿದ್ದಾರ್ಥ್ ಬಾರ್​​ಗೆ ತೆರಳಿ ಮದ್ಯ ಸೇವಿಸಿದ್ದ ಮೊಹಮ್ಮದ್, ಕುಡಿಯುತ್ತಲೇ ಹೊಟ್ಟೆಯುರಿ ಎಂದು ಹೇಳಿದಾಗ ನೀರಿನ ಬದಲಾಗಿ ಟೈಲ್ಸ್ ಕ್ಲೀನ್ ಮಾಡುವ ಆಯಸಿಡ್ ಹಾಕಿಕೊಂಡು ಕುಡಿದಿದ್ದೀಯಾ ಎಂದು ವೇಟರ್ ಹೇಳಿದ್ದಾನೆ.

ಬಳಿಕ ಮೊಹಮ್ಮದನನ್ನು ಕುಟುಂಬಸ್ಥರು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಮೊಹಮ್ಮದ ಮೃತಪಟ್ಟಿದ್ದಾರೆ. ಇನ್ನು ಜಿಲ್ಲಾಧಿಕಾರಿಗಳ ಕಚೇರಿ ಆವರಣಕ್ಕೆ ಮೊಹಮ್ಮದ ಶವ ತಂದು ಪ್ರತಿಭಟನೆ ಮಾಡಲಾಗಿದೆ. ಸ್ಥಳಕ್ಕೆ ಆಗಮಿಸಿದ ಎಎಸ್ಪಿ ರಾಮನಗೌಡ ಹಟ್ಟಿ, ಡಿವೈಎಸ್​​ಪಿ ಬಸವರಾಜ ಯಲಿಗಾರ ಘಟನೆ ಕುರಿತು ದೂರು ದಾಖಲು ಮಾಡಲಾಗಿದೆ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ.

ಭರವಸೆ ಬೆನ್ನಲ್ಲೇ ಪ್ರತಿಭಟನೆ ಮೊಟಕುಗೊಳಿಸಬೇಕೆಂದ ಅಧಿಕಾರಿಗಳು, ನಂತರ ಮೊಹಮ್ಮದ ಶವವನ್ನು ಸಂಬಂಧಿಕರು ಹಾಗೂ ಜನರು ತೆಗೆದುಕೊಂಡು ಹೋಗಿದ್ದಾರೆ. ಸ್ಥಳದಲ್ಲಿ ಹೆಚ್ಚಿನ ಪೊಲೀಸರ ನಿಯೋಜನೆ ಮಾಡಲಾಗಿತ್ತು.

ಇದನ್ನೂ ನೋಡಿ: ಭುವನೇಶ್ವರಿ ಕಂಚಿನ ಪ್ರತಿಮೆ ಅನಾವರಣ ಕಾರ್ಯಕ್ರಮ. ಸ್ಥಳ:- ವಿಧಾನ ಸೌಧ

Please follow and like us:
Donate Janashakthi Media

Leave a Reply

Your email address will not be published. Required fields are marked *