ಬೆಂಗಳೂರು: ಸಿಲಿಕಾನ್ ಸಿಟಿಯು ಕಳೆದ ಕೆಲ ವಾರಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ತತ್ತರಿಸಿ ಹೋಗಿದೆ. ಧಾರಾಕಾರ ಮಳೆಗೆ ಉದ್ಯಾನ ನಗರಿಯ ಅರ್ಧದಷ್ಟು ಭಾಗ ಮಳೆ ನೀರು ತುಂಬಿ ಹೋಗಿದೆ. ಇದಕ್ಕೆ ಸಾಕ್ಷಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ದೃಶ್ಯಗಳು. ಬೆಂಗಳೂರು
ಮಳೆ ಹಾಗೂ ಚರಂಡಿ ನೀರು ಬೆಂಗಳೂರಿನ ಬಹುತೇಕ ಪ್ರದೇಶಗಳಲ್ಲಿ ಆವರಿಸಿರುವುದು ಕಂಡು ಬಂದಿದೆ. ಶನಿವಾರ ರಾತ್ರಿ 8.30ರ ಹೊತ್ತಿಗೆ ಬೆಂಗಳೂರು ನಗರದಲ್ಲಿ 17.4 ಮಿಮೀ ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ವರದಿ ಮಾಡಿದೆ. ಬೆಂಗಳೂರು
ಎಚ್‌ಎಎಲ್ ನಲ್ಲಿ 12 ಮಿಮೀ ಮಳೆ ದಾಖಲಾಗಿದೆ. ಅಲ್ಲದೆ ಭಾರತೀಯ ಹವಾಮಾನ ಇಲಾಖೆಯ (IMD) ಪ್ರಕಾರ ಭಾನುವಾರದಂದು ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ಇದೆ. ಹೀಗಾಗಿ ಬೆಂಗಳೂರಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಹವಾಮಾನ ಬದಲಾವಣೆಯಿಂದಾಗಿ ನಿವಾಸಿಗಳಿಗೆ ವಿಶೇಷವಾಗಿ ಹಿರಿಯರು ಹಾಗೂ ಮಕ್ಕಳು ಮನೆ ಒಳಗೆ ಇರಲು ಸೂಚನೆ ನೀಡಲಾಗಿದೆ. ಬೆಂಗಳೂರು
ಇದನ್ನೂ ಓದಿ: “ಇಂದು ಭಾರತದ ಸ್ವತಂತ್ರ ಡಿಜಿಟಲ್ ಮಾಧ್ಯಮದ ಮುಂದಿರುವ ಸವಾಲುಗಳು” ವಿಚಾರ ಸಂಕಿರಣ ಕಾರ್ಯಕ್ರಮ
ಇನ್ನೂ ಕಳೆದ ದಿನ ಸುರಿದ ಮಳೆಗೆ ಹೊರಮಾವು, ಹೆಣ್ಣೂರು, ಕಸ್ತೂರಿ ನಗರ, ರಾಜರಾಜೇಶ್ವರಿ ನಗರ, ಕೆಂಗೇರಿ, ಹೆಬ್ಬಾಳ ಜಂಕ್ಷನ್, ನಾಗವಾರ, ರಾಮಮೂರ್ತಿ ನಗರ, ವಿಂಡ್ಸರ್ ಮ್ಯಾನರ್ ಅಂಡರ್‌ಪಾಸ್-ಮೆಹಕ್ರಿ ಸರ್ಕಲ್ ಮತ್ತು ಹೊರವರ್ತುಲ ರಸ್ತೆಯಂತಹ ಪ್ರದೇಶಗಳು ತೀವ್ರ ತೊಂದರೆಗೊಳಗಾಗಿದ್ದು, ವಾಹನ ದಟ್ಟಣೆಯನ್ನು ಅನುಭವಿಸಿವೆ. ಬೆಂಗಳೂರು
ಬೆಂಗಳೂರಿನಲ್ಲಂತೂ ಅ. 19ರ ರಾತ್ರಿ ಸುರಿದ ಮಳೆಯಿಂದಾಗಿ ಅನೇಕ ಪ್ರದೇಶಗಳು ಜಲಾವೃತವಾಗಿವೆ. ರಾಜಾಜಿನಗರ, ಮಲ್ಲೇಶ್ವರಂ, ಮೆಜೆಸ್ಟಿಕ್, ಶಾಂತಿನಗರದಲ್ಲಿ, ಇನ್ನು, ತ್ಯಾಗರಾಜ ನಗರ, ಜೆಪಿನಗರ, ಜಯನಗರ, ಚಾಮರಾಜಪೇಟೆ, ಗಿರಿನಗರ, ಶ್ರೀನಗರ, ಕೆಆರ್ ಮಾರುಕಟ್ಟೆ, ಟೌನ್ ಹಾಲ್ ಬಳಿಯೆಲ್ಲಾ ಭಾರೀ ಮಳೆಯಾಗಿದೆ.
ಕೆಆರ್ ಪುರಂ ವಿಧಾನಸಭಾ ಕ್ಷೇತ್ರದ ಹೊರಮಾವು ವಾರ್ಡಿನ ಸಾಯಿಬಾಬಾ ಲೇಔಟ್ ಮತ್ತೆ ಜಲಾವೃತಗೊಂಡಿದೆ. ಭಾರೀ ಮಳೆಯಿಂದಾಗಿ ಜಲಾವೃತಗೊಂಡಿದ್ದ ಲೇಔಟ್ ನಲ್ಲಿ ಮೊನ್ನೆಯಷ್ಟೇ ಫೈರ್ ಇಂಜಿನ್ ಮೂಲಕ ನೀರನ್ನು ಹೊರ ಹಾಕಲಾಗಿತ್ತು. ಈಗ ಲೇಔಟ್ ಮತ್ತೆ ಜಲಾವೃತಗೊಂಡಿದ್ದು, ಜನ ಹೈರಾಣಾಗಿದ್ದಾರೆ.
ನಗರದ ಇನ್ನಿತರ ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿ ಜನ ರಾತ್ರಿ ಇಡೀ ನಿದ್ದೆಗೆಟ್ಟು ಕುಳಿತಿರುವ ಘಟನೆಗಳು ನಡೆದಿವೆ. ಈ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿವೆ. ಮಳೆ ನೀರಿನಲ್ಲಿ ಕಾರು ಬೈಕ್‌ಗಳು ಆಟಿಕೆಯಂತೆ ತೇಲಾಡುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಕಾಣ ಸಿಗುತ್ತಿವೆ.
ರಾಜರಾಜೇಶ್ವರಿ ನಗರ ಮತ್ತು ಕೆಂಗೇರಿ ನಿವಾಸಿಗಳು ತಮ್ಮ ನೆರೆಹೊರೆಯಲ್ಲಿನ ಪ್ರವಾಹದ ಬೀದಿಗಳ ಚಿತ್ರಗಳು ಮತ್ತು ವೀಡಿಯೊಗಳನ್ನು X (ಹಿಂದೆ ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಕೆಲವೆಡೆಯಂತೂ ಮೂರು ನಾಲ್ಕು ಅಡಿಯಷ್ಟು ನೀರು ನಿಂತಿದೆ. ಹೀಗಾಗಿ ಬೆಂಗಳೂರಿನ ಶೇಕಡಾ 50 ರಷ್ಟು ಭಾಗ ಸಂದೇಹವಿಲ್ಲದೆ ಮುಳುಗಿ ಹೋಗಿದೆ ಎಂದು ಜನ ಹೇಳಿಕೊಳ್ಳುತ್ತಿದ್ದಾರೆ.
ಇದನ್ನೂ ನೋಡಿ: ಬಿಗ್‌ಬಾಸ್ ಶೋ ಶೀಘ್ರದಲ್ಲೇ ಅಂತ್ಯ? ಮಾನವ ಹಕ್ಕು ಉಲ್ಲಂಘನೆ! Janashakthi Media