ಅಹ್ಮದಾಬಾದ್: ನದಿಯಾಡ್ ಪಟ್ಟಣದಲ್ಲಿ ಮೂವರು ಬಾಟಲಿಯಿಂದ ಜೀರಾ ಸೋಡಾ ಕುಡಿದು ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ. ಆದರೆ ಮೃತಪಟ್ಟಿರುವವರ ದೇಹದಲ್ಲಿ ಮೆಥೆನಾಲ್ ಅಂಶ ಪತ್ತೆಯಾಗದ ಹಿನ್ನೆಲೆಯಲ್ಲಿ, ಇದ್ದು ಕಳ್ಳಭಟ್ಟಿ ಸೇವನೆಯಿಂದ ಆದ ಸಾವಿನ ಪ್ರಕರಣವಲ್ಲ ಎಂದು ಪೊಲೀಸರು ದೃಢಪಡಿಸಿದ್ದಾರೆ. ಅಹ್ಮದಾಬಾದ್
ಉದ್ದೇಶಿತ ವಿಷಪ್ರಾಶನ ಪ್ರಕರಣ ಅಥವಾ ಹೊಸ ಮಿಶ್ರಣದ ಬಗ್ಗೆ ಸಾಕಷ್ಟು ಪ್ರಯೋಗವನ್ನು ಮಾಡದೇ ಇರುವ ಕಾರಣದಿಂದ ಸಂಭವಿಸಿದ ಪ್ರಕರಣ ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ತೂಕದ ಯಂತ್ರವನ್ನು ನಿರ್ವಹಿಸುವ ಮೂಗ ಮತ್ತು ಕಿವುಡ ಕಾನು ಚೌಹಾಣ್ (54), ದಿನಗೂಲಿ ನೌಕರ ರವೀಂದ್ರ ರಾಥೋಡ್ (49) ಮತ್ತು ಪಾನಿಪೂರಿ ಮಾರಾಟ ಮಾಡುವ ಯೋಗೇಶ್ ಕುಶ್ವಾಹಾ (40) ಮೃತಪಟ್ಟವರು. ಎಲ್ಲರೂ ಪಟ್ಟಣದ ಜವಾಹರನಗರ ಪ್ರದೇಶದ ನಿವಾಸಿಗಳು.
ವಿಧಿವಿಜ್ಞಾನ ಪ್ರಯೋಗಾಲಯದ ವರದಿಯಿಂದ ತಿಳಿದು ಬಂದಿರುವಂತೆ ದೇಹಗಳಲ್ಲಿ ಕೇವಲ ಶೇಕಡ 0.1ರಷ್ಟು ಮಾತ್ರ ಎಥೆನಾಲ್ ಅಂಶ ಕಂಡುಬಂದಿದೆ. ಅವರು ಮದ್ಯಪಾನದ ಹವ್ಯಾಸ ಹೊಂದಿರುವ ಕಾರಣದಿಂದ ಈ ಅಂಶ ಕಂಡುಬಂದಿರುವ ಸಾಧ್ಯತೆ ಇದೆ ಎಂದು ಕುಟುಂಬ ಸದಸ್ಯರು ಹೇಳಿದ್ದಾಗಿ ಖೇಡಾ ಎಸ್‌ಪಿ ರಾಜೇಶ್ ಗಾಧಿಯಾ ವಿವರಿಸಿದ್ದಾರೆ. ಅಹ್ಮದಾಬಾದ್
ಇದನ್ನೂ ಓದಿ: ಆನೇಕಲ್‌ನಲ್ಲಿ ಸಿಲಿಂಡರ್ ಬ್ಲಾಸ್ಟ್ – ಓರ್ವ ಗಂಭೀರ
ರವಿವಾರ ರಾತ್ರಿ ಈ ಪ್ರಕರಣ ಬೆಳಕಿಗೆ ಬಂದಿದ್ದು, ನದಿಯಾಡ್ ಸಿವಿಲ್ ಆಸ್ಪತ್ರೆಯಲ್ಲಿ ವೈದ್ಯಕೀಯ-ಕಾನೂನು ಪ್ರಕರಣ ದಾಖಲಿಸಲಾಗಿದೆ. ರವಿವಾರ ಸಂಜೆ ಜೀರಾ ಸೋಡಾ ಸೇವಿಸಿ ಇವರು ಮೃತಪಟ್ಟಿದ್ದಾಗಿ ತಿಳಿದು ಬಂದಿದೆ.
ಆರಂಭದಲ್ಲಿ ಇದು ಕಳ್ಳಭಟ್ಟಿ ಪ್ರಕರಣ ಎಂದು ಶಂಕಿಸಲಾಗಿತ್ತು. ಆದರೆ ಒಬ್ಬ ವ್ಯಕ್ತಿ ಜೀರಾ ಸೋಡಾ ಕುಡಿದು ಬೇರೆಯವರಿಗೆ ನೀಡಿದ್ದನ್ನು ಪ್ರತ್ಯಕ್ಷದರ್ಶಿಗಳು ನೋಡಿದ್ದಾರೆ. ರಾಥೋಡ್ ಮೊದಲು ಪ್ರಜ್ಞೆ ತಪ್ಪಿ ಬಿದ್ದಿದ್ದು, ಬಳಿಕ ಚೌಹಾಣ್ ಹಾಗೂ ಕುಶ್ವಾಹಾ ಕೂಡಾ ಪ್ರಜ್ಞೆ ಕಳೆದುಕೊಂಡಿದ್ದಾರೆ ಎಂದು ತಿಳಿಸಿದರು.
ರಾಥೋಡ್ ಆಸ್ಪತ್ರೆಗೆ ಸಾಗಿಸುವ ವೇಳೆಯೇ ಕೊನೆಯುಸಿರೆಳೆದಿದ್ದು, ಇಬ್ಬರು ಚಿಕಿತ್ಸೆ ವೇಳೆ ಮೃತಪಟ್ಟಿದ್ದಾರೆ. ಈ ಸಾವು ಹೃದಯ-ಉಸಿರಾಟ ಸ್ತಂಭನದಿಂದ ಆಗಿದೆ.
ಅವರ ದೇಹದಲ್ಲಿ ರಕ್ತ ಹೆಪ್ಪುಗಟ್ಟಿರುವುದು ನೋಡಿದರೆ ಸೋಡಿಯಂ ನೈಟ್ರೇಟ್ ಅಥವಾ ಪೊಟ್ಯಾಷಿಯಂ ಸಯನೈಡ್ ವಿಷಪ್ರಾಶನದಿಂದ ಸಾವು ಸಂಭವಿಸಿರಬಹುದು ಎಂದು ತಜ್ಞರು ಶಂಕಿಸಿದ್ದಾರೆ. ಮೂವರು ಕುಸಿದು ಬಿದ್ದ ಸ್ಥಳದ ಡಸ್ಟ್ಬಿನ್ ಗಳಲ್ಲಿದ್ದ 80 ಖಾಲಿ ಬಾಟಲಿಗಳನ್ನು ಪೊಲೀಸರು ವಶಪಡಿಸಿಕೊಂಡು ಪರೀಕ್ಷೆಗೆ ಕಳುಹಿಸಿದ್ದಾರೆ.
ಇದನ್ನೂ ನೋಡಿ: ರೈತ ನಾಯಕ ವಿಜೂ ಕೃಷ್ಣನ್ ಕೇಂದ್ರ ಬಜೆಟ್‌ಗೆ ಸೊನ್ನೆ ಅಂಕ ಕೊಟ್ಟಿದ್ಯಾಕೆ? Janashakthi Media