ಬೆಂಗಳೂರು: ಕರ್ನಾಟಕ ಚಲನ ಚಿತ್ರ ವಾಣಿಜ್ಯ ಮಂಡಳಿಯಲ್ಲಿ ಚುನಾವಣೆಯ ಕಾವು ಹೆಚ್ಚಾಗುತ್ತಿದ್ದೂ, 1,300 ಕ್ಕೂ ಹೆಚ್ಚು ವೋಟ್ ಇವೆ ಎಂದು ತಿಳಿದುಬಂದಿದೆ. ಈ ಒಂದು ಚುನಾವಣೆಯಲ್ಲಿ ಅಧ್ಯಕ್ಷಸ್ಥಾನಕ್ಕೆ ಒಬ್ಬರಲ್ಲ ಇಬ್ಬರಲ್ಲ, ಮೂವರು ನಾಮಪತ್ರ ಸಲ್ಲಿಸಿದ್ದಾರೆ.
ನಿರ್ಮಾಪಕ ಭಾ. ಮಾ. ಹರೀಶ್ ಹಾಗೂ ಶಾಸಕ ಮುನಿರತ್ನ ನಾಮಪತ್ರ ಸಲ್ಲಿಸಿದ್ದಾರೆ. ಆದರೆ, ಮಂಗಳವಾರ ಜನವರಿ 20 ರಂದು ನಟಿ ಜಯಮಾಲಾ ಅಧ್ಯಕ್ಷ ಸ್ಥಾನಕ್ಕಾಗಿಯೇ ನಾಮ ಪತ್ರ ಸಲ್ಲಿಸಿದ್ದಾರೆ. ಇದರ ಇನ್ನಷ್ಟು ವಿವರ ಇಲ್ಲಿದೆ .
ಜಯಮಾಲಾ–ಮುನಿರತ್ನ ಫೈಟ್?
ಚಲನ ಚಿತ್ರ ವಾಣಿಜ್ಯ ಮಂಡಳಿ ಎಲೆಕ್ಷನ್ ಇದೇ ತಿಂಗಳು ನಡೆಯುತ್ತಿದೆ. ತಿಂಗಳ ಕೊನೆ 31 ರಂದೇ ಎಲೆಕ್ಷನ್ ಇರುತ್ತದೆ. ಈ ಹಿನ್ನೆಲೆಯಲ್ಲಿಯೇ ನಾಮಪತ್ರ ಪ್ರಕ್ರಿಯೆ ಮೊನ್ನೆಯಿಂದಲೇ ಶುರು ಆಗಿದೆ.
ಇದನ್ನೂ ಓದಿ: ಕರೂರ್ ಕಾಲ್ತುಳಿತ ಪ್ರಕರಣ: ಎರಡನೇ ಸುತ್ತಿನ ವಿಚಾರಣೆಗೆ ನಟ ವಿಜಯ್ ಸಿಬಿಐ ಮುಂದೆ ಹಾಜರು
ಕಾಂಗ್ರೆಸ್ ವರ್ಸಸ್ ಬಿಜೆಪಿ ಫೈಟ್?
ಫಿಲ್ಮ್ ಚೇಂಬರ್ ಅಧ್ಯಕ್ಷ ಸ್ಥಾನಕ್ಕೆ ನಿರ್ಮಾಪಕ ಭಾ.ಮಾ.ಹರೀಶ್ ಮೊದಲು ನಾಮಪತ್ರ ಸಲ್ಲಿಸಿದರು. ಇವರಾದ್ಮೇಲೆ ಜನವರಿ-19 ರಂದು ಬಿಜೆಪಿ ಶಾಸಕ ಮುನಿರತ್ನ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದಾರೆ.
ನಾಮಪತ್ರ ಸಲ್ಲಿಸಿದ ಜಯಮಾಲಾ
ನಟಿ ಜಯಮಾಲಾ ಅವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಟಿ ಜಯಮಾಲಾ ಜನವರಿ 20 ರಂದು ನಾಮಪತ್ರ ಸಲ್ಲಿಸಿದ್ದಾರೆ.
ಜಯಮಾಲಾ–ಮುನಿರತ್ನ ಫೈಟ್?
ಅಲ್ಲಿಗೆ ಈ ಒಂದು ಎಲೆಕ್ಷನ್ ಅಲ್ಲಿ ಭಾರೀ ಪೈಪೋಟಿನೇ ಆಗುತ್ತಿದೆ ಅಂತ ಹೇಳಬಹುದು. ಮುನಿರತ್ನ, ಜಯಮಾಲಾ, ಭಾ.ಮಾ.ಹರೀಶ್, ನಿರ್ಮಾಪಕ ಚಿಂಗಾರಿ ಮಾಹದೇವ ಕೂಡ ರೇಸ್ ಅಲ್ಲಿಯೇ ಇದ್ದಾರೆ ಅಂತಲೂ ಹೇಳಬಹುದು.
ಕಾಂಗ್ರೆಸ್ ವರ್ಸಸ್ ಬಿಜೆಪಿ ಫೈಟ್?
ಕರ್ನಾಟಕ ಚಲನ ಚಿತ್ರ ವಾಣಿಜ್ಯ ಮಂಡಳಿಯ ಎಲೆಕ್ಷನ್ ಅಲ್ಲಿ ಬಿಜೆಪಿಯಿಂದ ಶಾಸಕ ಮುನಿರತ್ನ ಸ್ಪರ್ಧಿಸುತ್ತಿದ್ದಾರೆ. ಜಯಮಾಲಾ ಅವರು ಕಾಂಗ್ರೆಸ್ ಅನ್ನೋದು ಗೊತ್ತೇ ಇದೆ.
ನಿರ್ಮಾಪಕ ಭಾ.ಮಾ.ಹರೀಶ್ ಅವರಿಗೆ ಡಿಸಿಎಂ ಡಿಕೆಶಿ ಸಪೊರ್ಟ್ ಮಾಡಿದ್ದಾರೆ ಅನ್ನೋ ಮಾತು ಇದೆ. ಹಾಗಾಗಿಯೇ ಫಿಲ್ಮ್ ಚೇಂಬರ್ ಅಲ್ಲಿಯೇ ಕಾಂಗ್ರೆಸ್ ಮತ್ತು ಬಿಜೆಪಿ ಫೈಟ್ ಅನ್ನುವಂತೆನೂ ಆಗಿದೆ.
ಯಾರ ಬೆಂಬಲ ಯಾರಿಗೆ
ನಟಿ ಜಯಮಾಲಾ ಅವರಿಗೆ ನಟ-ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಬೆಂಬಲಿಸಿದ್ದಾರೆ. ಸಾ.ರಾ.ಗೋವಿಂದು ಎನ್ ಎಮ್ ಸುರೇಶ್ ಕೂಡ ಸಪೋರ್ಟ್ ಮಾಡ್ತಿದ್ದಾರೆ.
ಸ್ಪರ್ಧಾ ಕಣದಲ್ಲಿ ಮುನಿರತ್ನ ಇದ್ದಾರೆ. ಆದರೂ ಮುನಿ ಅವರ ಸಂಬಂಧಿ ಆಗಿರೋ ರಾಕ್ ಲೈನ್ ವೆಂಕಟೇಶ್ ಇಲ್ಲಿ ಜಯಮಾಲಾ ಅವರಿಗೆ ಸಪೋರ್ಟ್ ಮಾಡ್ತಿದ್ದಾರೆ ಅನ್ನುವ ಸುದ್ದಿ ಇದೆ.
ಹಾಗೆ ಚೇಂಬರ್ ನಲ್ಲಿ ಕಾಂಗ್ರೆಸ್ ವರ್ಸಸ್ ಬಿಜೆಪಿ ಜೊತೆಗೆ ಸಿದ್ದು ವರ್ಸಸ್ ಡಿಕೆಶಿ ಫೈಟ್ ಅನ್ನುವ ಮಾತು ಇದೆ. ಭಾಮ ಹರೀಶ್ ಅವರಿಗೆ ಈಗಾಗಲೇ ಡಿಕೆಶಿ ಬೆಂಬಲ ಸೂಚಿಸಿರುವ ಸುದ್ದಿನೂ ಇದೆ ಅಂತಲೇ ಹೇಳಬಹುದು.
ಇದನ್ನೂ ನೋಡಿ: ಉತ್ತರ ಪ್ರದೇಶ | ಮತದಾರರ “ಪರಿಷ್ಕರಣೆಯೋ? ಹರಣವೋ? | ಗುರುರಾಜ ದೇಸಾಯಿ| Janashakthi Media #upsir
