ಸಂಸದನಿಂದ ಆಸಿಡ್‌ ದಾಳಿ ಬೆದರಿಕೆ: ನವನೀತ್‌ ಕೌರ್‌ ರಾಣಾ ಆರೋಪ

  • ಶಿವಸೇನ ಸಂಸದ ಅರವಿಂದ ಸಾವಂತ್‌ ವಿರುದ್ಧ ಪೊಲೀಸರು ಕ್ರಮಕೈಗೊಳ್ಳಲು ನವನೀತ್‌ ಕೌರ್‌ ರಾಣಾ ಒತ್ತಾಯ
  • ಆಸಿಡ್‌ ದಾಳಿ ಮಾಡುವ ಫೋನ್‌ ಕರೆಗಳು ಮತ್ತು ಪತ್ರಗಳು ಬಂದಿರುವುದಾಗಿ ನವನೀತ್‌ ಕೌರ್‌ ಹೇಳಿಕೊಂಡಿದ್ದಾರೆ.
  • ನವನೀತ್‌ ಕೌರ್‌ ಅವರಿಂದ ಲೋಕಸಭಾಧ್ಯಕ್ಷ ಓಂ ಬಿರ್ಲಾ ಅವರಿಗೆ ದೂರು

ನವದೆಹಲಿ : ಆಮ್‌ ಆದ್ಮಿ ಪಾರ್ಟಿ (ಎಎಪಿ) ಸಂಸದೆ ನವನೀತ್‌ ಕೌರ್‌ ರಾಣಾ ಅವರು ಮಹಾರಾಷ್ಟ್ರ ಸರಕಾರದ ವಿರುದ್ಧ ಸದನದಲ್ಲಿ ಮಾತನಾಡಿದ್ದಕ್ಕಾಗಿ ಶಿವಸೇನೆ ಪಕ್ಷದ ಸಂಸದ ಅರವಿಂದ ಸಾವಂತ್‌ ಅವರು ಲೋಕಸಭೆಯ ಮೊಗಸಾಲೆಯಲ್ಲಿ  ಜೈಲಿಗೆ ಕಳುಹಿಸುವಾಗಿ ಬೆದರಿಕೆ ಹಾಕಿದ್ದಾರೆ ಎಂಬ ಬಗ್ಗೆ ಎನ್‌.ಡಿ.ಟಿವಿಯಲ್ಲಿ ವರದಿಯಾಗಿದೆ.

ಈ ಬಗ್ಗೆ ಶಿವಸೇನೆ ಲೆಟರ್‌ಹೆಡ್‌ ಮತ್ತು ಫೋನ್‌ ಕರೆಗಳ ಮೂಲಕ ಆಸಿಡ್‌ ದಾಳಿ ಮಾಡುವ ಬೆದರಿಕೆ ಬರುತ್ತಿರುವಾಗಿ ಲೋಕಸಭಾಧ್ಯಕ್ಷ ಓಂ ಬಿರ್ಲಾ ಅವರಿಗೆ ಮಾಹಿತಿ  ನೀಡಿದ್ದಾರೆ.

ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಸಂಸದ ಆರೋಪವನ್ನು  ನಿರಾಕರಿಸಿದ್ದಾರೆ. ಬದಲಾಗಿ ಯಾರಾದರೂ ಅಂತಹ ದೈಹಿಕ ಹಾನಿ ಮಾಡುವುದಾಗಿ ಬೆದರಿಕೆ ಹಾಕಿದರೆ ನಾನು ಮಹಿಳಾ ಸದಸ್ಯರೊಂದಿಗೆ ನಿಲ್ಲುತ್ತೇನೆ ಎಂದು ಹೇಳಿದರು.

ಸಂಸದೆ ನವನೀತ್‌ ಕೌರ್‌ ಅವರು ಮಾರ್ಚ್‌ 22ರಂದು ಲೋಕಸಭಾಧ್ಯಕ್ಷರಿಗೆ ಬರೆದ ಪತ್ರದಲ್ಲಿ ಶಿವಸೇನೆ ಸಂಸದ ಅರವಿಂದ ಸಾವಂತ್‌ ನನಗೆ ಬೆದರಿಕೆ ಹಾಕಿದ್ದಾರೆ. ಈ ನಡವಳಿಕೆ ಸರಿಯಾದದ್ದಲ್ಲ. ದೇಶದ ಎಲ್ಲ ಮಹಿಳೆಯರಿಗೂ ಮಾಡಿದ ಅವಮಾನವಾಗಿದೆ. ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪತ್ರದ ಮೂಲಕ ಆಗ್ರಹಿಸಿದ್ದಾರೆ.

ಮಹಾರಾಷ್ಟ್ರ ಸರಕಾರದ ವ್ಯವಹಾರದ ವಿಷಯವನ್ನು ಎತ್ತಿದ್ದಕ್ಕೆ ಸಾವಂತ್‌ ಅವರು ಕೋಪಗೊಂಡಿದ್ದು, ʻʻನೀವು ಮಹಾರಾಷ್ಟ್ರದಲ್ಲಿ ಹೇಗೆ ತಿರುಗಾಡುತ್ತೀರಿ ಎಂದು ನಾನು ನೋಡುತ್ತೇನೆʼʼ ಎಂದು ನವನೀತ್‌ ಕೌರ್ ಹೇಳಿದರು.‌

ಸಾವಂತ್‌ ಅವರು ʻʻನೀವು ಉದ್ಧವ್‌ ಠಾಕ್ರೆ ಜಿ ಬಗ್ಗೆ ಮಾತಾಡಿದರೆ, ಸರಕಾರದ ವಿರುದ್ಧ ಆರೋಪಗಳನ್ನು ಮಾಡಬೇಡಿ. ನೀವು ಹೆಮ್ಮೆಪಡುವ ಸುಂದರ ಮುಖದವರು, ನಾವು ಆಸಿಡ್‌ ಹಾಕಿದರೆ, ಅದರಿಂದ ನಿಮಗೆ ಎಲ್ಲಿಯೂ ಹೋಗಲು ಸಾಧ್ಯವಿಲ್ಲ…ʼʼ ಎಂದು ಬೆದರಿಕೆ ಹಾಕಿದ್ದಾರೆ.

ಇದನ್ನೂ ಓದಿ : ಶಾಹೀನ್ ಬಾಗ್ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದ ಕಪಿಲ್ ಬಿಜೆಪಿಗೆ ಸೇರ್ಪಡೆ

ʻʻನಾನು ಆ ಸಮಯದಲ್ಲಿ ಲೋಕಸಭೆ ಪ್ರಾಂಗಣದಲ್ಲಿದ್ದೆ ನನ್ನ ಜೊತೆ ಸಂಸದೆ ಭಾರತ್‌ ಮಾರ್ಗನಿ ಸಹ ಇದ್ದರು. ನಮ್ಮ ಹಿಂಬದಿಯಿಂದ ಅರವಿಂದ್‌ ಸಾವಂತ್‌ ಬೆದರಿಕೆ ಹಾಕಿದರು. ತಕ್ಷಣ ನಾನು ಹಿಂದೆ ತಿರುಗಿ ನೋಡಿದೆ. ನನ್ನ ಸಹೋದ್ಯಗಿಯೊಬ್ಬರು ಇದಕ್ಕೆ ಸಾಕ್ಷಿಯಾಗಿದ್ದಾರೆ. ನವನೀತ್‌ ಕೌರ್‌ ಅವರು ಸಹೋದ್ಯೋಗಿ ಅವರಿಗೆ ನೀವು ಕೇಳಿದ್ದೀರಾ? ಎಂದರೆ ಅವರು ಹೌದು ನಾನು ಕೇಳಿಸಿಕೊಂಡೆ ಎಂದು ಕೌರ್‌ ಎಎನ್‌ಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಫೋನ್‌ ಕರೆಗಳ ವಿವರ ಹಾಗೂ ದೊರೆತ ಎಲ್ಲಾ ಪತ್ರಗಳನ್ನು ನಾನು ಪೊಲೀಸರಿಗೆ ಹಾಗೂ ಓಂ ಬಿರ್ಲಾ ಜಿ ಅವರಿಗೆ ದೂರು ಸಲ್ಲಿಸಿದ್ದೇನೆ.

ನವನೀತ್‌ ಕೌರ್‌ ರಾಣಾ ಅವರು ಲೋಕಸಭೆಯಲ್ಲಿ ಅಮಾನತುಗೊಂಡಿರುವ ಮಹಾರಾಷ್ಟ್ರ ಪೊಲೀಸ್‌ ಸಚಿನ್‌ ವಾಜ್ಹೆ ಅವರ ವಿಚಾರವನ್ನು ಪ್ರಸ್ತಾಪಿಸಿ ಮುಕೇಶ್‌ ಅಂಬಾನಿ ಬಾಂಬ್‌ ಬೆದರಿಕೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆಂದು ಆರೋಪಿಸಿ ಬಂಧಿಸಲಾಗಿತ್ತು. ಥಾಣೆ ಉದ್ಯಮಿ ಮುನ್ಸುಖ್‌ ಹಿರಾನ್‌ ಸಾವಿಗೆ ಸಂಬಂಧಿಸಿದಂತೆ ತನಿಕೆ ನಡೆಸಲಾಗಿದೆ. ಮಾಜಿ ಪೊಲೀಸ್‌ ಆಯುಕ್ತ ಪರಮ್‌ ಬೀರ್‌ ಸಿಂಗ್‌ ಅವರ ಭ್ರಷ್ಟಾಚಾರದ ಆರೋಪದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ತಮ್ಮ ರಾಜೀನಾಮೆ ನೀಡಬೇಕು, ತಮ್ಮ ಸ್ಥಾನದಿಂದ ಕೆಳಗಿಳಿಯಬೇಕೆಂದು ಒತ್ತಾಯಿಸಿದ್ದರು.

ಸಾವಂತ್‌ ಅವರ ಆಕ್ರಮಣಕಾರಿ ದೇಷ ಭಾಷೆಯನ್ನು ಪ್ರಶ್ನಿಸಿದ ನವನೀತ್‌ ಕೌರ್‌ ಅವರು ʻʻನಾನು ಯಾವ ಬಾಡಿ ಲಾಂಗ್ವೇಜ್‌ ಹೊಂದಿರಬೇಕು, ಏನನ್ನು ಹೇಳಬೇಕು ಎಂಬುದರ ಕುರಿತು ಸಾವಂತ್‌ ಅವರಿಂದ ಕಲಿಯಬೇಕಿಲ್ಲ ಎಂದು ಹೇಳಿದರು.

Donate Janashakthi Media

Leave a Reply

Your email address will not be published. Required fields are marked *