ಡಿಸೆಂಬರ್ 4: ದಲಿತರ ಹಕ್ಕುಗಳಿಗಾಗಿ, ಸಂವಿಧಾನ ರಕ್ಷಣೆಗಾಗಿ ಐತಿಹಾಸಿಕ ಸಂಸತ್ ಚಲೋ

ನಾಗರಾಜ ನಂಜುಂಡಯ್ಯ 
ಗಣರಾಜ್ಯೋತ್ಸವ ದಿನದಂದು ರಾಷ್ಟಪತಿಗಳಿಗೆ 1 ಕೋಟಿ ಸಹಿಗಳ ಹಕ್ಕೊತ್ತಾಯ ಮನವಿ ಸಲ್ಲಿಸಲು ನಿರ್ಧಾರ

ಡಿಸೆಂಬರ್ 4ರಂದು ದೇಶದ  ಸುಮಾರು 27 ರಾಜ್ಯಗಳಿಂದ  ಆಗಮಿಸಿದ್ದ, 5 ಸಾವಿರಕ್ಕೂ ಹೆಚ್ಚು ದಲಿತ ಮತ್ತು ಕೃಷಿ ಕೂಲಿಕಾರ ಸಂಘಟನೆಗಳ ಕಾರ್ಯಕರ್ತರು ಸಂಸತ್ತಿನ ಬಳಿ ಜಂತರ್‍ ಮಂತರ್‍ ನಲ್ಲಿ ಪ್ರತಿಭಟನೆ ನಡೆಸಿದರು.

ರಾಷ್ಟ್ರದ ಬಹುತೇಕ ಎಲ್ಲಾ ರಾಜ್ಯಗಳ ದಲಿತ ಸಂಘಟನೆಗಳು, ಹಾಗೂ ‌ಕೃಷಿ ಕೂಲಿಕಾರರ ಸಂಘಟನೆಗಳು, ವೈಯಕ್ತಿಕ ದಲಿತ ಬುದ್ದಿ ಜೀವಿಗಳು, ಅಂಬೇಡ್ಕರ್ ವಾದಿಗಳು, ಎಡ ಚಿಂತಕರು, ಸಾಮಾಜಿಕ ಕಾರ್ಯಕರ್ತರು, ಪ್ರಗತಿಪರ ಹೋರಾಟಗಾರರು, ಒಟ್ಟಾರೆಯಾಗಿ, ಸಂವಿಧಾನ ಸಂರಕ್ಷಣೆ‌ ಮತ್ತು  ಪ್ರಜಾಸತ್ತಾತ್ಮಕ ಚಳುವಳಿಗಳಲ್ಲಿ ‌ತೊಡಗಿಸಿಕೊಂಡಿರುವ ಸುಮಾರು 88 ಕ್ಜೂ ಹೆಚ್ಚು ಸಂಘಟನೆಗಳು ಒಟ್ಟಿಗೆ ಸೇರಿ  ಈ ಸಂಸತ್ ಚಲೋ ಪ್ರತಿಭಟನೆಗೆ ಕರೆ ‌ನೀಡಿದ್ದವು. ಕರ್ನಾಟಕ ರಾಜ್ಯದಿಂದ ಸುಮಾರು‌ ನೂರಕ್ಕೂ ಹೆಚ್ಚು‌ ಮಂದಿ‌ ಭಾಗವಹಿಸಿದ್ದರು.

ಕಳೆದ ಆಗಸ್ಟ್ ತಿಂಗಳಲ್ಲಿ, ಹೈದರಾಬಾದ್ ನಗರದಲ್ಲಿ ‌ನಡೆದಿದ್ದ ರಾಷ್ಟ್ರೀಯ ದಲಿತ ಶೃಂಗಸಭೆಯ‌ ಕರೆಯ ಮೇರೆಗೆ, ಈ ಸಂಸತ್ ಚಲೋ ಪ್ರತಿಭಟನಾ ಹೋರಾಟವನ್ನು ಆಯೋಜಿಸಲಾಗಿತ್ತು.  ಅದು “ಕೇಂದ್ರದಲ್ಲಿನ ಪ್ರತಿಗಾಮಿ ಮತ್ತು ಮನುವಾದ ಪ್ರತಿಪಾದಕ ಬಿಜೆಪಿ ಆಡಳಿತದ  ದಲಿತ ವಿರೋಧಿ ‌ಧೋರಣೆಗಳ ವಿರುದ್ದ ದೇಶಾದ್ಯಂತ ಪ್ರಚಾರ ಪ್ರಕ್ಷೋಭೆ”ಯನ್ನು ನಡೆಸಲು  ನಿರ್ಧರಿಸಿತ್ತು

ಹಾಗೆಯೇ, ಸಂವಿಧಾನದ‌ ಪರಿಕಲ್ಪನೆಗಳು  ಮತ್ತು ಇದರ ಆಶಯಗಳಾದ ಜಾತ್ಯಾತೀತ, ಸಮಾಜವಾದ ಪ್ರಜಾಸತ್ತಾತ್ಮಕ ಮತ್ತು ಗಣತಂತ್ರದ ಅಡಿಯಲ್ಲಿ ದೇಶದ ಎಲ್ಲಾ ‌ಪ್ರಜೆಗಳಿಗೂ, ಸಮಾನತೆ  ಮತ್ತು ಸಾಮಾಜಿಕ ನ್ಯಾಯ, ಅಭಿವ್ಯಕ್ತಿ ಸ್ವಾತಂತ್ರ್ಯ ಒದಗಿಸುವ ನಿಟ್ಟಿನಲ್ಲಿ, ಪ್ರಮುಖವಾಗಿ ದಲಿತರ ಮೇಲೆ‌ ನಡೆಯುವ ಅಸ್ಪೃಶ್ಯತಾ ದೌರ್ಜನ್ಯಗಳ‌ ನಿರ್ಮೂಲನೆಗಾಗಿ ಹಾಗೂ  ಎಸ್ ಸಿ ಎಸ್ ಪಿ / ಟಿ ಎಸ್ ಪಿ ಉಪಯೋಜನೆಗಳ‌ ಕಾಯಿದೆಯ ಅನುಷ್ಠಾನದ ಮೂಲಕ, ದಲಿತ ಮತ್ತು ಆದಿವಾಸಿ ಸಮುದಾಯಗಳಿಗೆ ಶೈಕ್ಷಣಿಕ, ಉದ್ಯೋಗ, ವ್ಯವಸಾಯ ಭೂಮಿ ಮತ್ತು ಸೂರು-ಮನೆಗಳನ್ನು ಒದಗಿಸಲು ಆಗ್ರಹಿಸಿ, ಒಟ್ಟಾರೆಯಾಗಿ ದಲಿತ ಆದಿವಾಸಿಗಳ ಆರ್ಥಿಕ ಸಬಲೀಕರಣ‌,ಸುರಕ್ಷೆ ಮತ್ತು ಸಾಮಾಜಿಕ ಘನತೆಗಾಗಿ,  ಆಗ್ರಹಿಸಿ, ದೇಶಾದ್ಯಂತ  1 ಕೋಟಿ ಸಹಿ ಸಂಗ್ರಹಣೆ ನಡೆಸಿ, ಮನವಿ ಪತ್ರವನ್ನು ರಾಷ್ಟ್ರಪತಿ ಗಳಿಗೆ ಸಲ್ಲಿಸುವ ನಿರ್ಧಾರವನ್ನು ಕೈಗೊಳ್ಳಲಾಯಿತು.

ಜನವರಿ, 26 ರಂದು, ಗಣರಾಜ್ಯೋತ್ಸವ ದಿನದಂದು ಸಹಿ ಸಂಗ್ರಹಣೆ ಮನವಿಯನ್ನು ಗೌರವಾನ್ವಿತ ರಾಷ್ಟಪತಿಗಳಿಗೆ ಸಲ್ಲಿಸಲು ತೀರ್ಮಾನಿಸಲಾಯಿತು.

ಇದನ್ನೂ ಓದಿಭಾರತದಲ್ಲಿ ವ್ಯಾಪಕ ಬಡತನ : ಬಿಹಾರದ ಜಾತಿಗಣತಿ ಕಣ್ಣು ತೆರೆಸಬೇಕು

ದಲಿತ‌ ಮತ್ತು‌ ಕೃಷಿ ಕೂಲಿಕಾರರ ಸಂಘಟನೆಗಳ ಈ ಒಗ್ಗಟ್ಟಿನ ಹೋರಾಟವು, ಮುಂದಿನ ದಿನಗಳಲ್ಲಿ ಒಂದು ಐತಿಹಾಸಿಕ ಚಳುವಳಿ ರೂಪಿಸಲು ಸಾಕ್ಷಿಯಾಗಿತ್ತು. ದೊಡ್ಡ ಸಂಖ್ಯೆಯಲ್ಲಿ ದಲಿತ ಮಹಿಳೆಯರು ಭಾಗವಹಿಸಿದ್ದು ವಿಶೇಷವಾಗಿ ಆಕರ್ಷಿಸಿತ್ತು.

ಪಾರ್ಲಿಮೆಂಟ್ ಚಲೋ ಪ್ರತಿಭಟನಾ ಸಭೆಯು ಬೆಳಿಗ್ಗೆ 11 ಗಂಟೆಗೆ ಆರಂಭವಾಯಿತು. ಆದ್ಯಕ್ಷೀಯ ಮಂಡಳಿಯಲ್ಲಿ ಪ್ರಮುಖ ಸಂಘಟನೆಗಳ ಅಖಿಲ ಭಾರತ ನಾಯಕರು ಒಳಗೊಂಡಿದ್ದರು,ಅಖಿಲ ಭಾರತ ಕೃಷಿಕೂಲಿಕಾರರ ಸಂಘನಟೆಯ ಮುಖಂಡರಾದ.ವಿಜಯರಾಘವನ್ ಮತ್ತು  ವೆಂಕಟ್, ದಲಿತ ಶೋಷಿತ ಮುಕ್ತಿ ಮಂಚ್‍(ಡಿಎಸ್‍ಎಂಎಂ)ನ ಮುಖಂಡರಾದ ಸುಭಾಷಿಣಿ ಅಲಿ, ವಿಕ್ರಂ ಸಿಂಗ್, ರಾಮಚಂದ್ರ ಡೋಮ್, ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪ್ರಸ್ತಾವಿಕ‌ವಾಗಿ, ವಿಜಯ ರಾಘವನ್ ಮಾತನಾಡಿ, ಈ ಬೃಹತ್ ಸಭೆಯ ಉದ್ದೇಶಗಳನ್ನು ಸಂಕ್ಷಿಪ್ತವಾಗಿ ವಿವರಿಸಿದರು. ಕೇಂದ್ರದಲ್ಲಿ ಕಳೆದ 2014 ರಿಂದ ಆಡಳಿತ ನಡೆಸುತ್ತಿರುವ ಬಿಜೆಪಿ ನೇತೃತ್ವದ ಆಳ್ವಿಕೆಯಲ್ಲಿ,  ದಲಿತರ ಸ್ಥಿತಿ ಗತಿಗಳು ತುಂಬಾ ಶೋಚನೀಯವಾಗಿದೆ. ಸ್ವಾತಂತ್ರ್ಯದ 76 ವರ್ಷಗಳ ನಂತರವು, ಇವರ ಮೇಲಿನ ಅಸ್ಪೃಶ್ಯತೆ ಹೆಸರಿನ ದೌರ್ಜನ್ಯಗಳು‌ ಹೆಚ್ಚಾಗಿರುವುದು ಅಂಕಿಅಂಶ ಗಳಿಂದ ಸಾಬೀತಾಗಿದೆ. ಬಿಜೆಪಿ ಪ್ರೋತ್ಸಾಹ ಮಾಡುತ್ತಿರುವ ಮನುಸ್ಮೃತಿ ಯೇ ಮೂಲ ಕಾರಣವೆಂದರು. ಇವರ ಆಡಳಿತದಲ್ಲಿ, ಸಂವಿಧಾನದ ಮೂಲ ಆಶಯಗಳನ್ನು ನಾಶಗೊಳಿಸಲಾಗುತ್ತಿದೆ ಎಂದರು.

ಮತ್ತೊಬ್ಬ ಭಾಷಣಕಾರರಾದ, ಮಲ್ಲಪಲ್ಲಿ ಲಕ್ಷ್ಮಯ್ಯ, ಹೈದರಾಬಾದ್ ನಲ್ಲಿರುವ, ದಲಿತ ಅಧ್ಯಯನ ಕೇಂದ್ರ (ಸಿಡಿಎಸ್)ದ ಅಧ್ಯಕ್ಷರು , ಮಾತನಾಡುತ್ತಾ, , ಬಿಜೆಪಿ ಯನ್ನು ಕೇಂದ್ರದಿಂದ ಮುಂದಿನ‌ ಲೋಕಸಭಾ ಚುನಾವಣೆಯಲ್ಲಿ ಸೋಲಿಸಲೇ ಬೇಕು, ಇಲ್ಲದಿದ್ದರೆ, ಸಂವಿಧಾನವು ಅಪಾಯಕ್ಕೆ ಸಿಲುಕುತ್ತದೆ ಎಂದರು. ಡಾ. ಬಿ ಆರ್ ಅಂಬೇಡ್ಕರ್ ರವರ ಭಾರತದ ಪರಿಕಲ್ಪನೆ ಎಂದರೆ, ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿಯುವುದು. ಪ್ರಜಾಪ್ರಭುತ್ವ,  ಸಮಾನತೆ, ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವೇ ನಮ್ಮ ಸಂವಿಧಾನದ ಪರಿಪೂರ್ಣ ಪರಿಕಲ್ಪನೆ, ಬಿಜೆಪಿ ಆಡಳಿತವು ಇಂತಹ ಪರಿಕಲ್ಪನೆಯ ಭಾರತವನ್ನು ನಾಶಗೊಳುಸಲು‌ ಹೊರಟಿದೆ. ಆದ್ದರಿಂದ, ಅನಿವಾರ್ಯವಾಗಿ ಬಿಜೆಪಿ ಯನ್ನು ‌ಕಿತ್ತೆಸೆಯಬೇಕು ಎಂದರು.

ಆನಂತರ, ರಾಮಚಂದ್ರ ಡೋಂ, ಕೇರಳದ ಎಂಪಿ ಜಾನ್ ರವರು,ಆರ್ ಜೆಡಿಯ ಎಂಪಿ, ತಮಿಳುನಾಡಿನ ಎಂಪಿ, ಸ್ವೆಲ್ವ ರಾಜ್ ರವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ರಾಷ್ಟ್ರಪತಿಗಳಿಗೆ ಸಲ್ಲಿಸುವ 17 ಬೇಡಿಕೆಗಳ‌ ಪಟ್ಟಿಯನ್ನು .ಸುಭಾಷಿಣಿ ಅಲಿ‌ಯವರು ಮಂಡಿಸಿದರು.

ಈ ವಿಡಿಯೋ ನೋಡಿ : ಭಾರತವು ಪ್ಯಾಲೆಸ್ತೀನ್ ಪರ ನಿಲ್ಲಬೇಕು : ಸದಾಗ್ರಹದ ಸಭೆ ಆಗ್ರಹ Janashakthi Media

 

Donate Janashakthi Media

Leave a Reply

Your email address will not be published. Required fields are marked *