ಇದು ಬರ ಮತ್ತು ಕಾಡಿನ ಕಥೆ: ಬರಕ್ಕೆ ಯಾರು ಹೊಣೆ? ಏನೆನ್ನುತ್ತಾರೆ ಪರಿಸರವಾದಿಗಳು?

– ವಿಶೇಷ ಲೇಖನ:ಸಂಧ್ಯಾ ಸೊರಬ

ಕರ್ನಾಟಕ ರಾಜ್ಯದಲ್ಲಿ ಚುನಾವಣೆಯ ಕಾವು ಒಂದುಕಡೆ ಏರುತ್ತಿದ್ದರೆ, ಇನ್ನೊಂದು ಕಡೆ ಬರದ ರಣದ ಕಾವು ಎಲ್ಲರನ್ನ ಧಂಗಾಗಿಸುತ್ತಿದೆ. ಜನಪ್ರತಿನಿಧಿಗಳೇನೋ ಚುನಾವಣೆ ಅಂತೆಲ್ಲಾ ಓಡಾಡ್ತಿದ್ದಾರೆ, ಆದ್ರೆ ನೀರಿಗಾಗಿ ದಣಿವು ಆರಿಸಿಕೊಳ್ಳೋಕೆ ಒಂದಿಷ್ಟು ಜೀವಗಳು ಬಾಯಿತೆಗೆದು ಆಕಾಶದತ್ತ ನೋಡುವಂತಾಗಿದೆ. ಇನ್ನು ಪಾಪ, ಆ ಮೂಖ ಪ್ರಾಣಿಪಕ್ಷಿಗಳು ಅತ್ತ ವ್ಯಥೆಯನ್ನ ವ್ಯಕ್ತಪಡಿಸಿಕೊಳ್ಳದೇ ನೀರೂ ಸಿಗದೇ ಸಾವನ್ನಪ್ಪುತ್ತಿವೆ. ಅಂತಹ ರಣಮಾರಿ ಬಿಸಿಲಿನ ಬರ ಈ ಬಾರಿ ಕರ್ನಾಟಕ ಎದುರಿಸುವಂತಾಗಿದೆ. ಎರಡೂ ದಿನಗಳ ಹಿಂದೆ ಆನೆಗಳು ಕುಡಿಯಲು ನೀರು ಸಿಗದೇ ಸಾವನ್ನಪ್ಪಿರುವ ಬಗ್ಗೆ ಸುದ್ದಿಯಾಗಿದೆ.

ಬಿಸಿಲ ಏರಿಕೆ ಬಗ್ಗೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ಹವಾಮಾನ ಇಲಾಖೆ ಹೇಳ್ತಾನೆ ಇದೆ. ಇನ್ನೂ ಧಗೆಯ ಕಾವಿಗೆ ಸ್ಟ್ರೋಕ್‌ಗಳು ಕಂಡುಬರ್ತಿವೆ. ಜನ್ರ ಅನಾರೋಗ್ಯದ ಮೇಲೆ ದುಷ್ಪರಿಣಾಮ ಈ ರಣಬಿಸಿಲಿಂದ ಆಗ್ತಾಯಿದೆ. ಅದು ಸರಿ. ಚುನಾವಣೆಯ ಕಾವಿನ ಬಗ್ಗೆ ನಾನ್‌ ಗೆಲ್ಲಬೇಕು, ನಮ್ಮ ಪಾರ್ಟಿ ಗೆಲ್ಲಬೇಕು, ಅವನು ಸೋಲಬೇಕು ಅಂತೆಲ್ಲಾ ರಾಜಕಾರಣಿಗಳು ಭರ್ಜರಿಯಾಗಿ ಪ್ರಚಾರ, ರೋಡ್‌ ಷೋ, ಭಾಷಣ ಅಂತೆಲ್ಲಾ ಪುಂಖಾನುಪುಂಖವಾಗಿ ಜನರಿಗೆ ಅದು ಮಾಡ್ತೀವಿ ಇದು ಮಾಡ್ತೀವಿ ಅಂತಿದ್ದಾರೆ. ಅದೆಲ್ಲಾ ಸರಿ, ನಿಜವಾದ ಸಮಸ್ಯೆ ಬರ. ಜನಜಾನುವಾರು ನೀರಿಗಾಗಿ ತಾತ್ವರ ಪಡುತ್ತಿರೋದು. ಬರಪರಿಹಾರಕ್ಕಾಗಿ ಪಕ್ಷದ್ದು ಒಂದು ಮನವಿ, ಪ್ರತಿಪಕ್ಷದ್ದು ಇನ್ನೊಂದು ರಾಗ. ಸುಪ್ರಿಂಕೋರ್ಟ್‌ ಅಂಗಳದಲ್ಲಿ ಚೆಂಡು ಹೋಗಿರೋದು. ನೀರಿನ ಸಮಸ್ಯೆಯಿದೆ, 224 ತಾಲೂಕುಗಳು ಬರಪೀಡಿತ ಅಂತ ಘೋಷಣೆಯಾಗಿವೆ. ಇದು ರಾಜಕೀಯದ ಸಮಸ್ಯೆ ಅನ್ನೋದಕ್ಕಿಂತ ಮುಖ್ಯವಾಗಿ ಜೀವಜಲದ ಪ್ರಶ್ನೆ. ಹಾಗಾದ್ರೆ, ಇಷ್ಟೊಂದು ಮಟ್ಟದ ಅದು ಬೇಸಿಗೆ ಆರಂಭಕ್ಕೂ ಮುನ್ನವೇ ಉಷ್ಷಪ್ಪಾ ಅಂತಾಗಿರೋದು ಸಾಮಾನ್ಯ ವಿಷಯವೇನಲ್ಲ. ಇದು ಬರೀ ಜನಸಾಮಾನ್ಯರ ಪ್ರಶ್ನೆಯಲ್ಲ. ಇಡೀ ಸಂಕುಲದ ಪ್ರಶ್ನೆ.

ಹಾಗಾದ್ರೆ, ಇಷ್ಟೊಂದು ಬಿಸಿಲಿನ ರಣಕ್ಕೆ ಕಾರಣಗಳೇನು ಅನ್ನೋದನ್ನಾ ನೋಡೋಕೆ ಹೋದ್ರೆ, ಒಂದು ರೀತಿಯಲ್ಲಿ ನಾವೆಲ್ಲರೂ ಮುಖ್ಯವಾಗಿ ನಮ್ಮನಾಳುತ್ತಿರುವ ಜನಪ್ರತಿನಿಧಿಗಳು, ಅಭಿವೃದ್ಧಿಯ ಹೆಸರಿನಲ್ಲಾದ ಮಾರಣಹೋಮಕ್ಕೆ ಸಾಕ್ಷಿ ಈ ಬರ. ಈ ಬಗ್ಗೆ ಜನಶಕ್ತಿಮೀಡಿಯಾ ಪರಿಸರವಾದಿಗಳ ಜೊತೆ ಮಾತನಾಡಿದಾಗ ನೀಡಿದ ಸಲಹೆ, ಸೂಚನೆಗಳು, ಕಾರಣಗಳೇನು? ಅನ್ನೋದನ್ನ ನೋಡೋದಾದ್ರೆ, ಹಿರಿಯ ಪರಿಸರವಾದಿ ಸುರೇಶ್‌ ಹೆಬ್ಳೀಕರ್‌ ಹೇಳುವಂತೆ, “ಸರ್ಕಾರಗಳಿಗೆ ಸಮಗ್ರವಾದ ಪರಿಸರವಾದ ಸರಿಯಾದ ಮಾಹಿತಿಗಳಾಗಲೀ, ಚಿಂತನೆಯಾಗಲೀ ಇಲ್ಲ. ಪಶ್ಚಿಮಘಟ್ಟ ಇಡೀ ವಿಶ್ವದಲ್ಲಿ ಜೀವವೈವಿಧ್ಯತೆಯ ತಾಣ. 88 ದಶಲಕ್ಷ ವರ್ಷಗಳ ಹಿಂದೆ ನಿರ್ಮಾಣವಾದಂತಹ ಪಶ್ಚಿಮಘಟ್ಟಗಳು ಕಳೆದ 4-5 ವರ್ಷಗಳಲ್ಲಿ ಲಕ್ಷಗಳಷ್ಟು ಮರಗಳನ್ನು ಕಡೆಯಲಾಗಿದೆ. ಟ್ರಾನ್ಸಿಮೇಷನ್ಸ್‌ ಲೈನ್‌, ರಸ್ತೆ ಅಗಲೀಕರಣ, ಕೈಗಾರಿಕೆಗೆ ಹೈಬ್ರೋಪವರ್ಗೆ ಸೇರಿದಂತೆ ಇವುದಕ್ಕೆಲ್ಲಾ ಪಶ್ಚಿಮಘಟ್ಟದ ನಾಶ ಅಗತ್ಯವಿರಲಿಲ್ಲ. ಪಶ್ಚಿಮಘಟ್ಟ ನಾಶ ಮಾಡುತ್ತಿರುವ ಪರಿಣಾಮವೇ ಈ ಬರʼ. ಅರಬ್ಬೀ ಸಮುದ್ರದಿಂದ ಬರುವಂತಹ ಮಳೆಯ ಮೋಡದಿಂದ ಸುರಿಯುವ ಧೋ ಎನ್ನುವ ಮಳೆಗೆ ಪಶ್ಚಿಮಘಟ್ಟ ಕಾರಣ. 30 ವರ್ಷ ಆಯಿತು ಪಶ್ಚಿಮಘಟ್ಟ ಉಳಿಸಲುಹೋರಾಡಲು ಶುರುವಾಗಿದೆ. ನಮ್ಮ ಕೆರಿಯರ್‌ ಅನ್ನೇ ಪಶ್ಚಿಮಘಟ್ಟ ಉಳಿಸಲೆಂದೂ ಹಾಳುಮಾಡಿಕೊಂಡೆವು ನಮ್ಮ ಪರಿಸರ ಉಳಿಸುವ ಧ್ವನಿಗೆ ಜನಪ್ರತಿನಿಧಿಗಳು ಧ್ವನಿಗೂಡಿಸಲೇಯಿಲ್ಲ” ಎಲ್ಲರಿಗೂ ನೀರು ಬೇಕು, ಪ್ರಕೃತಿ ಉಳಿಯಬೇಕು. ಪಶ್ಚಿಮಘಟ್ಟ ಉಳಿಯಲೇಬೇಕು”.

ಟ್ರಫಿಕಲ್‌ ದೇಶ ನಮ್ಮದು. ರಸಗೊಬ್ಬರ ಮಣ್ಣಿನ ತೇವಾಂಶದಿಂದ ಮಳೆಬರಬೇಕು. ಎಲ್ಲಿ ನೋಡಿದರಲ್ಲಿ ಟಾರ್‌, ಬಿಲ್ಡಿಂಗ್ಹೇಗೆ ಬದುಕೋದು? ಹೇಳಿ ? ಡೆಕ್ಕನ್‌ ಹುಲ್ಲುಗಾವಲನ್ನೂ ಈ ಜನಪ್ರತಿನಿಧಿಗಳು ಬಿಡುತ್ತಿಲ್ಲ. ಅದನ್ನು ನಾಶಮಾಡುತ್ತಿದ್ದಾರೆ. ಈ ಹುಲ್ಲುಗಾವಲಿಗೆ 34%ರಷ್ಟು ಕಾರ್ಬನನ್ನು ಹೀರಿಕೊಳ್ಳುವ ಶಕ್ತಿಯಿದೆ. ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಲು ಮತ್ತು ಪರಿಸರ ವ್ಯವಸ್ಥೆಯ ಉತ್ಪಾದಕತೆಯನ್ನು ನಿಯಂತ್ರಿಸಲು, ಕಡಿಮೆ ಮಳೆಯಿಂದಾಗಿ ಖನಿಜಗಳ ಸೋರಿಕೆಯನ್ನು ಕಡಿಮೆ ಮಾಡಲು. ಯಾರಿಗೂ ಇದೂ ಬೇಕಾಗಿಲ್ಲ. ಬರಪರಿಹಾರಕ್ಕೆ ಮಳೆಗಾಗಿ ಪಶ್ಚಿಮಘಟ್ಟ ಅತೀ ಮುಖ್ಯ ಆನೆ, ಹುಲಿಯಷ್ಟೇ ಇವರ ಕಣ್ಣಿಗೆ ಬೀಳುವುದು ಆದರೆ, ಜೀವಸಂಕುಲವೆಂದರೆ, ಇದಲ್ಲ. ಸೂಕ್ಷ್ಮಜೀವಿಗಳಿಂದಲೇ ದೊಡ್ಡಸಂಕುಲ. ಹುಳ,ಹುಪ್ಪಡಿ, ಹಕ್ಕಿ ಪಕ್ಷಿ ಸೇರಿದಂತೆ ಸಣ್ಣಸಣ್ಣ ಕಣ್ಣಿಗೆ ಕಾಣದ ಸೂಕ್ಷ್ಮಜೀವಿಗಳು ಸಹ ಪರಿಸರಕ್ಕೆ ಬೇಕು. ಸೂಕ್ಷ್ಮಜೀವಿಗಳಿಂದಲೇ ಮೇಲ್ಮಟ್ಟದ ಜೀವಸಂಕುಲ. ಈ ಬಿಸಿಲು ಬರ, ಕೇವಲ ಮನುಷ್ಯ, ದೊಡ್ಡ ಪ್ರಾಣಿಗಳಿಷ್ಟೇ ಅಲ್ಲ, ಕಣ್ಣಿಗೆ ಕಾಣದ ಜೀವಜಗತ್ತಿಗೂ ಅತೀಮುಖ್ಯ”.

ಇದನ್ನು ಓದಿ : ಕವಯತ್ರಿ ಡಾ.ಮಮ್ತಾ ಸಾಗರ್ ಅವರಿಗೆ ಅಭಿನಂದನೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ

ಇನ್ನು ಪರಿಸರವನ್ನು ಒಡೆದುಒಡೆದು ಎಷ್ಟೊಂದು ಹಾಳುಮಾಡಿದ್ದಾರೆಂದರೆ, ಅದಕ್ಕೆ ಈ ತಲೆದೋರಿರುವ “ಬರ”ವೇ ಸಾಕ್ಷಿ. “ಬರ ಬರಲು ಯಾವುದೇ ಒಂದು ಸರ್ಕಾರ ಕಾರಣವಲ್ಲ. ಅಭಿವೃದ್ಧಿಯ ಹೆಸರಿನ ರಾಜಕಾರಣ ಇದಕ್ಕೆ ಕಾರಣ ಎನ್ನುತ್ತಾರೆ ಪರಿಸರವಾದಿ ʼಜೋಸೆಫ್‌ ಹೂವರ್‌”.‌ ಪರಿಸರವನ್ನು ಉಳಿಸಲು ಈಗ ಉಳಿದಿರುವುದು ಕೇಳವ 10%. ಈಗಲಾದರೂ ಎಚ್ಚೆತ್ತುಕೊಳ್ಳದೇ ಹೋದರೆ ನಮ್ಮ ಮುಂದಿನ ಪೀಳಿಗೆಗೆ ಬಹಳ ಕೆಟ್ಟವಾತಾವರಣ ಪರಿಸರವನ್ನು ನಾವು ಬಿಟ್ಟುಹೋಗುವುದರಲ್ಲಿ ಯಾವುದೇ ಸಂಶಯವಿಲ್ಲ. ಪರಿಸರ ಅಂದರೆ, ಏನೂ ಎನ್ನುವುದೇ ಬಹುತೇಕ ರಾಜಕಾರಣಿಗಳಿಗೆ ಗೊತ್ತೇಯಿಲ್ಲ. ಸದ್ಯ ಬೆಂಗಳೂರು 36ಡಿಗ್ರಿಯ ಬಿಸಿಲಿದೆ. ಇದು ಹೀಗೆ ಮುಂದುವರೆದಲ್ಲಿ 52 ಡಿಗ್ರಿ ಆದರೂ ಆಯಿತು ಎಂಬ ಆತಂಕವನ್ನು ಪರಿಸರವಾದಿ “ಜೋಸೆಫ್‌ ಹೂವರ್‌ ”ವ್ಯಕ್ತಪಡಿಸುತ್ತಾರೆ.

“ಗ್ಲೋಬಲ್‌ ವಾರ್ಮಿಂಗ್‌ ಈಗ ಶುರುವಾಗಿದೆ. ಹವಮಾನ ವೈಪರಿತ್ಯವಾಗುವುದು ಸಹಜ. ಇದೆಲ್ಲದರ ನಡುವೆ ಸಿಕ್ಕಿಹಾಕಿಕೊಳ್ಳುವುದು ಜನರು ಮತ್ತು ಅರಣ್ಯಜೀವಿಗಳು. ದಯವಿಟ್ಟು ,ದಯವಿಟ್ಟು ರಕ್ಷಿಸಿ ಎಂದು ಜನಪ್ರತಿನಿಧಿಗಳಿಗೆ ರಾಜಕಾರಣಿಗೆ ಮನವಿ ಮಾಡಿ ಆಗಿಹೋಗಿದೆ. 27 ಲಕ್ಷ ಮರಗಳನ್ನು ಪಶ್ಚಿಮಘಟ್ಟದಲ್ಲಿ ಕಡೆಯುತ್ತಿದ್ದಾರೆ ಎಂದು ಪರಿಸರವಾದಿಗಳು ಹೋರಾಟಮಾಡಲು ಹೋದರೆ, ಕೇವಲ 60-70 ಜನ ಬರುತ್ತಾರಷ್ಟೇ.ಅದೇ ಬೆಂಗಳೂರಿನಲ್ಲಿ ಅದ್ಯಾವುದೋ ಸ್ಟೀಲ್‌ ಬ್ರಿಡ್ಜ್‌ ಬೀಳಿಸುತ್ತಾರೆಂದರೆ 800 ಜನ ಬರುತ್ತಾರೆ. ಬರ ಬರಬಾರದು ಎಂದರೆ, ಜನ ಸರಿಯಾಗಬೇಕು. ಕತ್ತೆಗಳಿಗೆ ಮತಹಾಕಿದರೆ, ನಾವು ಕತ್ತೆಗಳಾಗುತ್ತೇವೆ. 85% ರಾಜಕಾರಣಿಗೆ ಪರಿಸರದ ಬಗ್ಗೆಯೇ ಗೊತ್ತಿಲ್ಲ. ಜನ ಪರಿಸರಕ್ಕಾಗಿ ಒಟ್ಟಾಗಬೇಕು. ಜನರೆಲ್ಲ ಈಗಲಾದರೂ ಎಚ್ಚೆತ್ತು ಎಲ್ಲಾರೂ ಸೇರಿ ಪರಿಸರವನ್ನು ಉಳಿಸಬೇಕು. ಇದು ನಮ್ಮ ನೋವು. ರಾಜಕಾರಣಿಗಳನ್ನು ನಾವು ಬೈಯುವುದು ಇರಲೀ ನಮಗೆ ನಾವೆಲ್ಲ ಸರಿಯಾಗಿ ಮೊದಲು ಪರಿಸರದತ್ತ ಪ್ರಜ್ಞೆ, ಕಾಳಜಿ ಮನೋಭಾವ ಬೆಳೆಸಿಕೊಳ್ಳಬೇಕು” ಎಂಬ ಮನವಿಜೋಸೆಫ್‌ ಹೂವರ್‌ರವದ್ದಾಗಿದೆ.

“ ಪಶ್ಚಿಮಘಟ್ಟಗಳ ಸಾಲಿನ ಶಿವಮೊಗ್ಗಕ್ಕೆ ಸೇರಿರುವ ಪರಿಸರವಾದಿ ಅಖಿಲೇಶ್‌ ಚಿಪ್ಪಳ್ಳಿ ಪ್ರಕಾರ, “ಬರ” ಎನ್ನುವುದು ಪ್ರಕೃತಿಯೇ ಕೆಲವು ಪ್ರಬೇಧಗಳನ್ನು ಸರಿಪಡಿಸಲು ನೈಸರ್ಗಿವಾಗಿ ಆಗುತ್ತಿತ್ತು. ಆದರೆ, ಹವಾಮಾನ ಬದಲಾವಣೆ ಇಷ್ಟಾಗುತ್ತಿರಲಿಲ್ಲ. ಈಗಿನ ಬರವೇ ಬೇರೆ, ಅರಣ್ಯನಾಶವಾಗಿರುವುದೇ ಬರಕ್ಕೆ ಕಾರಣ. ಕಾರ್ಬನ್‌ ಅಂಶ ಹೆಚ್ಚಾದ ವಾತಾವರಣ ಬಿಸಿ ಹೆಚ್ಚುತ್ತಿದೆ. 14ಡಿಗ್ರಿ ಸಾಮಾನ್ಯ ಗ್ಲೋಬಲ್‌ ಅವರೇಜ್‌ ಆಗಿದ್ದು, ಸದ್ಯಕ್ಕೆ ಇದು 15ಡಿಗ್ರಿಯವರೆಗೆ ಆಗಿದೆ. ಇದು ಹೆಚ್ಚಾಗಿ 16 ಡಿಗ್ರಿಗೆ ಹೋದರೆ ನಾವೂ ಉಳಿಯುವದು ಕಷ್ಟ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ.ಇದು ಜಾಗತಿಕ ವಿದ್ಯಾಮಾನವಾದರೆ, ಜಾಗತೀಕರಣದ ಪರಿಣಾಮ ಪ್ರಾಣಿಗಳ ಆವಾಸಸ್ಥಾನ, ಸೇರಿದಂತೆ ಜೀವ ವೈವಿ‍ಧ್ಯತೆಯ ನಾಶವಾಗುತ್ತಿರುವುದು ಪಶ್ಚಿಮಘಟ್ಟಗಳ ನಾಶವೂ ಮುಖ್ಯ ಕಾರಣ.

ಅತಿ ಹೆಚ್ಚು ಅರಣ್ಯ ಒತ್ತುವರಿಯಾಗಿರುವ ಕುಖ್ಯಾತಿಗೆ ಶಿವಮೊಗ್ಗ ಜಿಲ್ಲೆ ಪಾತ್ರವಾಗಿದೆ. ವೈಜ್ಞಾನಿಕವಾಗಿ ಇದು ಸಾಬೀತಾಗಿದೆ.ಮರಗಳ ಸಾಂಧ್ರತೆ ತುಂಬಾ ಇದ್ದಾಗ ಸಾವಿರಾರು ಎಲೆಗಳ ಮೇಲೆ ಬಿದ್ದ ನೀರು ಬಿದ್ದು ಭೂಮಿ ಇಂಗುತ್ತದೆ. ಆದರೆ, ಅಕೇಶಿಯಾ ನೆಡುತೋಪುಗಳು ಸಹ ಕಾಡಾಗಿತ್ತು. ಅಭಿವೃದ್ಧಿಯ ಹೊಡೆತವೇ ಈ ಬರಕ್ಕೆ ಕಾರಣ”.

ಇದನ್ನು ನೋಡಿ : ಸಾಂವಿಧಾನಿಕ ವ್ಯವಸ್ಥೆಯನ್ನು ದುರ್ಬಲಗೊಳಿಸಿದ ಬಿಜೆಪಿ ಸರ್ಕಾರವನ್ನು ಕಿತ್ತೆಸೆಯಬೇಕು- ಎಂ ಎ ಬೇಬಿ

Donate Janashakthi Media

Leave a Reply

Your email address will not be published. Required fields are marked *