ತಿರುವನಂತಪುರ-ಕಾಸರಗೋಡು ನಡುವೆ ಸೆಮಿ ಹೈಸ್ಪೀಡ್ ರೈಲ್‌ ಮ್ಯಾಪ್‌ ಸಿದ್ದ

  • ಭೂಮಿ, ಮನೆ ಕಳೆದುಕೊಂಡವರ ಪರಿಹಾರಕ್ಕೆ 13 ಸಾವಿರ ಕೋಟಿ ಹಣ ಮೀಸಲಿಟ್ಟ ಎಡರಂಗ ಸರಕಾರ
  • ತಿರುವನಂತಪುರದಿಂದ ಕಾಸರಗೋಡಿಗೆ ಕೇವಲ 4 ಗಂಟೆಗಳಲ್ಲಿ ಪ್ರಯಾಣ
  • ಭೂಸ್ವಾಧೀನವನ್ನು ಕಡಿಮೆ ಮಾಡುವ ಭಾಗವಾಗಿ ಕಟ್ & ಕವರ್ ನಿರ್ಮಾಣ ವಿಧಾನ ಜಾರಿಗೆ

ತಿರುವನಂತಪುರಂ: ತಿರುವನಂತಪುರಂ ನಿಂದ ಕಾಸರಗೋಡಿಗೆ ಇನ್ನು ಮುಂದೆ ಸೆಮಿ ಹೈಸ್ಪೀಡ್‌ ರೈಲು ಸಂಚರಿಸಲಿದೆ. ಕೇರಳದ ಕನಸಿನ ಯೋಜನೆ ನನಸಾಗುವ ಹಾದಿಯಲ್ಲಿದೆ. ಇನ್ನು ಮುಂದೆ ತಿರುವನಂತಪುರದಿಂದ ಕಾಸರಗೋಡಿಗೆ ಕೇವಲ 4 ಗಂಟೆಗಳಲ್ಲಿ ಪ್ರಯಾಣಿಸಬಹುದು. ಇಂತಹದ್ದೊಂದು ಬಹು ಮಹತ್ವದ ಯೋಜನೆಗೆ ಎಡ ರಂಗ ಸರಕಾರ ಚಾಲನೆ ನೀಡಿದೆ.

ಈ ಯೋಜನೆಯನ್ನು ಕೇರಳ ಸರ್ಕಾರ ಮತ್ತು ರೈಲ್ವೇ ಸಚಿವಾಲಯದ ಜಂಟಿ ಸಹಭಾಗಿತ್ವದ ಕೇರಳ ರೈಲು ಅಭಿವೃದ್ಧಿ ನಿಗಮವು ಮುನ್ನಡೆಸುತ್ತದೆ. ತಿರುವನಂತಪುರದಿಂದ ಕಾಸರಗೋಡಿಗೆ 4 ಗಂಟೆಗಳಲ್ಲಿ ಪ್ರಯಾಣಿಸುವ ಸೌಲಭ್ಯ ಒದಗಿಸುವ ಯೋಜನೆ ಇದಾಗಿದೆ. ಕೇರಳದ ರಸ್ತೆಗಳಲ್ಲಿ ಟ್ರಾಫಿಕ್ ಅಪಘಾತಗಳು ಮತ್ತು ರಸ್ತೆ ಅಪಘಾತಗಳು  ಸರಕಾರಕ್ಕೆ ಹಾಗೂ ಜನರಲ್ಲಿ ದೊಡ್ಡ ಚಿಂತೆಯನ್ನು ಸೃಷ್ಟಿಸಿವೆ. ಇದರೊಂದಿಗೆ ಜನನಿಬಿಡ ರಸ್ತೆಯಲ್ಲಿ ಪರಿಸರ ಮಾಲಿನ್ಯವೂ ದೊಡ್ಡ ಸಮಸ್ಯೆಯಾಗಿದೆ.  ರಾಜ್ಯದ ಒಂದು ತುದಿಯಿಂದ ಇನ್ನೊಂದು ತುದಿಗೆ ಪ್ರಯಾಣಿಸಲು 16 ಗಂಟೆಗಳವರೆಗೆ ಸಮಯ ತೆಗೆದುಕೊಳ್ಳುತ್ತದೆ. ಇದು ಬದಲಾಗಬೇಕಿದೆ. ಅದಕ್ಕೆ ಅರೆ ವೇಗದ ರೈಲು ಅತಿ ದೊಡ್ಡ ಪರಿಹಾರವಾಗಿದೆ ಎಂಬುದನ್ನು ಅರಿತ ಎಡರಂಗ ಸರಕಾರ ಈ ನಿರ್ಧಾರಕ್ಕೆ ಬಂದಿದೆ.

ಈ ಯೋಜನೆಯಿಂದಾಗಿ ಕೇರಳದಲ್ಲಿ ಸೌಕರ್ಯ ವಲಯದಲ್ಲಿ ದೊಡ್ಡ ಬದಲಾವಣೆಗಳಾಗುತ್ತವೆ  ಎಂದು ಹೇಳಲಾಗುತ್ತಿದೆ. ಯೋಜನೆಗೆ ಸಂಬಂಧಿಸಿದ ನಿರ್ದಿಷ್ಟ ರೈಲು ಮಾರ್ಗವನ್ನು ಹಾದುಹೋಗುವ ಕ್ಷೇತ್ರಗಳ ರೋಡ್‌ ಮ್ಯಾಪ್‌ ಆಗಲೇ ಸಿದ್ದ ಗೊಂಡಿದೆ. ಯೋಜನೆಯ ವಿವರಗಳನ್ನು  ಎಡರಂಗ ಸರ್ಕಾರ ಜನರ ಮುಂದೆ ವಿವರಿಸಿದೆ. ಈ ವಿಚಾರದಲ್ಲಿ ಸರಕಾರ ಪಾರದರ್ಶಕ ಧೋರಣೆ ಹೊಂದಿದೆ. ಅತ್ಯಾಧುನಿಕ ತಂತ್ರಜ್ಞಾನವಾದ ಲಿಡಾರ್ ರಿಮೋಟ್ ಸೆನ್ಸಿಂಗ್ ವ್ಯವಸ್ಥೆಯ ಲಾಭ ಪಡೆದು ಭೂಸ್ವಾಧೀನ ಸಮೀಕ್ಷೆ ನಡೆಸುತ್ತಿದೆ. 63,941 ಕೋಟಿ ವೆಚ್ಚದ ಯೋಜನೆಗೆ ಪುನರ್ವಸತಿ ಸೇರಿದಂತೆ 1,383 ಹೆಕ್ಟೇರ್ ಭೂಮಿ ಅಗತ್ಯವಿದೆ. ಇದು 1,198 ಹೆಕ್ಟೇರ್ ಖಾಸಗಿ ಭೂಮಿಯನ್ನು, 185 ಹೆಕ್ಟೇರ್ ರೈಲ್ವೆ ಭೂಮಿ ಹೊಂದಿದೆ.

ಪ್ರಸ್ತುತ ಯೋಜನೆಯನ್ನು ನಿರ್ದಿಷ್ಟ ಮಾರ್ಗದಲ್ಲಿ ಹಾದುಹೋಗುವ 11 ಜಿಲ್ಲೆಗಳಲ್ಲಿ ಪೂಜಾ ಸ್ಥಳಗಳು, ಕ್ಷೇತ್ರಗಳು ಮತ್ತು ಗುಹೆಗಳಿಗೆ ಪರಿಣಾಮ ಬೀರದ ರೀತಿಯಲ್ಲಿ ವಿತರಿಸಲಾಗಿದೆ. ಈ ಯೋಜನೆಯು ರಾಜ್ಯಾದ್ಯಂತ ಮನೆಗಳು ಸೇರಿದಂತೆ 9,314 ಕಟ್ಟಡಗಳಿಗೆ ಪರಿಣಾಮ ಬೀರುತ್ತದೆ. ಅವುಗಳನ್ನು ಗರಿಷ್ಠ ಮಟ್ಟಕ್ಕೆ ಇಳಿಸಲು ಕ್ರಮಕೈಗೊಳ್ಳಲಾಗುತ್ತಿದೆ ಎಂದು ಎಡರಂಗ ಸರಕಾರ ತಿಳಿಸಿದೆ. ಕೆಡವದೆ ಮನೆಗಳನ್ನು ಬದಲಾಯಿಸುವುದು ಸೇರಿದಂತೆ ಸಾಧ್ಯವಾದಷ್ಟು ಮನೆ ಮತ್ತು ಕಟ್ಟಡಗಳನ್ನು ತಪ್ಪಿಸಲು ತಂತ್ರಜ್ಞಾನವೂ ಇದರೊಂದಿಗೆ ಯೋಜಿಸುತ್ತಿದೆ. ಭೂಸ್ವಾಧೀನವನ್ನು ಕಡಿಮೆ ಮಾಡುವ ಭಾಗವಾಗಿ ಕಟ್ & ಕವರ್ ನಿರ್ಮಾಣ ವಿಧಾನವನ್ನು ಸಹ ಅವಲಂಬಿಸಿದೆ.ಭೂಮಿ ಸ್ವಾಧೀನಪಡಿಸಿಕೊಂಡಾಗಲೆಲ್ಲಾ ಪುನರ್ವಸತಿ ಕಾನೂನಿನ ಪ್ರಕಾರ, ಗ್ರಾಮ ಪ್ರದೇಶಗಳಲ್ಲಿ ಮಾರುಕಟ್ಟೆ ಬೆಲೆಗಿಂತ ಗರಿಷ್ಠ ನಾಲ್ಕು ಪಟ್ಟು ಮತ್ತು ನಗರಗಳಲ್ಲಿ ಎರಡು ಪಟ್ಟು ಪರಿಹಾರವನ್ನು ನೀಡಲು ನಿರ್ಧರಿಸಿದೆ. ಭೂಸ್ವಾಧೀನ ಮತ್ತು ಪರಿಹಾರಕ್ಕಾಗಿ 13,265 ಕೋಟಿ ರೂ. ನಿಗದಿ ಪಡಿಸಿದೆ. ಇದರಲ್ಲಿ ಪುನರ್ವಸತಿಗೆ 1,730 ಕೋಟಿ ಹಾಗೂ ಮನೆಗಳ ಪರಿಹಾರಕ್ಕೆ 4,460 ಕೋಟಿ ರೂ.ಗಳನ್ನು ಕಾಯ್ದಿರಿಸಲಾಗಿದೆ.

ಈ ರೈಲು ಯೋಜನೆಯಿಂದಾಗಿ  529.45 ಕಿ. ಮೀ. ಅಂತರವನ್ನು 4 ಗಂಟೆಯಲ್ಲಿ ಕ್ರಮಿಸಬಹುದಾಗಿದೆ. ಪ್ರಸ್ತುತ ತಿರುವನಂತಪುರ-ಕಾಸರಗೋಡು ನಡುವಿ ಪ್ರಯಾಣದ ಅವಧಿ 12 ಗಂಟೆಗಳು ಇದೆ. ಸೆಮಿ ಹೈಸ್ಪೀಡ್ ರೈಲು ಯೋಜನೆಯಿಂದಾಗಿ ತಿರುವನಂತಪುರ-ಎರ್ನಾಕುಲಂ-ಕೊಚ್ಚಿ ಮಾರ್ಗವನ್ನು ರೈಲು 90 ನಿಮಿಷಗಳಲ್ಲಿ ಕ್ರಮಿಸಲಿದೆ ಎಂದು ಅಂದಾಜಿಸಲಾಗಿದೆ.

Donate Janashakthi Media

Leave a Reply

Your email address will not be published. Required fields are marked *