ಮೈಸೂರು: ಗಣೇಶ ವಿಸರ್ಜನೆ ಸಂದರ್ಭದಲ್ಲಿ ದಾವಣಗೆರೆಯಲ್ಲಿ ನಡೆದ ಕಲ್ಲುತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮೈಸೂರಿನ ಮಂಡಕಳ್ಳಿ ಏರ್ಪೋರ್ಟ್ ನಲ್ಲಿ ಬಿಜೆಪಿ ಕುಮ್ಮಕ್ಕಿನಿಂದಲೇ ಗಣೇಶ ವಿಸರ್ಜನೆಯ ವೇಳೆ ಗಲಾಟೆ ನಡೆದಿದೆ ಎಂದು ಸಿಎಂ ಸಿದ್ದರಾಮಯ್ಯ ಗಂಭೀರವಾದ ಆರೋಪ ಮಾಡಿದರು. ಗಣೇಶ
ಬಿಜೆಪಿಯವರು ಕೋಮುವಾದಿಗಳು. ಬಿಜೆಪಿಯವರು ನೀಡುತ್ತಿರುವ ಹೇಳಿಕೆಗಳಿಂದ ಗಲಾಟೆ ನಡೆಯುತ್ತಿದೆ. ಪ್ರತಿನಿತ್ಯ ಏನು ಗಲಾಟೆ ಆಗುತ್ತಿಲ್ಲ. ಈ ವೆರೆಗೆ ಎರಡು ಪ್ರಕರಣ ನಡೆದಿದೆ. ಘಟನೆ ಸಂಬಂಧ ಸೂಕ್ತವಾದ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ. ಅಲ್ಲದೆ ಮುಂಜಾಗ್ರತ ಕ್ರಮ ಕೈಗೊಳ್ಳಲು ತಿಳಿಸಿದ್ದೇನೆ. ನಾಗಮಂಗಲ ಕೇಸ್ ನಲ್ಲಿ ಡಿವೈಎಸ್ಪಿ ಹಾಗು ಇನ್ಸ್ಪೆಕ್ಟರ್ ನನ್ನು ಸಸ್ಪೆಂಡ್ ಮಾಡಿದ್ದೇನೆ ಎಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಿಳಿಸಿದರು.
ಇದನ್ನೂ ಓದಿ: ಬಳ್ಳಾರಿ| ನಕಲಿ ಇಮೇಲ್ ಬಳಸಿ 2.11 ಕೋಟಿ ರೂ. ವಂಚಿಸಿದ ಆರೋಪಿಯ ಬಂಧನ
ಇನ್ನೂ BDA ನಲ್ಲಿ ಡಿನೋಟಿಫೈ ಪ್ರಕರಣಕ್ಕೆ ಸಂಬಂಧಿಸಿದಂತೆ, ನಿನ್ನೆ ಸಚಿವ ಕೃಷ್ಣ ಭೈರೇಗೌಡ ಹಾಗೂ ದಿನೇಶ್ ಗುಂಡೂರಾವ್ ಯಡಿಯೂರಪ್ಪ ಹಾಗೂ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ದಾಖಲೆ ಬಿಡುಗಡೆ ಮಾಡಿದ್ದಾರೆ. ಆ ಫೈಲ್ ತರಿಸಿಕೊಂಡು ಪರಿಶೀಲನೆ ಮಾಡುತ್ತೇನೆ. ಕುಮಾರಸ್ವಾಮಿ ಎಲ್ಲಾ ಆರೋಪಕ್ಕೂ ಹಿಟ್ ಅಂಡ್ ರನ್ ರೀತಿ ಮಾತನಾಡುತ್ತಾರೆ. ಎಚ್ ಡಿ ಕುಮಾರಸ್ವಾಮಿ ಕೇಂದ್ರ ಸಚಿವರು, ಗಂಭೀರವಾಗಿ ಮಾತನಾಡಬೇಕು. ಈ ರೀತಿ ಸುಖಾ ಸುಮ್ಮನೆ ಏನೇನೋ ಹೇಳಬಾರದು ಎಂದು ಮೈಸೂರಿನಲ್ಲಿ ಎಚ್ ಡಿ ಕುಮಾರಸ್ವಾಮಿ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಇನ್ನೂ ಅತ್ಯಾಚಾರ ಪ್ರಕರಣದಲ್ಲಿ ಮುನಿರತ್ನ ಬಂಧನದ ವಿಚಾರವಾಗಿ ಮಾತನಾಡಿದ ಅವರು, ಪತ್ರದ ಮೇಲೆ ಕ್ರಮ ಕೈಗೊಳ್ಳಿ ಎಂದು ಗೃಹ ಸಚಿವರಿಗೆ ಹೇಳಿದ್ದೇನೆ. ಶಾಸಕ ಮುನಿರತ್ನ ವಿರುದ್ಧ 3 ಗಂಭೀರ ಪ್ರಕರಣಗಳು ಇವೆ. ಹೀಗಾಗಿ ವಿಶೇಷ ತನಿಖಾ ತಂಡ ಅಗತ್ಯ ಇದೆ ಎಂದು ಕೇಳಿದ್ದಾರೆ. ಈ ಬಗ್ಗೆ ಗೃಹ ಸಚಿವರು ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳುತ್ತಾರೆ ಎಂದು ಮೈಸೂರಿನ ಮಂಡಕಳ್ಳಿ ಏರ್ಪೋರ್ಟ್ ನಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದರು.
ಇದನ್ನೂ ನೋಡಿ: ಸುಗ್ರೀವಾಜ್ಞೆ ಮೂಲಕ ಒಳ ಮೀಸಲಾತಿ ಜಾರಿ ಮಾಡಿ – ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಕ್ಕೂಟ ಆಗ್ರಹ